ಕಾವ್ಯ ಮನಸ್ಸುಗಳನ್ನು ಕಟ್ಟಬೇಕು ಜನರ ನೋವಿಗೆ ಸ್ಪಂಧಿಸಬೇಕು: ಅಲ್ಲಾಗಿರಿರಾಜ

0
18

ಸುರಪುರ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಘಜಲ್ ಕವಿ ಅಲ್ಲಾಗಿರಿರಾಜ್ ಮಾತನಾಡಿ, ಕವಿತೆ ಯಾವತ್ತಿಗೂ ಜನರ ನೋವಿನ ಜತೆಗೆ ಹಾಡಾಗಬೇಕು, ಇಲ್ಲದಿದ್ದರೆ ಅದು ಓದುಗರನ್ನು ಕಾಡುವಂತಿರಬೇಕು, ಅಂದಾಗ ಮಾತ್ರ ಕವಿ ಜನಕವಿಯಗಿ ಉಳಿಯಲು ಸಾಧ್ಯ. ಕವಿ, ಕಾವ್ಯ ಮನಸ್ಸುಗಳನ್ನು ಕಟ್ಟಬೇಕು , ಸದಾ ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕು ಎಂದರು.

Contact Your\'s Advertisement; 9902492681

ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ಗಜಲ್ ಕವಿ ಅಲ್ಲಾಗಿರಿರಾಜ್ ಅವರ ಕಾವ್ಯ ಸರಕಾರ ರೊಕ್ಕ ಮುದ್ರಿಸಬಹುದು, ತುಂಡು ರೊಟ್ಟಿಯನ್ನಲ್ಲ ಇದು ಇಂದು ರೈತ ಹೋರಾಟದ ಅಸ್ತ್ರವಾಗಿದೆ, ಗೋಡೆ ಬರಹವಾಗಿದೆ, ಭಿತ್ತಯಲ್ಲಿ ಸ್ಥಾನ ಪಡೆದಿದೆ, ಕೋಟ್ಯಂತರ ಜನರನ್ನು ತಲುಪಿದೆ. ಇದು ಜನಪರ ಕವಿಯ ಕಾವ್ಯದ ಅಸಲಿ ತಾಕತ್ತು ಎಂದು ಹೇಳಿದರು.

ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬೀರಣ್ಣ ಬಿ.ಕೆ ಆಲ್ದಾಳ್, ಕೆಂಭಾವಿ ವಲಯ ಕಸಾಪ ಅಧ್ಯಕ್ಷ ಡಾ;ಯಂಕನಗೌಡ ಪಾಟೀಲ್, ಅಕ್ಷರ ದಾಸೋಹದ ಅಧಿಕಾರಿ ಮೌನೆಶ ಕಂಬಾರ್ ಭಾಗವಹಿಸಿದ್ದರು. ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಾದ ಸಾಹೇಬಗೌಡ ಬಿರಾದಾರ್,ವೀರಣ್ಣ ಕಲಕೇರಿ,ನೀಲಮ್ಮ ನಾಗರಬೆಟ್ಟ.ಪಾರ್ವತಿ ದೇಸಾಯಿ,ನೀಲಮ್ಮ ಮಲ್ಲೆ,ಜ್ಯೋತಿ ದೇವಣಗಾಂವ್,ಪತ್ರಕರ್ತ ರಾಜು ಕುಂಬಾರ, ನಾಗರಾಜ್ ಜಮದರಖಾನಿ,ಗುರುರಾಜ್ ಎಸ್ ಜೋಷಿ, ಭಾಗ್ಯ ದೊರೆ,ಕನಕಪ್ಪ ವಾಗಿಣಗೇರಿ,ಮಹ್ಮದ್ ಸರ್ವರ್, ಮಡಿವಾಳಪ್ಪ ಪಾಟೀಲ್,ಬಸವರಾಜ್ ಭೂತೆ,ಶರಣಬಸಪ್ಪ ಯಾಳವಾರ್, ಈಶ್ವರ ಶಹಪುರಕರ್, ಶರಣಗೌಡ ಪಾಟೀಲ್ ಜೈನಾಪುರ,ಪಂಡಿತ ನಿಂಬೂರೆ,ವಿಠ್ಠಲ ಚವ್ಹಾಣ್,ದೇವೇಂದ್ರಪ್ಪ ಕರಡಕಲ್,ಸುರೇಶ ಪತ್ತಾರ್,ವಿದ್ಯಾಕುಮಾರ್ ಬಡಿಗೇರ್, ದೊಡ್ಡ ಮಲ್ಲಿಕಾರ್ಜುನ ಹುದ್ದಾರ್,ಎ.ಕೆ ಕಮಲಾಕರ್,ಈರಯ್ಯಕೊಳ್ಳಿಮಠ,ಕೃಷ್ಣಮೂರ್ತಿ,ಮುದ್ದಪ್ಪ ಅಪ್ಪಾಗೋಳ್,ಪ್ರಕಾಶ ಅಲಬನೂರ್,ಶ್ರೀಶೈಲ ಹಡಗಲ್ ರಾಮಪ್ರಸಾದ್ ತೋಟದ್,ಬಸವರಾಜ್ ಬಾನಾರ್,ಶಕುಂತಲಾ ಹಡಗಲಿ,ಪ್ರಕಾಶ ವಜ್ಜಲ್, ರಾಘವೇಂದ್ರ ಭಕ್ರಿ ಇವರುಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ರಾಜಶೇಖರ ದೇಸಾಯಿ ಸ್ವಾಗತಿಸಿದರು. ರಾಠೋಡ್ ಹೆಚ್ ನಿರೂಪಿಸಿದರು. ವೆಂಕಟೇಶಗೌಡ ಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here