ಕಲಬುರಗಿ: ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಮರಾಠಿ ಮಾನ್ನಾಡುವವರು ಇರುವ ಪ್ರದೇಶಕ್ಕೆ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂಬ ಹೇಳಿಕೆ, ಮಹಾರಾಷ್ಟದ ಮರಾಠಿ ಜನರನ್ನು ಮರಾಠಿ ಭಾಷೆಯ ಆಧಾರದ ಮೇಲೆ ಮುರ್ಖರನ್ನಾಗಿ ಮಾಡಿ ಪ್ರಚೋದನೆ ನೀಡುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ತನ್ನ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುಲು ಮರಾಠಿ ಹೆಸರಿನ ನೀಚ ರಾಜಕಾರಣ ಮಾಡುತ್ತಿದ್ದಾರೆಂದು ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಬೆಳಗಾವಿ ಸಮಸ್ಯೆ ಬಗಹರಿ ಕೊಳ್ಳಲು ಮಹಾಜನ ಆಯೋಗ ಕೂಡಿಸಬೇಕು ಮತ್ತು ಅದರ ವರದಿಗೆ ಮಹಾರಾಷ್ಟ ಬದ್ಧವಾಗಿರುತ್ತದೆ ಎಂದು ಒಪ್ಪಿಕೊಂಡಿರುವದು ಇತಿಹಾಸವೆ ಸಾಕ್ಷಿಯಾಗಿದೆ. ಮಹಾಜನ ವರದಿ ನಿಷ್ಪಕ್ಷಪಾತವಾಗಿ ಸಮೀಕ್ಷೆ ಮಾಡಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿದೆ. ಮರ್ದ ಮರಾಠಾ ಎಂದು ಹೇಳಿಕೊಳ್ಳುವ ಡೊಂಗಿ ಮರಾಠಾ ಕ್ಷುಲ್ಲಕ ರಾಜಕೀಯ ನಾಯಕರು ತಾವೆ ಆಯೋಗ ರಚನೆ ಮಾಡಲು ಒತ್ತಾಯಿಸಿ ಈಗ ಅದೆ ಮಹಾಜನ ಆಯೋಗದ ವರದಿಗೆ ಒಪ್ಪದೆ ಮರಾಠಿ ಹೆಸರಿನ ಮೇಲೆ ನಿರಂತರ ರಾಜಕಾರಣ ಮಾಡುತ್ತಾ ಬರುತ್ತಿರುವದು ಖಂಡನೀಯವಾಗಿದೆ ಎಂದು ಟೀಕಿಸಿದ್ದಾರೆ.
ಉದ್ಧವ ಠಾಕ್ರೆ ತನ್ನ ವಯಕ್ತಿಕ ಹಿತಾಸಕ್ತಿಗಾಗಿ ಭಾರತೀಯ ಮರಾಠಾ ಸಂಸ್ಕೃತಿ ಮರೆತು ವೇಷ, ಭೋಷ,ತನ್ನ ಅಸ್ತಿತ್ವವನ್ನೆ ಮಾರಿಕೊಂಡು ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡು ತನ್ನ ಸ್ಥಾನ ಉಳಿಸಿಕೊಳ್ಳುಲು ಮರಾಠಿ ಹೆಸರಿನ ನೀಚ ರಾಜಕಾರಣ ಮಾಡುತ್ತಿರುವದು ಮರಾಠಿಗರು ಅರ್ಥ ಮಾಡಿಕೊಳ್ಳಬೇಕು. ಮಹಾರಾಷ್ಟ್ರ ದಲ್ಲಿ ಇರುವ ಮುಂಬಯಿ ಸೇರಿದಂತೆ ಕನ್ನಡ ಮಾತನಾಡುವ ಮಹಾರಾಷ್ಟ್ರದ ಹತ್ತು ಜಿಲ್ಲೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಕೇಂದ್ರಾಡಳಿತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.