ಶಿಕ್ಷಕ ಕುತುಬುದ್ದೀನ್ ಮಕ್ತಾಪುರ ವಯೋನಿವೃತ್ತಿ ಅಂಗವಾಗಿ ಬೀಳ್ಕೊಡುಗೆ ಸಮಾರಂಭ

0
69

ಸುರಪುರ: ತಾಲೂಕಿನ ಪೇಠ ಅಮ್ಮಾಪುರದ ಸಗರನಾಡು ಶಿಕ್ಷಣ ಸಂಸ್ಥೆಯಲ್ಲಿ ಕಳೆದ ೨೯ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕುತುಬುದ್ದೀನ್ ಮಕ್ತಾಪುರ ಅವರ ವಯೋನಿವೃತ್ತಿ ಅಂಗವಾಗಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಯ ಮುಖ್ಯಸ್ಥ ತಿಮ್ಮಯ್ಯ ಪುರ್ಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕುತುಬುದ್ದೀನ್ ಮಕ್ತಾಪುರ ಅವರ ಸೇವೆ ಈ ಸಂಸ್ಥೆಗೆ ಅನನ್ಯವಾಗಿದೆ.ಸಂಸ್ಥೆಯ ಹುಟ್ಟಿನಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಸೇವೆ ಸಲ್ಲಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳ ಮನದಲ್ಲಿ ಅಚ್ಚಾಗಿರುವ ಶಿಕ್ಷರಾಗಿದ್ದಾರೆ ಎಂದರು.

Contact Your\'s Advertisement; 9902492681

ವಯೋನಿವೃತ್ತಿ ಹೊಂದಿದ ಶಿಕ್ಷಕ ಕುತುಬುದ್ದೀನ್ ಮಕ್ತಾಪುರ ಮಾತನಾಡಿ,ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರೆಗೆ ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ ಶಿಕ್ಷಕ ವೃಂದಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.ಅಲ್ಲದೆ ಇಂದು ವಯೋ ನಿವೃತ್ತಿ ಸಂದರ್ಭದಲ್ಲಿ ಇಂತಹ ಅದ್ಧೂರಿಯಾದ ಕಾರ್ಯಕ್ರಮದ ಮೂಲಕ ಬೀಳ್ಕೊಡುಗೆ ಹಮ್ಮಿಕೊಂಡಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ,ಕುತುಬುದ್ದೀನ್ ಮಕ್ತಾಪುರ ನನ್ನ ಎರಡು ದಶಕಗಳ ಆತ್ಮೀಯ ಗೆಳೆಯ ಸದಾಕಾಲ ನನ್ನ ಮನದಲ್ಲಿ ಅಚ್ಚಾದ ಕವಿ,ಅವರ ಮುಂದಿನ ನಿವೃತ್ತಿ ಜೀವನ ಸುಖಮಯವಾಗಿರಲಿ.ಅಲ್ಲದೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಅವರ ನಿವೃತ್ತಿ ಬದುಕಿಗೆ ಆಸರೆಯಾಗುವ ಮೂಲಕ ಅವರಿಗೆ ಜೊತೆಯಾಗಬೇಕೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಗರನಾಡು ಪ್ರೌಢ ಶಾಲೆಯ ಮುಖ್ಯಗುರು ಚಂದಪ್ಪ ಯಾದವ್ ಮಾತನಾಡಿ,ಕುತುಬುದ್ದೀನ್ ಅವರು ನಾವು ಸುಮಾರು ಮೂರು ದಶಕಗಳಿಂದ ಒಟ್ಟಾಗಿದ್ದು ಸೇವೆ ಸಲ್ಲಿಸಿದವರು,ತಮ್ಮ ಸೇವೆಯುದ್ದಕ್ಕೂ ಒಂದು ದಿನವು ಯಾರಲ್ಲೂ ಬೇಸರವನ್ನುಂಟು ಮಾಡದೆ,ಎಲ್ಲರ ಮೆಚ್ಚುಗೆಯನ್ನು ಗಳಿಸಿದವರು,ಅಲ್ಲದೆ ಕಳೆದ ೨೯ ವರ್ಷಗಳಿಂದ ಅವರ ಸೇವೆಯನ್ನು ಅರಿತು ಎಲ್ಲಾ ವಿದ್ಯಾರ್ಥಿಗಳು ಇಂದು ಅವರನ್ನು ಸನ್ಮಾನಿಸಿ ಗೌರವಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.ಆದರೆ ಅವರನ್ನು ನಾವು ಈ ಮುಂದೆ ಜೊತೆಯಾಗಿರುವುದರಿಲ್ಲ ಎಂಬುದು ನೋವುಂಟು ಮಾಡಿದೆ,ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಸಾಹಿತಿ ನಬೀಲಾಲ ಮಕಾನಂದರ ಹಾಗು ಸಾಹಿತಿ ಗೋಪಣ್ಣ ಯಾದವ್ ಮತ್ತು ಶಿಕ್ಷಕ ಕನಕಪ್ಪ ವಾಗಣಗೇರಾ ನಬಿಲಾಲ ಮಕಾಂದಾರ ಮಲ್ಲಿಕಾರ್ಜುರಡ್ಡಿ ಕೋಳಿಹಾಳ ಮಾತನಾಡಿದರು.ನಂತರ ಕುತುಬುದ್ದೀನ್ ಮಕ್ತಾಪುರ ದಂಪತಿಗಳನ್ನು ಅವರ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಾಗು ಅಮ್ಮಾಪುರ ಜಾಲಿಬೆಂಚಿ ವಾಗಣಗೇರಾ ತಳವಾರಗೇರಾ ಸೇರಿ ಅನೇಕ ಶಾಲೆಗಳ ಶಿಕ್ಷಕರು, ಹಿರಿಯರು ಸನ್ಮಾನಿಸಿ ಗೌರವಿಸಿದರು.ವೇದಿಕೆ ಮೇಲೆ ಸಣ್ಣ ಹಣಮಂತ ಕಕ್ಕೇರಾ ಬಿಆರ್‌ಪಿ ಕಾಂತೇಶ,ಅಮ್ಮಾಪುರ ಬಿಆರ್‌ಪಿ ಶಿವಾನಂದ,ಪಿಕೆಜಿಬಿ ಅಮ್ಮಾಪುರ ಶಾಖೆ ವ್ಯವಸ್ಥಾಪಕ ಶಾಂತಕುಮಾರ,ಇಸಿಒ ಬಸವರಾಜ ಇದ್ದರು.

ಶಿಕ್ಷಕ ಬಸವಣ್ಣಪ್ಪ ಅಂಗರಗಿ ನಿರೂಪಿಸಿದರು,ಚುಸಾಪ ಅಧ್ಯಕ್ಷ ಬೀರಣ್ಣ ಆಲ್ಧಾಳ ಕುತುಬುದ್ದೀನ್ ಅವರ ಕುರಿತು ಸ್ವರಚಿತ ಚುಟುಕು ವಾಚಿಸಿದರು,ಶಿಕ್ಷಕ ಗುರು ಶಾಬಾದಿ ಸ್ವಾಗತಿಸಿದರು,ಸಂತೋಷ ರಾಜಲಬಂಡಿ ವಂದಿಸಿದರು.ಶಾಲೆಯ ಎಲ್ಲಾ ಶಿಕ್ಷಕರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here