ಖಾಯಂ ಶಿಕ್ಷಕರ ನೇಮಕ, ಮೂಲಸೌಕರ್ಯಕ್ಕಾಗಿ ಎಸ್.ಎಫ್.ಐ ಪ್ರತಿಭಟನೆ

0
37

ಕವಿತಾಳ: ಪಟ್ಟಣದ ಉರ್ದು ಪ್ರೌಢ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಲು ಹಾಗೂ ವರ್ಗಾವಣೆಯಾಗಿರುವ ಮಹ್ಮದ್ ಯೂಸೂಫ್ ನಾಗೂರ ಪ್ರಭಾರಿ ಮುಖ್ಯಗುರುಗಳನ್ನ ಪುನ: ಕವಿತಾಳಕ್ಕೆ ನೇಮಿಸಲು DDPI ಯವರು ನೀಡಿದ ಆದೇಶ ಉಲ್ಲಂಘನೆ ಮಾಡುತ್ತಿರುವ ದೇವದುರ್ಗ BEO ನಡೆ ಖಂಡಿಸಿ & ಶಾಲೆಗೆ ಖಾಯಂ ಶಿಕ್ಷಕರ ನೇಮಕ ಹಾಗೂ ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು.

ಕವಿತಾಳ ಪಟ್ಟಣಕ್ಕೆ 3 ವರ್ಷಗಳ ಹಿಂದೆ ಉರ್ದು ಮಂಜೂರಾಗಿದ್ದು, ಇಲ್ಲಿಯವರೆಗೂ ಸಹ ಈ ಪ್ರೌಢಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿ ಆಗಿಲ್ಲ. ವಿದ್ಯಾರ್ಥಿಗಳು ದೂರದ ಲಿಂಗಸುಗೂರು ರಾಯಚೂರು ಸೇರಿದಂತೆ ಅನೇಕ ಕಡೆ ಉರ್ದು ಶಿಕ್ಷಣ ಕಲಿಯಲು ಅಲೆಯುವಂಥ ಪರಿಸ್ಥಿತಿ ಉಂಟಾಗಿದೆ. ಶಾಲೆಯಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರು ಇಲ್ಲದೇ ಇರುವುದರಿಂದ ಪೋಷಕರು ದೂರದ ಊರುಗಳಿಗೆ ವಿದ್ಯಾರ್ಥಿನಿಯರನ್ನ ಕಳಿಸಲು ಹೆದರುತ್ತಿದ್ದಾರೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಮಹ್ಮದ್ ಯೂಸುಫ್ ಮುಖ್ಯಗುರುಗಳನ್ನ ದೇವದುರ್ಗ ತಾಲೂಕಿಗೆ ವರ್ಗಾವಣೆ ಮಾಡಿದ್ದಾರೆ.

Contact Your\'s Advertisement; 9902492681

ಅವರನ್ನ ಪುನ: ಕವಿತಾಳ ಪಟ್ಟಣಕ್ಕೆ ವರ್ಗಾವಣೆ ಮಾಡಲು DDPI ಯವರು ಆದೇಶ ಹೊರಡಿಸಿದ್ದಾರೆ. ಆದರೆ ದೇವದುರ್ಗ ಬಿ ಇ ಓ ರವರು ಈ ಆದೇಶವನ್ನ ಉಲ್ಲಂಘಿಸುತ್ತಿದ್ದಾರೆ. ಈ ಖಾಯಂ ಶಿಕ್ಷಕರೇ ಇಲ್ಲದಿರುವುದರಿಂದ ಶಾಲೆಗೆ ಮಕ್ಕಳನ್ನ ಸೇರಿಸಲು ಪೋಷಕರು ಹಿಂದೆಟು ಹಾಕುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಕವಿತಾಳ ಪಟ್ಟಣಕ್ಕೆ ವರ್ಗಾವಣೆ ಗೊಂಡಿರುವ ಶಿಕ್ಷಕರನ್ನ ಪುನ: ಕವಿತಾಳ ನಗರಕ್ಕೆ ವರ್ಗಾಯಿಸಬೇಕೆಂದು ವಿದ್ಯಾರ್ಥಿ ಹಾಗೂ ಪೋಷಕರ ಒತ್ತಾಯವಾಗಿದೆ. ಮತ್ತು ಖಾಲಿ ಇರುವ ಎಲ್ಲ ವಿಷಯಾದರಿತ ಶಿಕ್ಷಕರನ್ನು ಕೂಡಲೇ ನೇಮಿಸಬೇಕು. ಹಾಗೂ ಶಾಲೆಗೆ ವಿದ್ಯಾರ್ಥಿಗಳಿಗನುಗುಣವಾಗಿ ಶೌಚಾಲಯ ಹೆಚ್ಚಿಸಬೇಕು. ಮತ್ತು ಮೂಲಭೂತ ಸೌಕರ್ಯಳಾದ ಬೆಂಚ್, ಕುಡಿಯುವ ನೀರು , ಪುಸ್ತಕ, ವಿಜ್ಞಾನ ಪ್ರಯೋಗಲಯ ಸೇರಿದಂತೆ ಇತರ ಸಮಸ್ಯೆ ಒದಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಕವಿತಾಳ ವಲಯ ಸಮಿತಿಯುಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ವಲಯ ಘಟಕ ಅಧ್ಯಕ್ಷ ಮೌನೇಶ ಬುಳ್ಳಾಪುರ ಕಾರ್ಯದರ್ಶಿ ವೆಂಕಟೇಶ ಉಪಾಧ್ಯಕ್ಷರಾದ ನಾಗಮೋಹನ್ ಸಿಂಗ್ ಮುಖಂಡರಾದ ಮೌನೇಶ ಮಲ್ಲಿಕಾರ್ಜುನ ವಿದ್ಯಾರ್ಥಿಗಳಾದ ರಾಹೀನಾ, ನಫೀಜಾ, ಗೌಸೀಯಾ, ನೌಶೀನ್, ರುಬೀನಾ ಹಾಗೂ ಪಾಲಕರು ಸೇರಿದಂತೆ ಅನೇಕ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here