ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸುಪ್ರಸಿದ್ಧ, ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ತೊಟ್ಟಿಲು ಕಾರ್ಯಕ್ರಮ ಜರುಗಿತು. ಶ್ರೀ ಶರಣಬಸವೇಶ್ವರರ ಜನನ ದಿನದ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ತೊಟ್ಟಿಲು ಕಾರ್ಯಕ್ರಮ ನಡೆಯಿತು.
ಶ್ರೀ ಶರಣಬಸವೇಶ್ವರ ದೇವಸ್ಥಾನ ನವ ತರುಣ ಕಮಿಟಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಂಗಲಿಯರೆಲ್ಲಾ ಶರಣಬಸವೇಶ್ವರರ ತೊಟ್ಟಿಲು ತೂಗಿ ಜೋಗುಳ ಪದ ಹಾಡಿ ಸಂಭ್ರಮಿಸಿದರು. ಶ್ರೀ ಶರಣಬಸವೇಶ್ವರ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಿಸಲಾಯಿತು.ಪ್ರಸಾದ ಸೇವೆಯನ್ನು ಭಕ್ತರಾದ ಶ್ರೀಶೈಲ ಮಿಟೆಕಾರ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನ ನವ ತರುಣ ಕಮಿಟಿ ಅಧ್ಯಕ್ಷರಾದ ಬಸವರಾಜ ಯಳಸಂಗಿ,ಅಣ್ಣಾರಾವ್ ದುಗೊಂಡ,ಸಿದ್ದಾರಾಮ ಬಣಗಾರ,ದಿಗಂಬರಿ ಕುಲಕರ್ಣಿ, ಸುಭಾಷ್ ಹಳಿಮನಿ,ಅಮೃತ ಶೀಲವಂತ,ಕ್ಷೇಮಲಿಂಗ ಕಂಭಾರ,ಅನಿಲ್ ಮಠಪತಿ,ವಿರಯ್ಯ ಗಣೇಚಾರಿ, ಈರಣ್ಣ ನಂದಿ,ಮಡಿವಾಳಪ್ಪ ಮಡಿವಾಳ,ವಿಶ್ವನಾಥ್ ಮಾಲಿ ಪಾಟೀಲ್, ದತ್ತಾತ್ರೇಯ ದುರ್ಗದ,ಸಚಿನ್ ಕುಮಾರ್ ಶೀಲವಂತ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.