ಎಂ. ಎಸ್. ಆಯ್. ಕಾಲೇಜಿನಲ್ಲಿ ಬೌದ್ಧಿಕ ಆಸ್ತಿಯ ಹಕ್ಕು ಕಾರ್ಯಕ್ರಮ

0
26

ಕಲಬುರಗಿ: ನಗರದ ಪ್ರತಿಷ್ಠಿತ ಎಂ. ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಅಯ್.ಕ್ಯೂ.ಎ ಸಿ/ನ್ಯಾಕ್ ವತಿಯಿಂದ ಬೌದ್ಧಿಕ ಆಸ್ತಿಯ ಹಕ್ಕು ವಿಷಯದ ಮೇಲೆ ಒಂದು ದಿನಗಳ ಕಾರ್ಯಶಾಲೆಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಪುಣೆ ನಗರದ ಎಂ.ಅಯ್.ಟಿ. ವಿಶ್ವವಿದ್ಯಾಲಯದ ಪಿ.ಜಿ. ಸಂಯೋಜಕರಾದ ಪ್ರೋ. ರಾಜಶೇಖರ್ ರಾಠೋಡ ಅವರು ನೀಡಿದರು.

Contact Your\'s Advertisement; 9902492681

ವಿದ್ಯಾರ್ಥಿಗಳಿಗೆ ಅವರ ಬೌದ್ಧಿಕ ಆಸ್ತಿಯ ಹಕ್ಕಿನ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಚಾರ್ಯರಾದ ಡಾ. ಎಸ್. ಎ. ಪಾಟೀಲ್ ರವರು ವಹಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಅಯ್.ಕ್ಯೂ.ಎ. ಸಿ.ಸಂಯೋಜಕರಾದ ಡಾ. ಪ್ರೇಮಚಂದ ಚವ್ಹಾಣರವರು ಮಾಡಿದರು. ಸ್ವಾಗತವನ್ನು ನ್ಯಾಕ್ ಸಂಯೋಜಕರಾದ ಡಾ. ಎ. ಜಿ. ಪೊಲೀಸ್ ಪಾಟೀಲ್ ಮಾಡಿದರು.

ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ರಾಜಶೇಖರ್ ಬಿರನಳ್ಳಿ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here