ಆಳಂದ: ತಾಲೂಕಿನ ಪಡಸಾವಳಿ ಗ್ರಾಮ ಪಂಚಾಯತಿಯ ಮೊದಲ ಅವಧಿಯ 30 ತಿಂಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಬುಧುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಬೆಂಬಲಿತ ಪ್ರಕಾಶ ಬಾಬುರಾವ ಬೆಳಂ ಅಧ್ಯಕ್ಷರಾಗಿ, ಶಾಂತಮಲ್ಲಪ್ಪ ಅಚಲೇರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯತ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಬಾಬುರಾವ ಬೆಳಂ, ಭೋಜರಾಜ ನಿಂಬರ್ಗಾ, ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಮಲ್ಲಪ್ಪ ಅಚಲೇರಿ, ನಿರ್ಮಲಾ ಕೈಲಾಸ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಲಾ 8 ಮತಗಳನ್ನು ಪಡೆಯುವುದರ ಮೂಲಕ ತಮ್ಮ ಪ್ರತಿಸ್ಪರ್ಧಿಗಳನ್ನು 1 ಮತದ ಅಂತರದಿಂದ ಪರಾಭವಗೊಳಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಖಜೂರಿ ಜಿಲ್ಲಾ ಪಂಚಾಯತ ಸದಸ್ಯ ಹರ್ಷಾನಂದ ಗುತ್ತೇದಾರ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಹೇಶ ಮುನ್ನೊಳ್ಳಿ, ಪಿಂಟು ಪಾಟೀಲ, ಮುಬಾರಕ ಮೂಲಗೆ, ಬಸವರಾಜ ಸ್ವಾಮಿ, ಧರೆಪ್ಪ ಕುಂಬಾರ, ತುಕಾರಾಮ ಘಾಳೆ, ಹಣಮಂತ ಜಮಾದಾರ, ದಸ್ತಗೀರ ಗುಂಜೊಟೆ, ಮಾಜಿ ಸೈನಿಕ ಲಕ್ಷ್ಮಣ ಜಾಧವ ಸೇರಿದಂತೆ ಪಡಸಾವಳಿ ಗೆಳೆಯರ ಬಳಗದ ಸದಸ್ಯರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.