ಶಹಾಬಾದ: ತಾಲೂಕಿನ ಭಂಕೂರ ಮತ್ತು ಹೊನಗುಂಟಾ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಭಂಕೂರ ನೂತನ ಗ್ರಾಪಂ ಅಧ್ಯಕ್ಷರಾಗಿ ರಾಜೇಶ್ವರಿ ರಜನಿಕಾಂತ ಮತ್ತು ಉಪಾಧ್ಯಕ್ಷರಾಗಿ ಯಶ್ವಂತ ನೆಹರು ಚವ್ಹಾಣ ಆಯ್ಕೆಯಾದರೆ, ಹೊನಗುಂಟಾ ಗ್ರಾಪಂ ಅಧ್ಯಕ್ಷರಾಗಿ ಭೀಮಬಾಯಿ ಮಲ್ಲಪ್ಪ ಮತ್ತು ಉಪಾಧ್ಯಕ್ಷರಾಗಿ ತಿಪ್ಪಣ್ಣ ಚಡಬಾ ಆಯ್ಕೆಯಾಗಿದ್ದಾರೆ.
ಭಂಕೂರ ಗ್ರಾಪಂ ಸಾಮನ್ಯ ವರ್ಗ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ರಾಜೇಶ್ವರಿ ರಜನಿಕಾಂತ ಮತ್ತು ಭಾಗಮ್ಮ ಮಲ್ಲಿಕಾಜುನ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಯಶ್ವಂತ ನೆಹರು ಮತ್ತು ಶರಣಪ್ಪ ಧನ್ನಾ ನಾಮಪತ್ರ ಸಲ್ಲಿಸಿದರು.
ಗ್ರಾಪಂಯ ಒಟ್ಟು ೩೧ ಜನ ಸದಸ್ಯ ಬಲದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಜೇಶ್ವರಿ ರಜನಿಕಾಂತ ೧೭ ಮತಗಳನ್ನು ಪಡೆದು ಅಧ್ಯಕ್ಷರಾದರೇ, ಭಾಗಮ್ಮ ಮಲ್ಲಿಕಾಜುನ ೧೪ ಮತಗಳನ್ನು ಪಡೆದು ಸೋಲನ್ನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶ್ವಂತ ನೆಹರು ೧೭ ಮತಗಳನ್ನು ಪಡೆದು ಉಪಾಧ್ಯಕ್ಷರಾದರೆ, ಶರಣಪ್ಪ ಧನ್ನಾ ೧೪ ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.
ಹೊನಗುಂಟಾ ಗ್ರಾಪಂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗ್ರಾಪಂಯ ಒಟ್ಟು ೧೭ ಜನ ಸದಸ್ಯ ಬಲದಲ್ಲಿ ಭೀಮಬಾಯಿ ಮಲ್ಲಪ್ಪ ೯ ಮತಗಳನ್ನು ಪಡೆದು ಅಧ್ಯಕ್ಷರಾದರೇ, ಇಂದ್ರಬಾಯಿ ದೇಸಾಯಿ ೮ ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಿಪ್ಪಣ್ಣ ಚಡಬಾ ೯ ಮತಗಳನ್ನು ಪಡೆದು ಉಪಾಧ್ಯಕ್ಷರಾದರೆ, ಮಲ್ಲಮ್ಮ ಬಸವರಾಜ ಕಡೆಹಳ್ಳಿ ೮ ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು ಎಂದು ಚುನಾವಣಾಧಿಕಾರಿಗಳಾದ ಸುರೇಶ ವರ್ಮಾ,ಲಕ್ಷ್ಮಣ ಶೃಂಗೇರಿ ತಿಳಿಸಿದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಗ್ರಾಪಂ ಕಾರ್ಯಾಲಯ ಹೊರಗಡೆ ಸೇರಿದ್ದ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಿಗೆ ಹಾರ ಹಾಕಿ ಅಭಿನಂದಿಸಿದರು.
ಹೊನಗುಂಟಾ ಪಿಡಿಓ ರಾಜಶೇಖರ ಬಾಳಿ, ಕಾರ್ಯದರ್ಶಿ ಜಗನ್ನಾಥ,ಚಿತ್ತಾಪೂರ ಮಾಜಿ ಶಾಸಕ ವಾಲ್ಮೀಕಿ ನಾಯಕ, ಮುಖಂಡರಾದ ಶಶಿಕಾಂತ ಪಾಟೀಲ, ನೀಳಕಂಠರಾವ ಪಾಟೀಲ, ಪ್ರಕಾಶ ಪಾಟೀಲ,ಗಂಗಾರಾಮ,ರವಿ ರಾಠೋಡ,ದತ್ತಾ ಫಂಡ್ ಸೇರಿದಂತೆ ಭಂಕೂರ ಹಾಗೂ ಹೊನಗುಂಟಾ ಗ್ರಾಪಂ ಸದಸ್ಯರು ಇದ್ದರು.
ಶಹಾಬಾದ: ಹೊನಗುಂಟಾ ಗ್ರಾಮ ಪಂಚಾಯತಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಗ್ರಾಪಂ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಭೀಮಬಾಯಿ ಮಲ್ಲಪ್ಪ ಮತ್ತು ಉಪಾಧ್ಯಕ್ಷರಾಗಿ ತಿಪ್ಪಣ್ಣ ಚಡಬಾ ಆಯ್ಕೆಯಾಗಿದಕ್ಕೆ ಬೆಂಬಲಿಗ ಸದಸ್ಯರು ಗೆಲುವಿನ ನಗೆ ಬೀರಿದರು.