ಸುರಪುರ: ಕಳೆದ ಕೆಲ ತಿಂಗಳುಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ಪತ್ರಕರ್ತ ಹಾಗು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಸಂಘಟನಾ ಕಾರ್ಯದರ್ಶಿಗಳಾಗಿದ್ದ ಸೋಮಶೇಖರ ನರಬೋಳಿಯವರ ಕುಟುಂಬಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ವೈಕ್ತಿಕ ಸಹಾಯಧನವನ್ನು ಅರ್ಪಿಸಿದರು.
ನಗರದ ಶಾಸಕರ ಗೃಹ ಕಚೇರಿಯಲ್ಲಿ ಪತ್ರಕರ್ತ ಸೋಮಶೇಖರ ನರಬೋಳಿಯವರ ಸಹೋದರ ಪತ್ರಕರ್ತ ರವಿಕುಮಾರ ನರಬೋಳಿಯವರ ಮೂಲಕ ಸಹಾಯಧನ ವಿತರಿಸಿ ಮಾತನಾಡಿದ ಶಾಕಸರು, ಪತ್ರಕರ್ತರಾಗಿ ಹಾಗು ವ್ಯಕ್ತಿಗತವಾಗಿಯೂ ಸೋಮಶೇಖರ ನರಬೋಳಿ ಒಬ್ಬ ಉತ್ತಮವಾದ ವ್ಯಕ್ತಿಯಾಗಿದ್ದರು ಅವರು ನಿಧನದ ಸುದ್ದಿ ನಿಜಕ್ಕೂ ಆಘಾತವನ್ನುಂಟು ಮಾಡಿತ್ತು,ಅದರಂತೆ ಅವರ ಕುಟುಂಬಕ್ಕೆ ನಮ್ಮಿಂದಾದ ಸಹಕಾರವನ್ನು ಮಾಡಬೇಕೆಂಬ ಇಚ್ಛೆಯಿಂದ ವೈಯಕ್ತಿಕವಾಗಿ ೫೦ ಸಾವಿರ ರೂಪಾಯಿಗಳ ಧನ ಸಹಾಯವನ್ನು ಮಾಡುವ ಜೊತೆಗೆ ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಧನಸಹಾಯವನ್ನು ಕೊಡಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಶಂಕರ ನಾಯಕ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಡಿ.ಸಿ.ಪಾಟೀಲ್ ಕೆಂಭಾವಿ ತಾಲೂಕು ಅಧ್ಯಕ್ಷ ರಾಜು ಕುಂಬಾರ ಪತ್ರಕರ್ತ ಮಲ್ಲು ಗುಳಗಿ ಯುವ ಮುಖಂಡ ಸುರಪುರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಜಾ ರಂಗಪ್ಪ ನಾಯಕ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ ಮಂಜುನಾಥ ನಾಯಕ ಬೈರಿಮಡ್ಡಿ ಸೇರಿದಂತೆ ಅನೇಕರಿದ್ದರು.