ವೈದ್ಯಕೀಯ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ಸಾಧನೆ ಶ್ಲಾಘನೀಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್

0
33

ಬೆಂಗಳೂರು: ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಪದಕ ಪಡೆದಿರುವುದು ಶ್ಲಾಘನೀಯ ಎಂದು ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ತಿಳಿಸಿದರು.

ಅವರು ಇಂದು ಬೆಂಗಳೂರು ನಿಮ್ಹಾನ್ಸ್ ಸಮಾವೇಶ ಭವನದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿದ್ದ ೨೩ನೇ ವಾರ್ಷಿಕ ಘಟಿಕೋತ್ಸವದಲ್ಲಿ ಆರೋಗ್ಯ ವಿಜ್ಞಾನ ಪದವೀಧರರಿಗೆ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪದವಿ ಪ್ರದಾನ ಮಾಡಿ ಮಾತನಾಡಿದರು.

Contact Your\'s Advertisement; 9902492681

ದೇಶದಲ್ಲಿ ಕೊರೊನಾ ಕಾಣಿಸಿಕೊಂಡು ಎಲ್ಲರಿಗೂ ಪಾಠ ಕಲಿಸಿರುವುದರಿಂದ, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯ ಮತ್ತು ಶಿಕ್ಷಣ ಅತ್ಯಂತ ಪ್ರಮುಖ ಆದ್ಯತಾ ವಲಯದ ಕ್ಷೇತ್ರಗಳಾಗಿವೆ.

ಭವಿಷ್ಯದಲ್ಲಿ ಕೊರೊನಾದಂತಹ ಸಾಂಕ್ರಾಮಿಕ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಬೇಕಾದರೆ ಆರೋಗ್ಯ ಕ್ಷೇತ್ರ ಸದೃಢವಾಗಿರಬೇಕು. ಕೋವಿಡ್-೧೯ರ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳು ಎದುರಾದರೂ ವೈದ್ಯರುಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿರುವುದನ್ನು ಪ್ರಶಂಸಿದ ರಾಷ್ಟ್ರಪತಿಗಳು, ಪ್ರತಿಯೊಬ್ಬ ವಿದ್ಯಾರ್ಥಿಗಳ ಭವಿಷ್ಯವು ಉಜ್ವಲವಾಗಲಿ ಎಂದು ಶುಭ ಕೋರಿದರು.

ವಿವಿಧ ವಿಷಯಗಳಲ್ಲಿ ೩೩,೬೨೯ ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಈ ಪೈಕಿ ೧೧೧ ವಿದ್ಯಾರ್ಥಿಗಳು ೧೨೨ ಚಿನ್ನದ ಪದಕ ಹಾಗೂ ೮ ನಗದು ಬಹುಮಾನ ಪಡೆದಿದ್ದಾರೆ. ೩೦ ಪಿ.ಎಚ್.ಡಿ., ೧೧೫ ಸೂಪರ್ ಸ್ಪೆಷಾಲಿಟಿ, ೫,೮೨೪ ಸ್ನಾತಕೋತ್ತರ ಪದವಿ, ೩೫೧ ಸ್ನಾತಕೋತ್ತರ ಡಿಪ್ಲೊಮಾ ಪದವಿ, ೭೯ ಫೆಲೋಷಿಪ್ ಕೋರ್ಸ್, ೯ ಸರ್ಟಿಫಿಕೇಟ್ ಕೋರ್ಸ್ ಹಾಗೂ ೨೭,೨೨೧ ಸ್ನಾತಕ ಅಭ್ಯರ್ಥಿಗಳ ಪದವಿ ಪಡೆದಿದ್ದಾರೆ.

ಇದೇ ಸಂದರ್ಭದಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮಹತ್ಸಾಧನೆಗೈದ ಡಾ: ಅಲಂಗಾರ್ ಸತ್ಯರಂಜನ್ ದಾಸ್ ಹೆಗ್ಡೆ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳಾದ ಡಾ: ಕೆ.ಸುಧಾಕರ್, ವಿಶ್ವವಿದ್ಯಾನಿಲಯದ ಕುಲಪತಿ ಡಾ: ಎಸ್. ಸಚ್ಚಿದಾನಂದ ಹಾಗೂ ಸಿಂಡಿಕೇಟ್ ಸದಸ್ಯರುಗಳು ಉಪಸ್ಥಿತರಿದ್ದರು.

ಡಾ. ಸಂದೀಪ್ ರಾವ್ ಕೊರಡ್ಕಲ್, ಡಾ. ಅನ್ಸಿತ ಟಂಡನ್, ಡಾ. ಸೌಮ್ಯ ಎ., ಟಿ.ಡಿ. ಆಶಿನಿ ದಿಲ್ಹಾರ ಫರ್ನಾಂಡೊ, ರಾಥೋಡ್ ಸೊನಾಲಿ ದೇವಾನಂದ, ಖುಷಿರಾಜ್ ಪೊಖರೆಲ್, ಸೂರಜ್ ಯಾದವ್ ಇವರುಗಳು ತಲಾ ೨ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಡಾ. ಈಶಾನು ಹೆಚ್ ಶಾಸ್ತ್ರಿ, ಡಾ. ನೀರಜಾ ತೊಟ್ಟಿಪರಂಬಿಲ್ ಗೋಪಿ, ಡಾ. ಸಮರ್ಥ್ ಎಸ್ ಗೌಡ, ಡಾ. ವೀರೇಶ್ ಪುರದ, ಡಾ. ರಂಜಿತ ಜಿ, ಡಾ. ರೋಹಿಣಿ. ಆರ್. ಇವರುಗಳು ಒಂದು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದಿದ್ದಾರೆ.

ಚಿನ್ನದ ಪದಕ-ನಗದು ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳ ವಿವರ: ಡಾ.ಮಾಲಾ ಎಂ, ಡಾ. ವೈಷ್ಣವಿ ಕಾಮತ್ ಕೆ. ಹಾಗೂ ಡಾ. ಸಫಿಯಾ ತಲಾ ೩ ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here