ಕಲಬುರಗಿ: ನಗರದಲ್ಲಿ ಪರವಾನಿಗೆಯಿಲ್ಲದೆ ಸಾರ್ವಜನಿಕ ಮತ್ತು ಸರ್ಕಾರಿ ಜಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿ ಸಾರ್ವಜನಿಕರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಹಂದಿ ಮಾಲೀಕರು ಕೂಡಲೆ ಹಂದಿಗಳನ್ನು ನಗರದಿಂದ ಸ್ಥಳಾಂತರಿಸಬೇಕು ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಹಂದಿಗಳ ಹಾವಳಿ ಮನುಷ್ಯರಿಗೆ ಪ್ರಾಣಿ ಜನ್ಯ ರೋಗ ಬರುವ ಸಾಧ್ಯತೆವಿದೆ. ನಗರದಲ್ಲಿನ ಹಂದಿಗಳ ಹಾವಳಿಯಿಂದ ಜನಸಾಮಾನ್ಯರ ಸಂಚಾರಕ್ಕೆ ಅಡಚಣೆ, ಪರಿಸರವು ಹದಗೆಡುತ್ತಿರುವುದಲ್ಲದೆ ಸ್ವಚ್ಛ ಕಲಬುರಗಿಗೆ ಇದರಿಂದ ಅಡೆ ತಡೆಯಾಗುತ್ತಿರುವ ಬಗ್ಗೆ ಪಾಲಿಕೆಗೆ ಹಲವಾರು ದೂರುಗಳು ಬರುತ್ತಿರುವ ಕಾರಣ ಹಂದಿ ಮಾಲೀಕರಿಗೆ ಈ ಹಿಂದೆ ನೋಟಿಸ್ ನೀಡಿ ಹಂದಿ ಸ್ಥಳಾಂತರ ಕಾರ್ಯವನ್ನು ಪಾಲಿಕೆಯಿಂದಲೆ ಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಹಂದಿ ಮಾಲೀಕರು ತಮಗೆ ಸಂಬಂಧಿಸಿದ ಹಂದಿಗಳನ್ನು ನಗರದಿಂದ ಹೊರವಲಯಕ್ಕೆ ಸ್ಥಳಾಂತರಿಸದಿದ್ದರೇ, ಸೂಕ್ತ ಕಾನೂನು ಕ್ರಮಕೈಗೊಂಡು ಹಂದಿ ಹಿಡಿಯುವ ತಂಡವನ್ನು ಕರೆತಂದು ನಗರದಲ್ಲಿನ ಹಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಸ್ನೇಹಲ್ ಸುಧಾಕರ ಲೋಖಂಡೆ ಅವರು ಸ್ಪಷ್ಠಪಡಿಸಿದ್ದಾರೆ.