ಕೈ ಜಾರಿದ ಕಲಬುರಗಿ ಏಮ್ಸ್ : ಕಲ್ಯಾಣದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಠುಸ್: ಡಾ. ಅಜಯ್ ಸಿಂಗ್ ಆಕ್ರೋಶ

0
42

ಕೈ ಜಾರಿದ ಏಮ್ಸ್ ಕಲಬುರಗಿ: ಕಲ್ಯಾಣದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಠುಸ್: ಡಾ. ಅಜಯ್ ಸಿಂಗ್ ಆಕ್ರೋಶ

ಕಲಬುರಗಿ: ಕಲಬುರಗಿಯಲ್ಲಿರೋ ಇಎಸ್‍ಐಸಿ ಆಸ್ಪತ್ರೆಯನ್ನೇ ಅಖಿಲ ಭಾರತ ವೈದ್ಯ ವಿe್ಞÁನಗಳ ಸಂಸ್ಥೆ ಏಮ್ಸ್ ಮಟ್ಟಕ್ಕೆ ಮೇಲ್ದರ್ಜೆಗೇರಿಸಬೇಕೆಂಬ ತನ್ನ ಮುಂಚಿನ ಪ್ರಸ್ತಾವನೆಯನ್ನೇ ರಾಜ್ಯ ಸರ್ಕಾರ ಕೈಬಿಟ್ಟು ಇದೀಗ ಯೋಜನೆಯನ್ನು ಕಲಬುರಗಿಯಿಂದ ಕಿತ್ತುಕೊಂಡು ಹುಬ್ಬಳ್ಳಿ- ಧಾರವಾಡಕ್ಕೆ ನೀಡಿರೋದನ್ನ ತೀವ್ರವಾಗಿ ಖಂಡಿಸಿರುವ ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕಲಬುರಗಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಹುದೊಡ್ಡ ಹೊಡೆತ ನೀಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Contact Your\'s Advertisement; 9902492681

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಾ. ಅಜಯ್ ಸಿಂಗ್ ಡಾ. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕಲಬುರಗಿಗೆ ತಂದಿರುವ 1, 300 ಕೋಟಿ ರು ವೆಚ್ಚದ ಇಎಸ್‍ಐಸಿ ಆಸ್ಪತ್ರೆ ಮೆಡಿಕಲ್ ಹಬ್ ಸಂಕೀರ್ಣ ಇಲ್ಲಿ ಇತ್ತು. ಏಮ್ಸ್ ಸಂಸ್ಥೆಯನ್ನಾಗಿ ಇದನ್ನೇ ಮೇಲ್ದರ್ಜೆಗೇರಿಸಿದರೆ ಸರಕಾರಕ್ಕೆ ಆರ್ಥಿಕ ಹೊರೆಯೂ ಇರುತ್ತಿರಲಿಲ್ಲ. ಇದನ್ನೆಲ್ಲ ಬಿಟ್ಟು ಯೋಜನೆಯನ್ನೇ ಕಲಬರಗಿಯಿಂದ ಕಿತ್ತುಕೊಂಡು ಅನ್ಯಾಯ ಮಾಡಲಾಗಿದೆ ಎಂದು ದೂರಿದ್ದಾರೆ.

ಏಮ್ಸ್‍ನಂತಹ ಸಂಸ್ಥೆ ಹಿಂದುಳಿದ ಭಾಗಕ್ಕೆ ಬಂದಲ್ಲಿ ಜನತೆಗೆ ಆರೋಗ್ಯ ರಂಗದಲ್ಲಿ ಉತ್ಕøಷ್ಟ ಸೇವೆಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದ್ದವು. ಬಿಜೆಪಿ ರಾಜ್ಯ ಸರಕಾರದ ಬದಲಾದ ನಿಲುವಿನಿಂದ ಇಂತಹ ಸವಲತ್ತು ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಸಾಮಾನ್ಯ ಜನರೆಲ್ಲರಿಂದ ದೂರ ಹೋದಂತಾಗಿದೆ.

ಕಲ್ಯಾಣದಲ್ಲಿರುವ 5 ಬಿಜೆಪಿ  ಎಂಪಿಗಳು, 30 ಕ್ಕೂ ಹೆಚ್ಚು ಬಿಜೆಪಿ ಸಾಸಕರು ಇಂತಹ ಯೋಜನೆ ಕೈತಪ್ಪಿ ಹೋದರೂ ಬಾಯಿ ಮುಚ್ಚಿಕೊಂಡಿದ್ದಾರೆ. ಯಾರೂ ಮಾತನ್ನಾಡುತ್ತಿಲ್ಲ. ಡಬ್ಬಲ್ ಇಂಜಿನ್ ಸರ್ಕಾರ ಕಲ್ಯಾಣದಲ್ಲಿ ಕೆಟ್ಟು ನಿಂತಿದೆ. ಅದರ ಇಂಜಿನ್ ಠುಸ್ ಆಗಿದೆ, ಹೀಗಾಗಿಯೇ ಕೇಂದ್ರದ ಹಲವಾರು ಉನ್ನತ ಯೋಜನೆಗಳು ಕಲಬುರಗಿ (ಸಿಓಇ), ರಾಯಚೂರು (ಐಐಐಟಿ, ಐಐಟಿ), ಬೀದರ್, ಯಾದಗಿರಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳಿಂದ ದೂರ ಹೋಗುತ್ತಿವೆ ಎಂದು ಡಾ. ಅಜಯ್ ಸಿಂಗ್ ಆರೋಪಿಸಿದ್ದಾರೆ.

ಇಎಸ್‍ಐಸಿ ಮೆಡಿಕಲ್ ಕಾಲೇಜುಗಳನ್ನೆಲ್ಲ ಏಮ್ಸ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಸಲಹೆ 2018 ರಲ್ಲೇ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮೀತಿ ನೀಡಿತ್ತು. ಇದಲ್ಲದೆ ಕಾಂಗ್ರೆಸ್ ಸರ್ಕಾರವಿದ್ದಾಗ ಸಿಎಂ ಸಿದ್ದರಾಮಯ್ಯನವರೂ ಸಹ ಕಲಬುರಗಿ ಇಎಸ್‍ಐಸಿ ಏಮ್ಸ್ ಆಗಿ ಪರಿವರ್ತಿಸುವ ಪ್ರಸ್ತಾವನೆ ಸಲ್ಲಿಸಿದ್ದರು.

ಇವನ್ನೆಲ್ಲ ಕಡೆಗಣಿಸಿರುವ ಬಿಜೆಪಿ ರಾಜ್ಯ ಹಾಗೂ ಕೇಂದ್ರದ್ರ ಸರ್ಕಾರಗಳು ಹಿಂದುಳಿದ ಕಲಬುರಗಿ ಮಂದಿಗೆ ಒಲಿಯಬೇಕಿಗಿದ್ದ ಅತ್ಯಾಧುನಿಕ ಆರೋಗ್ಯ ಭಾಗ್ಯದ ಸವಲತ್ತೊಂದನ್ನು ಹುಬ್ಬಳ್ಳಿ- ಧಾರಡದ ಪಾಲಾಗಿಸಿ ಕಲಬುರಗಿಗೆ ಘೋರ ಅನ್ಯಾಯ ಮಾಡಿದೆ. ಇಲ್ಲಿನ ಸಂಸದರು, ಸಾಸಕರು ಇನ್ನಾಜದರೂ ಬಿಯಿ ಬಿಟ್ಟು ಮಾತನಾಡಲಿ, ಇಂತಹ ಸಂಸ್ಥೆಗಳನ್ನು ಕಲಬುರಗಿಗೆ ಉಳಿಸಿಕೊಳ್ಳುವಲ್ಲಿ ಪ್ರಯತ್ನಕ್ಕೆ ಮುಂದಾಗಲಿ ಎಂದು ಡಾ. ಅಜಯ್ ಸಿಂಗ್ ಕಿವಿ ಮಾತು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here