ಶಹಾಬಾದ: ಸಮೀಪದ ಮಾಲಗತ್ತಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಗ್ರಾಪಂ ಅಧ್ಯಕ್ಷರಾಗಿ ಅಂಬಿಕಾ ಶಿವಾನಂದ ಅಲ್ಲೂರ್ ಮತ್ತು ಉಪಾಧ್ಯಕ್ಷರಾಗಿ ರಾಜು ಜಿರಕಲ್ ಆಯ್ಕೆಯಾಗಿದ್ದಾರೆ.
ಮಾಲಗತ್ತಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಅಂಬಿಕಾ ಶಿವಾನಂದ ಅಲ್ಲೂರ್ ಮತ್ತು ಸುಮಲತಾ ಅಪ್ಪಾರಾವ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ರಾಜು ಜಿರಕಲ್ ಮತ್ತು ಶರಣಗೌಡ ಮತ್ತಿಮಡು ಶಂಕರವಾಡಿ ನಾಮಪತ್ರ ಸಲ್ಲಿಸಿದರು.
ಮಾಲಗತ್ತಿ ಗ್ರಾಪಂಯ ಒಟ್ಟು ೧೮ ಜನ ಸದಸ್ಯ ಬಲದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಂಬಿಕಾ ಶಿವಾನಂದ ಅಲ್ಲೂರ್ ೧೦ ಮತಗಳನ್ನು ಪಡೆದು ಗೆಲು ಸಾಧಿಸಿದರೇ, ಸುಮಲತಾ ಅಪ್ಪಾರಾವ ೮ ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಜು ಜಿರಕಲ್ ೧೦ ಮತಗಳನ್ನು ಪಡೆದು ಗೆಲುವು ಸಾಧಿಸಿದರೇ, ಶರಣಗೌಡ ಮತ್ತಿಮಡು ಶಂಕರವಾಡಿ ೮ ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಗ್ರಾಪಂ ಕಾರ್ಯಾಲಯ ಹೊರಗಡೆ ಸೇರಿದ್ದ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಿಗೆ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷರಾದ ಶರಣಪ್ಪ ಸಣಮೋ,ಮಲ್ಲಣ್ಣ ಅಲ್ಲೂರ್, ಪ್ರಕಾಶರೆಡ್ಡಿ ಯರಗಲ್, ಶಿವಮೂರ್ತಿ ಪಾಮನೂರ,ಸದಾಶಿವ ಸಿಂಘೆ, ಕಾಶಿನಾಥ ಜೋಗಿ, ಮರೆಣ್ಣ ಮೂಲಿಮನಿ, ಶ್ರೀಮಂತ ಯರಗಲ್, ವಿಕ್ರಮ ಮೂಲಿಮನಿ ಸೇರಿದಂತೆ ಗ್ರಾಪಂ ಸದಸ್ಯರು ಇತರರು ಇದ್ದರು.
ಶಹಾಬಾದ:ಮಾಲಗತ್ತಿ ಗ್ರಾಮ ಪಂಚಾಯತಿ ನೂತನ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಅಂಬಿಕಾ ಶಿವಾನಂದ ಅಲ್ಲೂರ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜು ಜಿರಕಲ್ ಆಯ್ಕೆಯಾಗಿದಕ್ಕೆ ಬೆಂಬಲಿಗ ಸದಸ್ಯರು ಗೆಲುವಿನ ನಗೆ ಬೀರಿದರು.