ಕೋವಿಶಿಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮಗಳಿಲ್ಲ: ತಹಸೀಲ್ದಾರ ಸುರೇಶ ವರ್ಮಾ

0
30

ಶಹಾಬಾದ: ಕೋವಿಶಿಲ್ಡ್ ಲಸಿಕೆಯ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಆತಂಕವಿಲ್ಲದೇ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಕೋವಿಡ್-೧೯ನನ್ನು ನಮ್ಮಿಂದ ದೂರವಿಡಲು ಸಾಧ್ಯ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ಮಂಗಳವಾರ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಸ್ತ್ರವಾಗಿರುವ ಕೋವಿಶಿಲ್ಡ್ ಲಸಿಕೆಯನ್ನು ಪಡೆದುಕೊಂಡು ಮಾತನಾಡಿದರು.

Contact Your\'s Advertisement; 9902492681

ಲಸಿಕೆಯ ಅಡ್ಡ ಪರಿಣಾಮಗಳ ಆತಂಕ ಮತ್ತು ಇತರೇ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲು ವಿವಿಧ ಇಲಾಖೆಯ ಕೆಲವು ಸಿಬ್ಬಂದಿಗಳು ಹಿಂದೇಟು ಹಾಕುತ್ತಿದ್ದಾರೆ.ಆದರೆ ಯಾರು ಆತಂಕ ಮತ್ತು ಭಯಪಡಬೇಕಾದ ಅಗತ್ಯವಿಲ್ಲ.ಈಗಾಗಲೇ ನೂರಾರು ಜನರು ಈ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಅವರಿಗೆ ಯಾವುದೇ ತೊಂದರೆಯಾಗಿಲ್ಲ.ಅಲ್ಲದೇ ಲಸಿಕೆ ನೀಡಿದ ಮೇಲೆ ಅರ್ಧ ಗಂಟೆ ಕಾಲ ಲಸಿಕಾ ಕೇಂದ್ರಗಳಲ್ಲಿ ತಮ್ಮನ್ನು ನಿಗಾ ವಹಿಸಲಾಗುವುದು.ಲಸಿಕೆಯನ್ನು ನಮ್ಮ ದೇಶದಲ್ಲೇ ಕಂಡು ಹಿಡಿದು ನೀಡುತ್ತಿರುವ ವಿಜ್ಞಾನಿಗಳ ಶ್ರಮ ಶ್ಲಾಘನೀಯವಾದುದು.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಸಿಕೆ ಸಿಗುತ್ತದೆ.ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳುವು ಮೂಲಕ ಜೀವನ ಪರ್ಯಂತ ಕೋವಿಡ್ -೧೯ ಬರದಂತೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಹೀಮ್ ಮಾತನಾಡಿ, ಲಸಿಕೆಯ ಅಡ್ಡ ಪರಿಣಾಮಗಳಿವೆ ಎಂಬ ಆತಂಕ, ಗೊಂದಲಗಳನ್ನು ಹೋಗಲಾಡಿಸಲು ತಹಸೀಲ್ದಾರ ಸುರೇಶ ವರ್ಮಾ, ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ,ಪಿಐ ಅಮರೇಶ ಅವರು ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ.ಅದನ್ನು ತಿಳಿದುಕೊಂಡು ಸರ್ವರೂ ಈ ಲಸಿಕೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮೋಹನ ಗಾಯಕವಾಡ್, ಸಂಜಯ ರಾಠೋಡ, ಯುಸೂಫ್ ನಾಕೇದಾರ, ಅಮರೇಶ ಇಟಗಿಕರ್ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here