ಕಲಬುರಗಿ: ಭಾರತದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವಿದೆಯೋ ಅಥವಾ ಭೂಗತ ಲೋಕದ ಮಾಫಿಯಾ ಸರ್ಕಾರದ ರೂಪದಲ್ಲಿ ಕಾರ್ಯಚರಿಸುತ್ತಿದೆಯೋ ತಿಳಿಯದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ಹೇಳಿದರು.
ಬಿಜೆಪಿ ರಾಜಕೀಯ ಪಕ್ಷದಂತಿರದೆ ಮಾಫಿಯಾ ಗ್ಯಾಂಗ್ ನಂತೆ ವರ್ತಿಸುತ್ತಿದೆ. ವಿಪಕ್ಷ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದರೆ, ಸಾಮಾನ್ಯರ ಧ್ವನಿಗೆ ಜಾಗವಿದೆಯೇ? ಸತತ ೩ ಬಾರಿ ಬೆದರಿಕೆ ಬಂದರು ಯಾವ ಕ್ರಮವು ಕೈಗೊಳ್ಳದ ಸರ್ಕಾರ ತನಿಕೆ ಮಾಡದಿದರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಉಗ್ರವಾದ ಹೋರಾಟ ಮಾಡುತ್ತೆವೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ಅವರು ಎಚ್ಚರಿಸಿದರು.