ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಬೆಂಗಳೂರು ಇವರ ಅಡಿಯಲ್ಲಿ ಇತ್ತೀಚೆಗೆ ಕಲಬುರಗಿ ಜಿಲ್ಲಾ ಘಟಕದ ಆಡಳಿತ ಮಂಡಳಿ ನೇಮಕಕ್ಕೆ ರಾಜ್ಯ ಪರಿಷತ್ ನಿರ್ದೇಶಕರಾದ ಶರಣಬಸವ ಕಲ್ಲಾ ಮತ್ತು ಹಿರಿಯರಾದ ರವೀಂದ್ರ ಶಾಬಾದಿ ಮತ್ತು ಡಾ. ಶಿವರಂಜನ್ ಸತ್ಯಂಪೇಟೆ ಅವರ ಮಾರ್ಗದರ್ಶನದಲ್ಲಿ ಸಭೆ ಸೇರಿ ಈ ಕೆಳಕಂಡವರನ್ನು ಆಡಳಿತ ಮಂಡಳಿಗೆ ನೇಮಕ ಮಾಡಲಾಯಿತು.
ರವೀಂದ್ರ ಶಹಾಬಾದಿ (ಗೌರವಾಧ್ಯಕ್ಷ) ಡಾ.ಬಸವರಾಜ ಚಟ್ನಳ್ಳಿ( ಅಧ್ಯಕ್ಷ) ನಾಗನಗೌಡ ಪಾಟೀಲ ಜೈನಾಪುರ, ನೀಲಕಂಠ ಅವಂಟಿ (ಉಪಾಧ್ಯಕ್ಷರು), ಡಾ. ಶಿವರಂಜನ ಸತ್ಯಂಪೇಟೆ (ಪ್ರಧಾನ ಕಾರ್ಯದರ್ಶಿ), ಡಾ.ಅಶೋಕ ದೊಡ್ಮನಿ ಜೇವರ್ಗಿ (ಸಂಘಟನಾ ಕಾರ್ಯದರ್ಶಿ), ಪರಮೇಶ್ವರ ಶಟಕಾರ (ಕಾರ್ಯದರ್ಶಿ), ಹಣಮಂತ್ರಾಯ ಐನೂಲಿ (ಖಂಜಾಂಚಿ), ನಿರ್ದೇಶಕರಾಗಿ ಶಿವರಾಜ ಅಂಡಗಿ, ಸಂತೋಷ ಹೂಗಾರ, ಸಂಗಣ್ಣ ಗುಳಗಿ, ಸತೀಶ ಸಜ್ಜನ, ಅಯ್ಯಣ್ಣ ನಂದಿ, ಬಸವರಾಜ ಕಲ್ಲಾ, ಸಿದ್ದರಾಮ ರಾಜಮಾನೆ, ಗೌರವ ನಿರ್ದೇಶಕರಾಗಿ ರೇಣುಕಾ ಎಂ ಸಿಂಗೆ, ಶರಣಬಸವ ಕಲ್ಲಾ ಅವರನ್ನು ನೇಮಕ ಮಾಡಲಾಯಿತು.