ಬಳ್ಳಾರಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆಯು ಬಳ್ಳಾರಿ ಜಿಲ್ಲೆಯ ಹೊಸ ಪೇಟೆಯಲ್ಲಿ ನಡೆಯಿತು. ಫ್ಯಾಸಿಸಂ ಕಬಂಧ ಬಾಹುಗಳಿಂದ ನ್ಯಾಯವನ್ನು ಸ್ವತಂತ್ರಗೊಳಿಸೋಣ ಎಂಬ ಘೋಷಣೆಯೊಂದಿಗೆ ನೆಡದ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರೆವೇರಿಸಿದರು.
ಪ್ರತಿನಿಧಿ ಸಭೆಯ ಉದ್ಘಾಟನೆಯನ್ನು ರಾಷ್ಟ್ರೀಯ ಕಾರ್ಯದರ್ಶಿ ಕಲೀಮ್ ತುಮಕೂರು ಮಾಡಿದರು. ವಾರ್ಷಿಕ ವರದಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಷಾ ವಾಚಿಸಿದರು.ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂಧರ್ಭದಲ್ಲಿ ಸಂಘಟನೆಯ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಚುನಾವಣಾ ಪ್ರಕ್ರಿಯೆಯನ್ನು ರಾಷ್ಟ್ರೀಯ ಸಮಿತಿ ಸದಸ್ಯ ಪಿ ವಿ ಶುಹೈಬ್ ಮಾಡಿದರು. ಸಭೆಯಲ್ಲಿ ಆರು ನಿರ್ಣಯಗಳನ್ನು ತೆಗೆಯಲಾಯಿತು.
ನೂತನ ರಾಜ್ಯ ಪದಾಧಿಕಾರಿಗಳ ಆಯ್ಕೆ: ರಾಜ್ಯಾಧ್ಯಕ್ಷರಾಗಿ ಅಥಾವುಲ್ಲಾ ಪುಂಜಲ್ಕಟ್ಟೆ, ಪ್ರಧಾನ ಕಾರ್ಯದರ್ಶಿ ಅನೀಸ್ ಪುತ್ತೂರು, ಉಪಾಧ್ಯಕ್ಷ ಸ್ವದಕತ್ ಷಾ ಮತ್ತು ಶೈಮಾ ಷರೀಫ್, ಕಾರ್ಯದರ್ಶಿಯಾಗಿ ಅಲ್ತಾಫ್ ಹೊಸಪೇಟೆ, ಸರ್ಫರಾಝ್ ಗಂಗಾವತಿ, ಮಿಸ್ರಿಯಾ, ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ, ಮುಹಮ್ಮದ್ ಸಾದಿಕ್ , ಬಾಷಾ ಕೊಪ್ಪಳ, ರೋಷನ್ ನವಾಝ್, ಆಯೆಷಾ ಮುರ್ಶಿದಾ ಝುಬೈರ್ ಬೆಂಗಳೂರು, ಫಹದ್ ಅನ್ವರ್, ಫಾತಿಮಾ ಉಸ್ಮಾನ್ ಆಯ್ಕೆ ಮಾಡಲಾಗಿದೆ.
ಬಂಧನದಲ್ಲಿರುವ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ನಾಯಕರು ಮತ್ತು ಹೋರಾಟಗಾರರನ್ನು ಶೀಘ್ರ ಬಿಡಗಡೆಗೊಳಿಸಬೇಕು ಮತ್ತು ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು. ರಾಜ್ಯದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜಾರಿಯಲ್ಲಿರುವ ಆರ್ಟಿಕಲ್ 371 J ವಿಶೇಷ ಸ್ಥಾನಮಾನವನ್ನು ಸರಿಯಾಗಿ ಸರಕಾರ ಸರಿಯಾಗಿ ಅನುಷ್ಠಾನಗೊಳಿಸಲಿ. ಕೇಂದ್ರ ಸರಕಾರವು ಜಾರಿಗೆ ತಂದಿರುವ ಜನವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ರೈತರ ಬೇಡಿಕೆಗಳನ್ನು ಈಡೇರಿಸಬೇಕು.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಸರಕಾರ ವಿಶೇಷ ಕಾಯ್ದೆಯನ್ನು ರೂಪಿಸಬೇಕು. ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ಸರಕಾರ ವಿಶೇಷ ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲಾ ಶೈಕ್ಷಣಿಕ ಸಮಸ್ಯೆಗಳಿಗೆ ಸರಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಸಭೆಯಲ್ಲಿ ತೆಗೆಯಲಾದ ನಿರ್ಣಯ ಕೈಗೊಳ್ಳಲಾಯಿತು.