ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಂತ ಹಂತವಾಗಿ ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರ ಅಭಿವೃದ್ಧಿ ಯೋಜನೆ ಕೈ ಬಿಟ್ಟು ಬೇರೆ ಜಿಲ್ಲೆಗೆ ಸಂಸ್ಥಾಳಂತ ಮಾಡುವ ಕೆಲಸ ಮಾಡುತ್ತಿದ್ದು, ಆಹಾರ ಶುದ್ಧಿಕರಣ ಕೇಂದ್ರ ನಂತರ ಸಿಯುಕೆ ಎಕ್ಸೆಲನ್ಸ್ ಕೇಂದ್ರ, ಟೆಕ್ಸೆಟೈಲ್ ಸಾರ್ಕ ಈಗ ಅಖಿಲ ಬಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಮ್ಸ್) ಕಲಬುರಗಿಯಿಂದ ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದು ಯಾವುದೆ ಕಾರಣಕ್ಕೆ ಈ ಭಾಗದ ಜನ ಸಹಿಸುವುದಿಲ್ಲ ಕುಡಲೆ ಎಮ್ಸ್ ಕಲಬುರಗಿಯಲ್ಲೆ ಮುಂದುವರಿಸಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಂಸದರು, ವಿಧಾನ ಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಒಗ್ಗಟ್ಟಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರ ಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರ ಕಲ್ಯಾಣ ಕರ್ನಾಟಕ ಬರೆ ನಾಮಕೆ ವಾಸ್ತೆ ಹೆಸರು ಬದಲಿಸಿದ್ದಾರೆ. ಬಜೆಟ್ ನಲ್ಲಿ ಸಹ ಯಾವುದೆ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಬದಲಾಗಿ ಇದ್ದಿದ್ದು ಮತ್ತು ಚಾಲ್ತಿ ಇರುವ ಅಭಿವೃದ್ಧಿ ಯೋಜನೆ ಹಾಗೂ ಹಲವಾರು ಕಚೇರಿಗಳು ಸ್ಥಳಾಂತರ ಮಾಡುತ್ತಿರುವುದು ಕಲ್ಯಾಣ ಕರ್ನಾಟಕಕ್ಕೆ ಘೊರ ಅನ್ಯಾಯವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.