ಕಲಬುರಗಿ: ರವಿವಾರ ಮಂಡ್ಯ ಜಿಲ್ಲೆಯ ಗಾಂಧಿಭವನದಲ್ಲಿ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಬೆಂಗಳೂರು,ಕರ್ನಾಟಕ ಬಾಲ ವಿಕಾಸ ಆಕಾಡೆಮಿ ಧಾರವಾಡ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಸಂಯುಕ್ತಾಶ್ರಯದಲ್ಲಿ 11ನೇ ಮಕ್ಕಳ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ ಅದ್ದೂರಿಯಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೇಯ ಖಾಸಗಿ ವಾಹಿನಿಯ ಹಿರಿಯ ಪತ್ರಕರ್ತ ಅಕ್ರಂಪಾಶಾ ಮೋಮಿನ್ ಅವರಿಗೆ ರಾಜ್ಯದ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು.
ಅಕ್ರಂಪಾಶಾ ಮೋಮಿನ್ ಅವರ 7 ವರ್ಷದ ಮಾಧ್ಯಮ ಕ್ಷೇತ್ರದ ಗಣನೀಯ ಸೇವೆಯನ್ನು ಪರಿಗಣಿಸಿ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಇದೆವೇಳೆ ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಪ್ರಶಸ್ತಿ ಪುರಸ್ಕಾರಮಾಡಲಾಯಿತು .
ಈ ಸಂದರ್ಭದಲ್ಲಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಕು.ಎಂ.ಎಸ್.ಅನನ್ಯ ಕಂಠಿ . ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಅಧ್ಯಕ್ಷರಾದ ಮಹೇಶ ಬಾಬು ಸುರ್ವೆ. ಮಂಡ್ಯ ಮಾಜಿ ಜಿ.ಪಂ ಮಾಜಿ ಅಧ್ಯಕ್ಷ ಸುರೇಶ ಕಂಠಿ.ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.