ಅಫಜಲಪುರ: ತಾಲ್ಲೂಕಿನ ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ಕನಿಷ್ಠ 21 ಸಾವಿರ ರೂ. ವೇತನ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಹಾಗೂ ರಾಜ್ಯದಲ್ಲಿ ಒಟ್ಟು 10450 ಜನ ಸಹಾಯಕರಿದು. ಸುಮಾರು 40 ವರ್ಷಗಳಿಂದ ಸತತವಾಗಿ ಕಾರ್ಯ ನಿರ್ವಹಿಸುತ್ತಿದ್ದು.ಇಗ ಕೇವಲ 12000 ರೂ ವೇತನ ವನ್ನು ನೀಡುತ್ತಿದ್ದಾರೆ ಇದರಿಂದಾಗಿ ನಮ್ಮ ಕುಟುಂಬ ನಡೆಸುವುದೆ ದೊಡ್ಡ ಕಷ್ಟ ವಾಗುತ್ತಿದೆ ಎಂದರು. ಆದ್ದರಿಂದ ಸರ್ಕಾರ ನಮ್ಮ ವೇತನ ವನ್ನು ಹೆಚ್ಚು ಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೆವೆ ಎಂದು ತಾಲ್ಲೂಕು ಗ್ರಾಮ ಸಹಾಯಕ ಸಂಘದ ಅಧ್ಯಕ್ಷರಾಗದ ಅಣ್ಣರಾಯ ಎಸ್,ಜಮಾದರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮ ಸೇವಕರು ಸುಮಾರು ವರ್ಷಗಳಿಂದ ಹಗಲು ರಾತ್ರಿಯನ್ನದೇ ನಿರಂತರ ಜನರ ಸೇವೆ ಮಾಡುತ್ತಿದ್ದಾರೆ ಅಲ್ಲದೇ ಈ ಭಾರಿ ಕೊರೊನ ಸಂಕಷ್ಟದಲ್ಲಿ ಸಮಯದಲ್ಲಿ ಕೂಡ ನಿರಂತರ ಸೇವೆ ಮಾಡಿದ್ದೇವೆ ಎಂದರು.
ಇದೆ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹೊನ್ನಪ್ಪ ಪಿ,ಜಮಾದರ ಮಾತನಾಡಿದರು. ಕಲಬುರ್ಗಿ ವಿಭಾಗದ ಉಪಾಧ್ಯಕ್ಷರಾದ ಲಕ್ಷ್ಮಿ ಪುತ್ರ ಸಾಗರ್.ಗ್ರಾಮ ಸಹಾಯಕರು ಶಿವಶರಣಪ್ಪ ಜಮಾದರ.ಸಿದ್ದು ಬಿ,ಜಮಾದರ ಆನೂರ ಸೇರಿದಂತೆ ಇತರರು ಇದ್ದರು.