ಆಳಂದ: ತಾಲೂಕಿನ ಕವಲಗಾ ಗ್ರಾಮದಲ್ಲಿ ರವಿವಾರ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಉದ್ಘಾಟನೆ ನಡೆಯಿತು. ಮೊದಲಿಗೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಗ್ರಾಮದ ಶ್ರೀ ಹನುಮಾನ್ ಮಂದಿರದಲ್ಲಿ ಕಾರ್ಯಕ್ರಮ ನಡೆಸಲಾಯಿತು. ನಂತರ ಕ.ರ.ವೇ ತಾಲೂಕಾಧ್ಯಕ್ಷ ಮಹಾಂತೇಶ ಸಣ್ಣಮನಿ ಕಾರ್ಯಕ್ರಮ ಉದ್ಘಾಟಿಸಿದರು.ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ಮಾತನಾಡಿ ನಾಡಿನ ನೆಲ,ಜಲ, ಭಾಷೆ,ಸಾಹಿತ್ಯ, ಇತಿಹಾಸ, ಉಳಿಸಿ ಬೆಳೆಸಲು ಕನ್ನಡಿಗರು ಮುಂದಾಗಬೇಕು ಹಾಗೂ ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯ ಸದಸ್ಯರು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಗಿರೀಶ್ ಪಾಟೀಲ್ ರನ್ನು ಗೌರವ ಅಧ್ಯಕ್ಷರಾಗಿ ನೇಮಿಸಲಾಯಿತು.
ಶರಣಬಸಪ್ಪ ಪುಲಾರ ರನ್ನು ಅಧ್ಯಕ್ಷರಾಗಿ, ಬಸವರಾಜ ಹಿರೇಮಠ, ರಾಜಶೇಖರ ಹಡಪದ,ಚಂದ್ರಕಾಂತ ಚಿಂಚೋಳಿ,ಮಹಾದೇವ ದೇಶಮುಖ,ಸಿದ್ದಲಿಂಗಯ್ಯ ಸ್ವಾಮಿ,ಶರಣಯ್ಯ ಸ್ವಾಮಿ,ಚಂದ್ರಕಾಂತ ಅವಟೆ,ಅನಂದರಾಯ ಯಲಾಶೆಟ್ಟಿ, ಜಲಾಲಶೇಕ್, ಪ್ರಭುಲಿಂಗ ಪಾಟೀಲ್, ಕಲ್ಯಾಣಿ, ಕ್ಷೇಮಲಿಂಗ ಕಂಭಾರ, ಮಡಿವಾಳಪ್ಪ ಮಡಿವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.