ದಿಶಾ ಬಂಧನ: ಎಐಡಿಎಸ್‌ಒ ಖಂಡನೆ

0
28

ವಾಡಿ: ವಿದ್ಯಾರ್ಥಿನಿ, ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಕೇಂದ್ರ ಬಿಜೆಪಿ ಸರಕಾರದ ದಮನಕಾರಿ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಕ್ಕನ್ನು ಆಡಳಿತವೇ ಹೊಸಕಿ ಹಾಕುತ್ತಿದೆ. ರೈತರ ಐತಿಹಾಸಿಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ದಿಶಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ದೇಶದ್ರೋಹದ ಸುಳ್ಳು ಆಪಾದನೆ ಹೊರಿಸಿದ್ದಾರೆ ಮತ್ತು ಇತರರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಈ ರೀತಿ ಬಂಧಿಸಿ ಧ್ವನಿ ಅಡಗಿಸುವ ಮೂಲಕ ಭಯಹುಟ್ಟಿಸುವ ಕೆಟ್ಟ ಕ್ರಮವಾಗಿದೆ ಎಂದು ದೂರಿದ್ದಾರೆ.

Contact Your\'s Advertisement; 9902492681

ಪ್ರಜಾತಾಂತ್ರಿಕ ದೇಶದಲ್ಲಿ ಸರ್ಕಾರವು ಭಿನ್ನಾಭಿಪ್ರಾಯಗಳಿಗೆ ಹೆದರಿ ಅವುಗಳನ್ನು ಹತ್ತಿಕ್ಕುವ ಬದಲಿಗೆ ವಿದ್ಯಾರ್ಥಿ-ಯುವಜನರು ಮತ್ತು ಜನಸಾಮಾನ್ಯರು ಬೇರೆ ಬೇರೆ ವಿ?ಯಗಳ ಬಗ್ಗೆ ಸ್ವತಂತ್ರವಾಗಿ ಆಲೋಚಿಸಲು, ಸ್ವತಂತ್ರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸಬೇಕು. ಈ ಮೂಲಕ ಸಮಾಜದ ಏಳಿಗೆಗೆ ಅನುವು ಮಾಡಿಕೊಡಬೇಕು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, ಅತಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ ಯುವಜನರು ಬಹಳ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇತಿಹಾಸದುದ್ದಕ್ಕೂ ವಿದ್ಯಾರ್ಥಿ ಯುವಜನರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಇಂದು ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕೇವಲ ಒಂದು ಸರಳ ಟ್ವೀಟ್ ಮಾಡಿರುವುದು ದೇಶದ್ರೋಹದಂತಹ ಅಪರಾಧವಲ್ಲ. ಸರ್ಕಾರದ ಈ ಕ್ರಮವನ್ನು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ಬಹಳ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಬಹಳ ಅಧಿಕಾರಶಾಹಿಯಾಗಿ ನಡೆದುಕೊಂಡು ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಕಿತ್ತುಕೊಂಡು ಪ್ರತಿಕಾರದ ಧೋರಣೆಯನ್ನು ತೋರಿದೆ.

ಒಬ್ಬ ವ್ಯಕ್ತಿ ದೇಶದ ಸಾರ್ವಭೌಮತ್ವಕ್ಕೆ ದಕ್ಕೆ ತರುವ ಉದ್ದೇಶದಿಂದ ಜನರನ್ನು ಸಂಘಟಿಸಿ ದೇಶದ ವಿರುದ್ಧ ಧ್ವನಿಯೆತ್ತಿದರೆ ಅದು ದೇಶದ್ರೋಹ ವಾಗಬಹುದು. ಅಲ್ಲದೆ ಬೇರೆ ರಾಜ್ಯದ ವಿದ್ಯಾರ್ಥಿಯನ್ನು ಬಂಧಿಸುವಾಗ ಯಾವುದೇ ರೀತಿಯ ಕಾನೂನು ಬದ್ಧವಾದ ಕ್ರಮಗಳನ್ನು ಕೇಂದ್ರ ಸರ್ಕಾರ ಅನುಸರಿಸಿಲ್ಲ ಎಂದು ಆಪಾದಿಸಿರುವ ವಿದ್ಯಾರ್ಥಿ ಮುಖಂಡರು, ಕೂಡಲೇ ವಿದ್ಯಾರ್ಥಿನಿಯನ್ನು ಬಿಡುಗಡೆ ಮಾಡಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here