ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ತೂತು ಬಿದ್ದ ಹಡಗಿಗೆ ನಾವಿಕನಾಗಿರುವೆ: ರಾಜಕುಮಾರ ತೆಲ್ಕೂರ್

0
98

ಸುರಪುರ: ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಎಂಬುದು ತೂತು ಬಿದ್ದ ಹಡಗಾಗಿದ್ದು ೨೦೦ ಕೋಟಿ ರೂಪಾಯಿಗಳ ನಷ್ಟದಲ್ಲಿದೆ,ಇದಕ್ಕೆ ಈಗ ನಾನು ನಾವಿಕನಾಗಿ ಬಂದಿದ್ದು ಇದನ್ನು ರಾಜ್ಯದ ಮೂರು ಪ್ರಮುಖ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದನ್ನಾಗಿ ಮಾಡಿ ತೋರಿಸುವುದಾಗಿ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗು ಈಕರಾರಸಾಸಂಸ್ಥೆಯ ಅಧ್ಯಕ್ಷ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮಾತನಾಡಿದರು.

ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿ,ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವ ಆಸೆಪಟ್ಟವನಲ್ಲ ಅಲ್ಲದೆ ಇನ್ನು ಮೂರು ವರ್ಷಗಳಲ್ಲಿ ನಷ್ಟದಲ್ಲಿರುವ ಬ್ಯಾಂಕ್‌ನ್ನು ಅಭಿವೃಧ್ಧಿ ಮಾಡಿ ನಂತರ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು.ಇನ್ನು ಯಾದಗಿರಿ ಜಿಲ್ಲೆಯಲ್ಲಿ ಡಿಸಿಸಿ ಕೇಂದ್ರ ಕಚೇರಿ ಆರಂಭಿಸಲು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ,ಸರಕಾರ ಅದನ್ನು ಮಾಡಲಿದೆ ಅಲ್ಲದೆ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಎರಡು ಜಿಲ್ಲೆಗಳಲ್ಲಿ ೫೦ಕ್ಕೂ ಹೆಚ್ಚು ಡಿಸಿಸಿ ಶಾಖೆಗಳನ್ನು ಆರಂಭಿಸುವುದು ನನ್ನ ಗುರಿಯಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಇನ್ನೂ ಸಹಕಾರ ಸಂಘಗಳ ಸಂಖ್ಯೆ ಕಡಿಮೆ ಇದೆ,ಹೆಚ್ಚು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಈ ಭಾಗದ ಜನರು ಅಭೀವೃಧ್ಧಿ ಹೊಂದಬೇಕಿದೆ,ಇನ್ನು ಸುರಪುರದಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಉತ್ತಮವಾದ ರೀತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಅಭೀವೃಧ್ಧಿ ಪಥದಲ್ಲಿ ಸಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀ ತೆಲ್ಕೂರ್ ಶಾಸಕ ನರಸಿಂಹ ನಾಯಕ (ರಾಜುಗೌಡ) ಡಿಸಿಸಿ ಬ್ಯಾಂಕ್ ಎಮ್‌ಡಿ ನಿಂಬಾಳಕರ್ ಮುಖಂಡರಾದ ಗೌತಮ್ ಪಾಟೀಲ್ ಯಲ್ಲಪ್ಪ ಕುರಕುಂದಿ ಶಾಂತಗೌಡ ಪಾಟೀಲ್ ಚನ್ನಪಟ್ಟಣ ಇತರೆ ಮುಖಂಡರಿಗು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಮುಖಂಡರಾದ ಹೆಚ್.ಸಿ ಪಾಟೀಲ್ ಎಸ್.ಎಮ್.ಕನಕರಡ್ಡಿ ರಾಮನಗೌಡ ಜಯಲಲಿತ ಪಾಟೀಲ್ ಶ್ವೇತಾ ಎಮ್ ಗುಳಗಿ ಸಣ್ಣ ದೇಸಾಯಿ ಪ್ರಕಾಶ ಸಜ್ಜನ್ ಮಂಜುನಾಥ ಜಾಲಹಳ್ಳಿ ಮಂಜುನಾಥ ಬಳಿ ಸೇರಿದಂತೆ ಬ್ಯಾಂಕ್‌ನ ಎಲ್ಲಾ ನಿರ್ದೇಶಕರು ಹಾಗು ಸಲಹಾ ಸಮಿತಿ ಸದಸ್ಯರಿದ್ದರು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಪ್ರಕಾಶ ಅಂಗಡಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here