ಕಲಬುರಗಿ: ಕರುಣೇಶ್ವರ ನಗರದಿಂದ ದಕ್ಷಿಣ ಕಾಶಿ ಶ್ರೀ ಕ್ಷೇತ್ರ ತಿಂತಿನಿ ಜಗದ್ಗುರು ಶ್ರೀ ಮೌನೇಶ್ವರ ದರ್ಶನಕ್ಕೆ ಮಹಾ ಪಾದಯಾತ್ರೆಯನ್ನು ಹಮ್ಮಿಕೊಳಲಾಯಿತು.
ಈ ಸಂದರ್ಭದಲ್ಲಿ ಮನೋಹರ ಪೊದ್ದಾರ ಮಾತನಾಡಿ. ಬದುಕನ್ನು ಪ್ರೀತಿಸಿ, ಹೃದಯ ಶ್ರೀಮಂತಿಕೆಯೊಂದಿಗೆ ಉತ್ತಮ ಆಚಾರ, ವಿಚಾರ , ಸಾತ್ವಿಕತೆ , ಪ್ರೀತಿ ವಿಶ್ವಾಸ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆದು ಸಜ್ಜನರಾಗಿ ಸಾರ್ಥಕ ಬದುಕನ್ನು ನಡೆಸಬೇಕು ಎಂದು ಹೇಳಿದರು. ಇಡಿ ವಿಶ್ವವೇ ಬೆಚ್ಚಿ ಬಿಳಿಸಿದ್ದ ಕೊರೊನಾ ಸೋಂಕಿನಿಂದ ಸಮಾಜ ಮುಕ್ತಗೊಳಿಸಲು, ರೈತರು, ಬಡವರ ಕಲ್ಯಾಣಕ್ಕಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ಶ್ರೀ ರಾಮಚಂದ್ರ ಸ್ವಾಮಿಗಳು ಪಾದಯಾತ್ರೆಗೆ ಚಾಲನೆ ನೀಡಿದರು. ಮೌನೇಶ ನಿಂಬಳಾ, ಗಂಗಾಧರ ಸುತಾರ, ಭಗವಂತಪ್ಪ ಸುತಾರ, ಪ್ರಭು ಜೋಗೂರ, ಶಿವಾನಂದ ಕಲ್ಲೂರ, ದೇವಿಂದ್ರ ದೇಸಾಯಿ ಕಲ್ಲೂರ, ಮಹಾರುದ್ರಪ್ಪ ಸುತಾರ, ಕಾಳಪ್ಪ ಸುತಾರ, ಮೌನೇಶ ಹೂವಿನಳ್ಳಿ, ಶಾಮರಾವ ರಂಗನಪೇಟ, ಕಲ್ಯಾಣಕುಮಾರ ಶಿಕ್ಷಕರು, ಲಕ್ಷ್ಮಣ ಬೋಸಗಿ, ಖಾನ ಪಟೇಲ ಹರವಾಳ, ಸಿದ್ದಣ್ಣ ಹರವಾಳ, ಸಿದ್ದಪ್ಪ ಯಲಗೊಡ, ಅಶೋಕ ಸೇನಾರ ಯಡ್ರಾಮಿ, ಅಣವೀರಪ್ಪ ಕುಡಕಿ, ಗುಂಡಪ್ಪ ಹೂವಿನಳ್ಳಿ ಇದ್ದರು.