ಯಾನಾಗುಂದಿಯಿಂದ ಶುಕ್ರವಾರ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಚಂಡ್ರಕಿಯವರಿಗೆ ಬೃಹತ್ ಪಾದಯಾತ್ರೆ

0
1074

ಕಲಬುರಗಿ: ರೈತರ ಸಾಲ ಮನ್ನಾ ವಿಫಲ, ಹೊಸ ಸಾಲ ಸಿಗದ ಹಿನ್ನೆಲೆ, ಡಿಸಿಸಿ ಬ್ಯಾಂಕ್ ದಿವಾಳಿ, 371(ಜೆ) ಅಡಿ 40.೦೦೦ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯ. ಶಾಸಕರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ವಿರೋದಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಜನವಿರೋಧಿಯಾಗಿದ್ದು, ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ನಾಟಕವಾಗಿದೆ ಎಂದು ವ್ಯಂಗ್ಯವಾಡುತ, ಸಿಎಂ ಗ್ರಾಮ ವಾಸ್ತವ್ಯ ಹಿನ್ನಲೆ ರಾಜ್ಯದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರ ಚಜ್ವಲಂತ ಸಮಸ್ಯೆಗಳನ್ನು ಸಿಎಂ ಕುಮಾರಸ್ವಾಮಿಯವರಿಗೆ ಮನವರಿಕೆ ಮಾಡಲು ಇಂದು ಗುರುಮಿಠಕಲನ ಯಾನಾಗುಂದಿಯಿಂದ ಸಾವಿರಾರು ಜನ ರೈತರೊಂದಿಗೆ ಪಾದಯಾತ್ರೆ ಮೂಲಕ ಚಂಡ್ರಿಕಿ ಗ್ರಾಮಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ತಿಳಿಸಿದರು.

Contact Your\'s Advertisement; 9902492681

ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೀರಿ. ಸಾಲ ಮನ್ನಾದ ಪೈಲಟ್ ಯೋಜನೆಯಲ್ಲಿ ಸೇಡಂ ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದು ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ರೈತರು ಸಾಲಮನ್ನಾಗಳು ಅರ್ಹರಾಗಿದ್ದಾರೆ ಆದರೆ ಇದುವರೆಗೆ ಕೇವಲ ನೂರಾರು ರೈತರು ಮಾತ್ರ ಸಾಲಮನ್ನಾಕ್ಕೆ ಅರ್ಹತೆ ಪಡೆದಿದ್ದು ಋಣ ಮಾತ್ರ ಪತ್ರ ವಿತರಿಸಲಾಗಿದೆ. ಆದರೆ ಅದು ಸಾವಿರಾರು ರೈತರ ಸಾಲ ಮನ್ನಾವೂ ಆಗದೆ ಮರು ಸಾಲವೂ ಪಡೆದುಕೊಳ್ಳಲಾಗದೇ ತೀವ್ರ ತೊಂದರೆಗೆ ಸಿಲುಕಿದ್ದಾರೆ ಆದ್ದರಿಂದ ಸಿಎಂ ಕುಮಾರಸ್ವಾಮಿ ಅವರು ಈಗಲಾದರೂ ರೈತರ ಸಮಸ್ಯೆಗಳಂತೆ ಎಚ್ಚೆತ್ತುಕೊಂಡು ಸಂಪೂರ್ಣ ಸಾಲ ಮನ್ನಾಕ್ಕೆ ಒಂದು ಡೆಡ್ ಲೈನ್ ನೀಡಬೇಕೆಂದು ಆಗ್ರಹಿಸಿದರು.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿ ಕಾಡುತ್ತಿರುವುದರಿಂದ ಸಿಎಂ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡುವ ಬದಲು ಈ ಭಾಗದಲ್ಲಿ ಖಾಲಿ ಇರುವ ಮೂವತ್ತು ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಮನವಿ ಮಾಡಿದರು.
ಸೇಡಂ ತಾಲ್ಲೂಕಿನರುವ ಕಾಗಿಣಾ ನದಿಯನ್ನು ಏತ ನೀರಾವರಿ ಯೋಜನೆಯಲ್ಲಿ ಸೇರಿಸಿ. ಈ ಭಾಗದಲ್ಲಿ ವಿಶೇಷವಾದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ನದಿ ತೀರದ ಜನರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಯಾದಗಿರಿ ಕಲಬುರಗಿ ಭಾಗದ ಡಿಸಿಸಿ ಬ್ಯಾಂಕ್ ದಿವಾಳಿ ಹಂತಕ್ಕೆ ತಲುಪಿದ್ದು ತಕ್ಷಣ ಸಿಎಂ ಅವರು ಡಿಸಿಸಿ ಸಹಕಾರಿ ಬ್ಯಾಂಕ್ ಸೂಪರ್ ಸೀಡ್ ಮಾಡಿ ರೈತರ ಮನವಿಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು. ರಾಜ್ಯದ ಜನತೆಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಮರಳು ಸಿಗುತ್ತಿಲ್ಲ ಆದ್ದರಿಂದ ಮರಳು ನೀತಿಯನ್ನು ಸರಳೀಕರಣಗೊಳಿಸಿ ಎಲ್ಲ ಜನರಿಗೆ ಮರಳು ಸಿಗುವಂತೆ ನೋಡಿಕೊಳ್ಳಬೇಕು, ನಗರಾಭಿವೃದ್ಧಿ ಪ್ರಾಧಿಕಾರದಡಿ ಜನರಿಗೆ ತಮ್ಮ ಸೈಟುಗಳನ್ನು ರಿಜಿಸ್ಟೇಷನ್ ಮಾಡಿಸಿಕೊಳ್ಳಲು ಹಾಗೂ ಮನೆ ಕಟ್ಟಿಕೊಳ್ಳಲು ಪರವಾನಿಗೆ ಸಿಗದೇ ಜನರು ತೀವ್ರ ತೊಂದರೆಯಾಗುತ್ತಿದೆ ಆದ್ದರಿಂದ ಈ ಎಲ್ಲ ಸಮಸ್ಯೆಗಳಿಗೆ ಈಡೇರಿಸಲು ಸುಗ್ರೀವಾಜ್ಞೆಯನ್ನು ಹೊರಡಿಸಿ ಜನರಿಗೆ ಸಹಕರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಈ ಮೇಲಿನ ಎಲ್ಲಾ ಎಲ್ಲ ಸಮಸ್ಯೆಗಳ ಕುರಿತು ಸಿಎಂ ಕುಮಾರ ಸಾರಿಗೆ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಹದಿನೈದು ದಿನದ ಒಳಗೆ ನಮ್ಮ ಮನವಿಗೆ ಸ್ಪಂದಿಸದೇ ಹೋದರೆ ಸೇಡಂನಿಂದ ಬೆಂಗಳೂರಿನವರೆಗೆ ರಾಜ್ಯದ ರೈತರೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಾಗರೆಡ್ಡಿ ಪಾಟೀಲ್ ದೇಶ್ಮುಖ್ ಕಲ್ಯಾಣಪ್ಪ ಪಾಟೀಲ. ಪರ್ವತರೆಡ್ಡಿ ಪಾಟೀಲ್ , ಮುಕುಂದ ದೇಶಪಾಂಡೆ, ಶರಣಪ್ಪ ತಳವಾರ, ಅನಿಲ ಐನಾಪುರ, ಎಕ್ಬಾಲ್ ಖಾನ್, ಶ್ರೀನಾಥ ಲಕ್ಷ್ಮೀನಾರಾಯಣ, ಓಂ ಪ್ರಕಾಶ್ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here