ಯೋಗದಿಂದ ರೋಗ ಮುಕ್ತಿ: ರಮಾನಂದ ಅವಧೂತ ಶ್ರೀಗಳು

0
72

ಶಹಾಪುರ: ದಿನಾಲೂ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯ ರೋಗರುಜಿನಗಳಿ೦ದ ಮುಕ್ತಿ ಹೊಂದುತ್ತಾನೆ ಎಂದು ದೋರನಹಳ್ಳಿಯ  ಸಿದ್ಧಾರೂಢ ಸಂಸ್ಥಾನದ ರಮಾನಂದ ಅವಧೂತ ಶ್ರೀಗಳು ಹೇಳಿದರು.

ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ದೋರನಹಳ್ಳಿ, ಮತ್ತು  ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಶಹಾಪುರ, ಇವುಗಳ ಆಶ್ರಯದಲ್ಲಿ ಇಂದು ಬೆಳಗ್ಗೆ ೬ ಗಂಟೆಗೆ ದೋರನಹಳ್ಳಿಯ ಸಿದ್ಧಾರೂಢ ಮಠದ  ಆವರಣದಲ್ಲಿ ಆಯೋಜಿಸಿರುವ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ  ಜೊತೆಗೆ ಶಹಾಪುರ ತಾಲ್ಲೂಕು ಯುವ ಸಂಸತ್ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ಯಾಂತ್ರಿಕ ಬದುಕಿನತ್ತ ಸಾಗಿ ರೋಗಗಳಿಗೆ  ತುತ್ತಾಗುತ್ತಿದ್ದಾನೆ ಆದ್ದರಿಂದ ದಿನದ ಒಂದು ಗಂಟೆಯ ಕಾಲ ಯೋಗಾಭ್ಯಾಸ ಮಾಡುವುದು ಉತ್ತಮ ಎಂದು ಪತಂಜಲಿ ಯೋಗ ಸಮಿತಿಯ ಮುಖ್ಯಸ್ಥರಾದ ಬಸವರಾಜ ಕಡಗಂಚಿ ಅವರು ಸಲಹೆ ನೀಡಿದರು.

ಮನುಷ್ಯ ದೈಹಿಕವಾಗಿ ಕೆಲಸಗಳು ಮಾಡುತ್ತಿಲ್ಲ ಬೌದ್ಧಿಕವಾಗಿ ಕೆಲಸಗಳು ಜಾಸ್ತಿ ಮಾಡುವುದರಿಂದ  ರೋಗ ರುಜಿನಗಳಿಗೆ ಬಹುಬೇಗ ಬಲಿಯಾಗುತ್ತಿದ್ದಾನೆ ಎಂದು ಪತಂಜಲಿ ಯೋಗ ಸಮಿತಿಯ ಸದಸ್ಯರಾದ ಜಗದೀಶ್ ಹೊನ್ಕಲ್ ಬೇಸರ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷರಾದ ಶಿವರಾಜ್ ಜ೦ಗಳಿ, ಅನುರಾಧಾ ಫಿರಂಗಿ, ಶಾಂತು ತೋಟಿಗೇರ, ಮಹೇಶ್ ರಂಜಿತ್,ದೋರನಹಳ್ಳಿ  ಗ್ರಾಮದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here