ಕಲಬುರಗಿ: ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಸಮಾಜದ ಮುಖಂಡರು ಘತ್ತರಗಿ ಭಾಗ್ಯವಂತಿ ದೇವಿಯ ಮೂರೆ ಹೋಗಿದ್ದಾರೆ. ೨೦೨೧-೨೦೨೨ ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹಡಪದ (ಕ್ಷೌರಿಕ) ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಜಾರಿಗೆ ತರುಬೇಕು ಎಂದು ಸಿಡುಗಾಯಿ ಒಡೆದರು.
ಸಮಾಜದ ಮುಖಂಡ ಈರಣ್ಣಾ ಸಿ.ಹಡಪದ ಸಣ್ಣೂರ ಅವರನ್ನು ಯಾವುದಾದರೊಂದು ನಿಗಮ ಮಂಡಳಿಗೆ ನಾಮನಿರ್ದೇಶನ ಮಾಡಬೇಕು, ಹಡಪದ ಅಪ್ಪಣ (ಕ್ಷೌರಿಕ) ಸಮಾಜವನ್ನು ಎಷ್ಟಿಗೆ ಸೇರಿಸಬೇಕು ಎಂದು ಭಾಗ್ಯವಂತಿ ದೇವಿಯಲ್ಲಿ ಪ್ರಾರ್ಥನೆ ಮಾಡಿ ೧೦೧ ತೆಂಗಿನ ಕಾಯಿ, ಒಡೆದರು.
ಯೂನಿಯನ್ ಬ್ಯಾಂಕ್ ವತಿಯಿಂದ ಸರಕಾರಿ ಶಾಲೆಗೆ ಕಲಿಕಾ ಸಾಮಗ್ರಿ ವಿತರಣೆ
ಕಲಬುರಗಿ ಜಿಲ್ಲೆಯ ಯೂತ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ.ಹಡಪದ ಸುಗೂರ, ಶಹಾಬಾದ ತಾಲೂಕು ನಗರ ಘಟಕದ ಕಾರ್ಯಾಧ್ಯಕ್ಷ ಶಿವಲಿಂಗ ಹಡಪದ, ಸಿದ್ದಲಿಂಗಯ್ಯ ಸ್ವಾಮಿ, ಮಲ್ಲಣ್ಣಾ ಹಡಪದ, ಚಂದ್ರಕಾಂತ್ ಹಡಪದ. ಚಳಕಾಪೂರ, ಅಣ್ಣವೀರ ಹಡಪದ ಸಾವಳಗಿ ಇದ್ದರು.