ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ನಿರ್ಮಿಸುವಂತೆ ಆಗ್ರಹ

0
272

ಶಹಾಬಾದ: ನಗರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸುವಂತೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ಸೂಡಿ ನಗರಸಭೆ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರಿಗೆ  ಆಗ್ರಹಿಸಿದ್ದಾರೆ.

ಶಹಾಬಾದ ನಗರವು ತಾಲೂಕಾವಾಗಿ ಎರಡು ವರ್ಷಗಳಾಗಿವೆ.ಅಲ್ಲದೇ ನಗರಸಭೆಯಾಗಿ ಅನೇಕ ವರ್ಷಗಳಾದರೂ ನಗರಸಭೆಯ ವ್ಯಾಪ್ತಿಯ ಒಂದೆರಡು ವಾರ್ಡಗಳು ಬಿಟ್ಟರೇ ಸುಮಾರು ೨೫ ವಾರ್ಡಗಳಲ್ಲಿ ಶೌಚಾಲಯ ಹಾಗೂ ಮೂತ್ರಾಲಯಗಳಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.ಅಲ್ಲದೇ ಕೆಲವು ವಾರ್ಡಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ.ಆದರೆ ಉದ್ಘಾಟನೆಯಾಗಿಲ್ಲ.ಇನ್ನು ಕೆಲವು ಕೆಲವು ಕಡೆ ಉದ್ಘಾಟನೆಯಾಗದ ಮುನ್ನವೇ ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಪ್ರತಿನಿತ್ಯ ನಗರಕ್ಕೆ ಸಾವಿರಾರು ಜನರು ಕೆಲಸದ ನಿಮಿತ್ತ ಬಂದು ಹೋಗುತ್ತಾರೆ.

Contact Your\'s Advertisement; 9902492681

ಶಹಾಬಾದ: ಸರ್ವಜ್ಞ ಜಯಂತಿ

ಇದರಿಂದ ಸರಕಾರಿ ಕಚೇರಿಗಳು ಹಾಗೂ ಮುಖ್ಯ ರಸ್ತೆಗಳು ಜನದಟ್ಟಣೆಯಿಂದ ಕೂಡಿರುತ್ತವೆ. ಪ್ರತಿ ರವಿವಾರ ವಾರದ ಸಂತೆ ಜರುಗುತ್ತದೆ. ಈ ಸಂದರ್ಭದಲ್ಲಿ ನೆಸರ್ಗಿಕ ಕರೆಗಳಿಗೆ ಜನರು ಪರದಾಡುವಂತಾಗಿದೆ. ಅದರಲ್ಲೂ ಮಹಿಳೆಯರ ಸ್ಥಿತಿ ಹೇಳತೀರದು. ಪುರು?ರು ಹೇಗೋ ಇಂತಹ ಕೆಲಸಗಳನ್ನು ನಿಭಾಯಿಸಿಕೊಳ್ಳುತ್ತಾರೆ.

ನಗರಸಭೆ ಮೂಲ ಸೌಲಭ್ಯಗಳನ್ನು ನಿರ್ಮಾಣ ಮಾಡದೆ ಇರುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಈ ಸೌಲಭ್ಯಗಳು ಮರೀಚಿಕೆಯಾಗಿವೆ. ಅದರಲ್ಲೂ ಪ್ರಮುಖ ರಸ್ತೆಗಳು ಸೇರಿ ಜನನಿಬಿಡ ಪ್ರದೇಶಗಳಲ್ಲಿ, ವೃತ್ತಗಳಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸಿಲ್ಲ.ಕೂಡಲೇ ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು.ಇಲ್ಲದಿದ್ದರೇ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಆಸ್ಪತ್ರೆ ವೈದ್ಯನ ವಿರುಧ್ಧ ಜಯ ಕರ್ನಾಟಕ ಪ್ರತಿಭಟನೆ

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರತಿ.ಎಸ್.ಕೂಡಿ, ಶಶಿಕಲಾ ಸಜ್ಜನ್, ಸುಧಾ ರಮೇಶ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here