ಯಾದಗಿರಿ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ರಾಜ್ಯಾಧ್ಯಕ್ಷರಾದ ಟಿ. ತಿಮ್ಮೆಗೌಡ ಅವರ ಆದೇಶದ ಮೇರೆಗೆ ಯಾದಗಿರಿ ಜಿಲ್ಲಾ ಘಟಕದ ಹೊಸ ಸಮಿತಿ ರಚಿಸುವ ಮೂಲಕ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಯಾದಗಿರಿ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳು: ಗಂಗಾಧರ ಬಡಿಗೇರ (ಪ್ರಧಾನ ಕಾರ್ಯದರ್ಶಿ), ಅಶೋಕ ಚೌದರಿ ಶಹಾಪೂರ, ಮಡಿವಾಳಪ್ಪ ಪಾಟೀಲ್ ಹೆಗ್ಗನದೊಡ್ಡಿ (ಕಾರ್ಯದರ್ಶಿಗಳು), ವೀರಣ್ಣ ಕಲಿಕೇರಿ ಕೆಂಭಾವಿ (ಖಜಾಂಚಿ), ನೀಲಪ್ಪ ಚೌದರಿ ಶಹಾಪೂರ, ಮಲ್ಲಿಕಾರ್ಜುನ ಬಳಿ ಯಾದಗಿರಿ, ಮುದ್ದಪ್ಪ ಅಪ್ಪಾಗೋಳ ಸುರಪುರ (ಸಂಘಟನಾ ಕಾರ್ಯದರ್ಶಿಗಳು).
ಎಸಿಸಿ ಸಿಮೆಂಟ್ ಸಾಗಾಣಿಕೆ ಸ್ಥಗಿತಗೊಳಿಸಿ ಪ್ರತಿಭಟನೆ
ಪದನಿಮಿತ್ಯ ಸದಸ್ಯರು:- ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ, ಸಹಾಯಕ ನಿರ್ದೇಶಕರು ಯುವ ಸಭಲಿಕರಣ ಮತ್ತು ಕ್ರೀಡಾ ಇಲಾಖೆ ಯಾದಗಿರಿ, ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಪ್ರಸಾರ ಇಲಾಖೆ ಯಾದಗಿರಿ, ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ,
ಗೌರವ ಸಲಹಾ ಸಮಿತಿಯ ಸದಸ್ಯರು: ಡಿ.ಎನ್.ಅಕ್ಕಿ ಗೋಗಿ, ಶಾಂತಪ್ಪ ಗೋಗಿ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು), ಶಾಂತಗೌಡ ಮಾಲಿಪಾಟಿಲ್ ಕರಡಕಲ್, ಶಿವಪ್ಪ ಹೆಬ್ಬಾಳ ಕೋಡೆಕಲ್, ಲಕ್ಷ್ಮಣ ಗುತ್ತೆದಾರ ಸುರಪುರ, ಶಿವಮೂರ್ತಿ ತನಿಖೆದಾರ ಪೇಠ ಅಮ್ಮಾಪುರ, ಬಸಲಿಂಗಮ್ಮ ಗೋಗಿ (ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಮುರುಗೇಶ ಹುಣಸಗಿ ಕೆಂಭಾವಿ, ಶರಣಪ್ಪ ಮಡ್ನಾಳ, ಬಸಪ್ಪ ಹಣಮಸಾಗರ (ಲೋಕೋತ್ಸವ ಪ್ರಶಸ್ತಿ ಪುರಸ್ಕೃತರು).
ಕಳಬೇಡ ಎಂಬ ಬಸವ ಪದವೇ ಬದುಕಿಗೆ ಸವಾಲು
ಮಲ್ಲಿಕಾರ್ಜುನ ಅರುಣಿ ಗಾಜರಕೋಟ, ಸಂಗನಗೌಡ ಧನರೆಡ್ಡಿ ರಾಜನಕೊಳ್ಳುರು, ದೇವರಾಜ ನಾಯಕ ವರ್ಕನಳ್ಳಿ, ಶಿವರೆಡ್ಡಿ ಪಾಟೀಲ್ ಕೊಳ್ಳುರು, ಬಸವರೆಡ್ಡಿ ಎಂ.ಟಿ.ಪಲ್ಲಿ, ಮಲ್ಲಯ್ಯಸ್ವಾಮಿ ಇಟಗಿ, ಮಲ್ಲಿಕಾರ್ಜುನರೆಡ್ಡಿ ಕೊಳಿಹಾಳ ಅಮ್ಮಾಪುರ, ಅಂಬ್ರೇಶ ಕುಂಬಾರ ರಂಗಂಪೇಟ, (ಕಾರ್ಯಕಾರಿ ಸಮಿತಿ ಸದಸ್ಯರು).
ಇವರನ್ನು ನೇಮಕಮಾಡಿ ಆದೇಶ ಹೊರಡಿಸಲಾಗಿದೆ. ಬರುವ ದಿನಗಳಲ್ಲಿ ತಾವುಗಳು ಜಾನಪದ ಕ್ಷೇತ್ರದ ಸಂರಕ್ಷಣೆ, ಪ್ರಸರಣ, ದಾಖಲಾತಿ, ಕ್ಷೇತ್ರಕಾರ್ಯ, ಜನಪದ ಪರಂಪರೆಯ ಸಂವರ್ಧನೆ, ಜನಪದ ಕಲಾವಿಧರಿಗೆ ವೇದಿಕೆ ಒದಗಿಸುವ ಜೊತೆಗೆ, ಜನಪದ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸಬೆಕು ಎಂದು ಆದೇಶದಲ್ಲಿ ಪ್ರಕಾಶ ಅಂಗಡಿ ಕನ್ನೆಳ್ಳಿ ತಿಳಿಸಿದ್ದಾರೆ.