ಕಲ್ಯಾಣ ಕರ್ನಾಟಕ ಅಭಿವೃದ್ಧಿ ಜನಪ್ರತಿನಿಧಿಗಳ ಅಸಡ್ಡೆ: ದಸ್ತಿ

0
37

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಿಂದುಳಿಯಲು ಜನಪ್ರತಿನಿಧಿಗಳ ನೀರ್ಲಕ್ಷವೇ ಕಾರಣ ಎಂದು ಹಿರಿಯ ಹೋರಾಗಾರರಾದ ಲಕ್ಷ್ಮಣ ದಸ್ತಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಉತ್ತರ ವಲಯ ವತಿಯಿಂದ ಕನ್ನಡ ಭವನದ ಸುವರ್ಣ ಭವನದಲ್ಲಿ ಇಂದು ನಡೆದ “ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಕನ್ನಡ ಭಾಷೆ ಉಪನ್ಯಾಸ ಹಾಗೂ ಕನ್ನಡ ಸಿರಿ” ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಹೆಸರಿಟ್ಟರೆ ಸಾಲದು.ಈ ಭಾಗದ ಜ್ವಲಂತ ಸಮಸ್ಯೆ ಗೆ ಸ್ಪಂದಿಸುವ ಕೆಲಸ ಮಾಡಬೇಕು.ಇಲ್ಲಿ ಸಂಪನ್ಮೂಲಕ್ಕೆ ಕೊರತೆ ಇಲ್ಲ.ಆದರೆ ಇಚ್ಛಾಶಕ್ತಿ ಪ್ರದರ್ಶಿಸಬೇಕು.ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂವಿಧಾದನದ ೩೭೧ ಕಲಂ ಜೆ ಜಾರಿಗೆ ಬಂದಿದೆ.ಆದರೆ ಸಮರ್ಪಕ ಅನುಷ್ಠಾನ ಆಗಿಲ್ಲ.ಕೇಂದ್ರ ಮಾತ್ತು ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಕಲಬುರಗಿ ಕನ್ನಡ ಭಾಷೆಯ ತವರುರಾಗಿದೆ.ಕನ್ಡಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

Contact Your\'s Advertisement; 9902492681

ಎಸಿಸಿ ಸಿಮೆಂಟ್ ಸಾಗಾಣಿಕೆ ಸ್ಥಗಿತಗೊಳಿಸಿ ಪ್ರತಿಭಟನೆ

ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ತರ ವಲಯದ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಕಳೆದ ಐದು ವರ್ಷಗಳಲ್ಲಿ ಅನೇಕ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಉತ್ತರ ವಲಯದ ವತಿಯಿಂದ ನಡೆದಿದೆ.ಅಲ್ಪಸಂಖ್ಯಾತರಲ್ಲಿ ಆಡಳಿತ ಭಾಷೆ ಕನ್ನಡ ಕಲಿಯಬೇಕೆಂಬ ಉತ್ಸಾಹವಿದೆ.ಅವರಿಗೆ ಸಮರ್ಪಕ ವೇದಿಕೆ ಕಲ್ಪಿಸಿದ ತೃಪ್ತಿ ತಂದಿದೆ.ಜನಪ್ರತಿನಿಧಿಗಳು ಕನ್ನಡ ಕಾರ್ಯಕ್ರಮಗಳಿಗೆ ಬರದೆ ಕನ್ನಡಕ್ಕೆ ಪದೇ ಪದೇ ಅವಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಕಲಬುರಗಿ ಉತ್ತರ ವಲಯದ ವತಿಯಿಂದ ಕನ್ನಡ ಕಟ್ಟುವ ಕೆಲಸ ಮಾಡಿದ್ದು ಖುಷಿ ತಂದಿದೆ.ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅಲ್ಪಸಂಖ್ಯಾತರ ಕನ್ನಡಾಭಿಮಾನ ಗುರುತಿಸಿ ಸನ್ಮಾನಿಸುವ ಕೆಲಸ ಅತ್ಯಂತ ಶ್ಲಾಘನೀಯ ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ್ ಬಡಿಗೇರ,ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ,ಕುಡಾ ಮಾಜಿ ಸದಸ್ಯ ಶಾಮ ನಾಟೀಕರ, ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಮಾತನಾಡಿದರು.

ಕಳಬೇಡ ಎಂಬ ಬಸವ ಪದವೇ ಬದುಕಿಗೆ ಸವಾಲು

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸೋಮನಾಥ್ ಕಟ್ಟಿಮನಿ, ಶಾಮಸುಂದರ ಕುಲಕರ್ಣಿ, ಸೂರ್ಯಕಾಂತ ಬಾಲಕೊಂದೆ, ಎ.ಎಸ್.ಭದ್ರಶೆಟ್ಟಿ,ಶಾಂತಯ್ಯ ಸ್ವಾಮಿ ಸಂಧಿಮಠ,ಅಜಿದುಲ್ಲಾ ಸರಮಸ್ತ, ರಾಜಕುಮಾರ್ ಉದನೂರ, ರಜನಿಕಾಂತ್ ಬರುಡೆ,ಶ್ರೀಮತಿ ಆಶಾ ದರ್ಗಿ, ಶ್ರೀಮತಿ ಕಾಶಮ್ಮ ಚಿಕ್ಕೇಗೌಡ,ಕೆ.ಬಸವರಾಜ,ಕು.ಮಹಾಲಕ್ಷ್ಮಿ ಪಾಟೀಲ್,ಅಯಾಜುದ್ದಿನ್ ಪಟೇಲ್,ಡಾ.ಅಬ್ದುಲ ಕರೀಂ, ಶ್ರೀಮತಿ ಶೋಭಾ ಸಿಂಗೆ,ಲಾಲ ಅಹ್ಮದ್ ಕಲಮೂಡ, ಶ್ರೀಮತಿ ದೀಪಿಕಾ ಕೋತ್ಲಿ ಇವರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.೪೦ ಜನರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕು.ಮಹಾಲಕ್ಷ್ಮಿ ಪಾಟೀಲ್ ಪ್ರಾರ್ಥನೆ ಗೀತೆ ಹಾಡಿದರು.ಅಶೋಕ ಕಮಲಾಪುರ ಸ್ವಾಗತಿಸಿದರು.ಜಿ.ಜಿ.ವಣಿಕ್ಯಾಳ ನಿರೂಪಿಸಿದರು. ಬಿ.ಜಯಸಿಂಗ ವಂದಿಸಿದರು. ಪ್ರಶಾಂತ ತಂಬೂರಿ,ಸಾಜೀದ ಅಲಿ ರಂಜೋಳ್ಳ್ವಿ, ಬಾಬಾ ಫಕ್ರುದ್ದೀನ್,ಭಾನುಕುಮಾರ, ಆನಂದ ಕಪನೂರ, ಶಿವಪುತ್ರಪ್ಪ ಮರಡಿ, ಶರಣಯ್ಯ ಇಕ್ಕಳಕಿಮಠ, ರೋಹನ್ ರಠಕಲ, ಗುರುಲಿಂಗಪ್ಪ ಟೆಂಗಳಿ, ಶ್ರೀಕಾಂತ್ ನಾಗಶೆಟ್ಟಿ, ಅಹ್ಮದಿ ಬೇಗಂ, ಶಿವಕುಮಾರ್ ಬಗಲೂರ,ಡಾ.ರಫೀಕ ಕಮಲಾಪುರ , ಶಾಂತಪ್ಪ ಕಾರಭಾಸಗಿ, ಇಸ್ಮಾಯಿಲ್, ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here