ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದಿಂದ ಸೇಡಂ ಮಾರ್ಗದ ಕಡೆ ಬಸ್ಸಿನ ಸಮಸ್ಯೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಹ ಸ್ಥಿತಿ ನಿರ್ಮಾಣವಾಗಿದ್ದು, ಸಾರಿಗೆ ಇಲಾಖೆ ತಕ್ಷಣ ಸಮಸ್ಯೆ ಪರಿಹಾರಿಸಬೇಕೆಂದು ಎಂದು ಸಮಾಜಿಕ ಕಾರ್ಯಕರ್ತ ಸಂತೋಷ್ ಜಾಬೀನ್ ಆಗ್ರಹಿಸಿದ್ದಾರೆ.
ಬೆಳಿಗ್ಗೆ, ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾದ್ದು ಕಾದ್ದು, ಸಿಗುವ ಬಸ್ಸಿಗೆ ನೂಕು ನುಗಾಟದ ಮೂಲಕ ತೇರಳಬೇಕಾಗಿರುವ ಅನಿವಾರ್ಯ ನಿರ್ಮಾಣವಾಗಿದೆ. ಅಲ್ಲದೇ ಬಸ್ಸಿನ ಬಾಗಿಲು ಅಂಚಿನಲ್ಲಿ ನಿಂತುಕೂಂಡು ಜೀವದ ಹಂಗು ತೊರದೆ ತೇರಳಬೇಕಾಗಿದೆ ಎಂದು ಸಾರಿಗೆ ಇಲಾಖೆ ವಿರುದ್ಧ ಅಸಮಧಾನ ಹೊರಹಾಗಿದ್ದಾರೆ.
ಮಸ್ಜಿದ್ ಮೌಲಾನಾ, ಮೌಜನ್ ಗಳ ಖಾತಗೆ ಹಣ ಪಾವತಿಗೆ ಆಗ್ರಹ
ಇದು ವಿದ್ಯಾರ್ಥಿಗಳ ನಿತ್ಯ ಸಂಕಟವಾಗಿದೆ ಎಂದು ಅವರು ತಿಳಿಸಿದ್ದು, ಗ್ರಾಮದಿಂದ ನೇರವಾಗಿ ನೀಡಗುಂದ ಗ್ರಾಮದವರೆಗೆ ಬಸ್ಸಿನ ಸೌಕರ್ಯ ಕಲ್ಪಿಸಬೇಕಾಗಿದ್ದು, ಪೆಂಚನಪಳ್ಳಿ ಕೂರಡಂಪಳ್ಳಿ ನೀಡಗುಂದವರೆಗೆ ಹೇಚ್ಚಿನ ವಿದ್ಯಾರ್ಥಿಗಳು ನಿತ್ಯ ಪ್ರಯಾಣಿಸುತ್ತಾರೆ ಎಂದು ತಿಳಿಸಿದ್ದಾರೆ.
ಕೋಡಲೆ ಸಂಭಂದಪಟ್ಟ ಅಧಿಕಾರಿಗಳು ಬಸ್ಸಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮುಂದೆ ಆಗುವಂತಹ ಅನಾಹುತವನ್ನು ತಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.