ಬೆಂಗಳೂರು: ಕೋವಿಡ್-19 ಸಂದರ್ಭದಲ್ಲಿ ಉಂಟಾದ ಲಾಕ್‍ಡೌನ್‍ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಡೆದ ವಾಹಿನಿಗಳ ನೇರ ಪ್ರಸಾರ ಕಾರ್ಯಕ್ರಮ, ಕೌನ್ಸಲಿಂಗ್ ಹಾಗೂ ಇಮೇಲ್ ಮೂಲಕ ಮಹಿಳಾ ದೌರ್ಜನ್ಯದ ಒಟ್ಟು 425 ದೂರುಗಳು ದಾಖಲಾಗಿದ್ದವು ಎಂದು ಆಯೋಗದ ಅಧ್ಯಕ್ಷೆ ಪ್ರಮೀಳಾ ರೆಡ್ಡಿ ತಿಳಿಸಿದರು.
ಅವರು ಇಂದು ತಮ್ಮ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಲಾಕ್‍ಡೌನ್ ಸಮಯದಲ್ಲಿ ಅನೇಕ ಮಹಿಳೆಯರು ಕೆಲಸ ಕಳೆದುಕೊಂಡರು. ಅನೇಕರು ವರ್ಕ್ ಫ್ರಮ್ ಹೋಮ್‍ನಿಂದ ಕಛೇರಿ ಕೆಲಸ ನಿರ್ವಹಿಸಿದರು. ಇಂತಹ ಸಂದರ್ಭದಲ್ಲಿ ಅನೇಕ ಕೌಟಂಬಿಕ ಕಲಹ ಪ್ರಕರಣಗಳು ಬೆಳಕಿಗೆ ಬಂದವು. ಇವುಗಳನ್ನು ಆಯೋಗ ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ವಸತಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ : ಶ್ರೀಮಂತ ಪಾಟೀಲ್
ಆಯೋಗವು ಮಹಿಳೆಯರ ಕ್ಷಿಷ್ಟ ಸವiಸ್ಯೆಗಳನ್ನು ಪೋಲಿಸ್ ಠಾಣೆಗೆ ದೂರು, ಮಾಹಿತಿ ನೀಡಿ ಕ್ರಮಕೈಗೊಳ್ಳುವಂತೆ ಸೂಚಿಸುತ್ತದೆ. ಇತರ ಇಲಾಖೆಯ ದೌರ್ಜನ್ಯ ಪ್ರಕರಣಗಳನ್ನು ಕೌನ್ಸಲಿಂಗ್ ಮೂಲಕ ಇತ್ಯರ್ಥಗೊಳಿಸಲಾಗುವುದು. ಬಹಳಷ್ಟು ಮಹಿಳೆಯರು ಪುರುಷರಿಂದ ಮೋಸ, ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅವರಿಗೆ ಆಯೋಗ ಆತ್ಮಸ್ಥೆರ್ಯ ತುಂಬುತ್ತಿದೆ.
ಲಾಕ್‍ಡೌನ್ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾದ ಮಹಿಳೆಯರಿಗೆ ಔಷಧ, ಬಡಮಹಿಳೆಯರಿಗೆ ಸಂಸ್ಥೆಗಳ ಮೂಲಕ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಆಶಾ ಕಾರ್ಯಕರ್ತೆಯರ ಮೇಲೆ ಕಳೆದ ಏಪ್ರಿಲ್‍ನಲ್ಲಿ ನಡೆದ ಹಲ್ಲೆ ಪ್ರಕರಣ ಖಂಡಿಸಿ ಘಟನೆಗೆ ಕಾರಣರಾದ ವಿರುದ್ದ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಆಯುಕ್ತರಿಗೆ ನಿರ್ದೇಶಿಸಲಾಗಿದೆ.
ಮಹಿಳಾ ಸ್ವ-ಸಹಾಯ ಗುಂಪುಗಳ ಬಲವರ್ಧನೆಗೆ ಯೋಜನೆಗಳು ಜಾರಿ: ಶಶಿಕಲಾ ಜೊಲ್ಲೆ
ಲಾಕ್‍ಡೌನ್ ನಂತರ ಅಧ್ಯಕ್ಷರು 19 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಸ್ವಾಧಾರ, ಮಹಿಳಾ ನಿಲಯ, ಎಂಎಸ್‍ಪಿಟಿಸಿಎಲ್, ಉಜ್ವಲ, ಸಖಿ-ಒನ್ ಸ್ಟಾಪ್ ಸೆಂಟರ್‍ಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು ಎಂದರು.
ಜಿಲ್ಲೆಗಳಲ್ಲಿ ಗರ್ಭಿಣಿ ಬಾಣಂತಿಯರಿಗೆ ನೀಡುವ ಆಹಾರದ ಗುಣಮಟ್ಟವನ್ನು ಆಯೋಗ ಭೇಟಿ ನೀಡಿ ಪರಿಶೀಲಿಸುತ್ತಿದೆ. ನಾಲ್ಕು ಜಿಲ್ಲೆಗಳಲ್ಲಿ ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಮಹಿಳಾ ಕಾನೂನು ಕುರಿತು ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕೆನರಾ ಬ್ಯಾಂಕ್ ವತಿಯಿಂದ ಪಿಎಂ ಸ್ವಾನಿಧಿ ಕುರಿತು ಜಾಗೃತಿ
2020 ಏಪ್ರಿಲ್‍ನಿಂದ 2021 ಫೆಬ್ರವರಿವರೆಗೆ ಆಯೋಗದಲ್ಲಿ 2209 ದೂರುಗಳು ಸ್ವೀಕೃತವಾಗಿದ್ದು 1030 ದೂರುಗಳು ಇತ್ಯರ್ಥಗೊಂಡು 1179 ಪ್ರಕರಣಗಳು ಬಾಕಿ ಉಳಿದಿರುತ್ತದೆ. ಮುಂಬರುವ ದಿನಗಳಲ್ಲಿ ಮಹಿಳೆಯರ ದೂರುಗಳನ್ನು ವಾಟ್ಸ್‍ಅಪ್ ಮೂಲಕ ಸ್ವೀಕರಿಸಲಾಗುವುದು. ಮಹಿಳೆಯರ ವೆಬ್‍ಪೋರ್ಟಲ್‍ಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು. ಈ ಬಾರಿ ಮಹಿಳಾ ದಿನಾಚರಣೆಯನ್ನು ಮಾರ್ಚ್ 18 ರಂದು ವೈಎಂಸಿಎ ಸಂಸ್ಥೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಮಹಿಳೆಯರ ಏಳಿಗೆಗೆ ಶ್ರಮಿಸಿದ ಪುರುಷರನ್ನು ಸನ್ಮಾನಿಸಲಾಗುವುದು.
ಸಮಾಜದ ಕಟ್ಟಕಡೆಯ ಮಹಿಳೆಗೂ ಆಯೋಗ ಸಹಾಯ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಮಹಿಳೆಯರ ದೌರ್ಜನ್ಯಕ್ಕೆ ದೂರುಗಳನ್ನು ದಾಖಲಿಸಲು ದೂರವಾಣಿ 080-22216486 ಇಮೇಲ್ ವಿಳಾಸ kswbang123@gmail.com ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.