ಕಲಬುರಗಿ: ತಾವು ಕಲಿತ ವಿದ್ಯಾ ಸಂಸ್ಥೆಯಿಂದಲೇ ಗುರುತಿಸಿಕೊಂಡು, ಸನ್ಮಾನ ಪಡೆದುಕೊಂಡ ಮಾಲಾ ಸ್ಕ್ವಾರ ಎಂದೇ ಕಲಬುರಗಿಯಲ್ಲಿ ಖ್ಯಾತಿಯಾಗಿರುವ ಮಾಲಾ ದಣ್ಣೂರ್ -ಮಾಲಾ ಕಣ್ಣಿ ಯವರು, ಸಮಾಜ ಸೇವೆಯನ್ನೇ ಮೈಗೂಡಿಸಿಕೊಂಡು, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ರೂಪಿಸಿ ಇದರ ಅಡಿಯಲ್ಲಿ ವಿವಿಧ ಸಮಾಜಮುಖಿ ಕೆಲಸಗಳನ್ಮು ಮಾಡುತ್ತಿರುತ್ತಾರೆ.
ತಮ್ಮ ಪ್ರಾಣದ ಹಂಗನ್ನೇ ತೊರೆದು ಕೊರೊನ ವಾರಿಯರ್ಸ್ ಆಗಿ ಮತ್ತು ಪ್ರವಾಹದ ಸಂಧರ್ಭದಲ್ಲಿ ಸೂರು ಕಳೆದುಕೊಂಡವರಿಗೆ ಸಹಾಯ ಮಾಡಿ ದಿನ ನಿತ್ಯ ಒಂದಿಲ್ಲೊಂದು ಸೇವೆಯನ್ನು ಮಾಡುತ್ತಾ ಸಮಾಜ ಸೇವೆಗೆ ಒಂದೊಳ್ಳೆ ಅರ್ಥವನ್ನು ಕಲ್ಪಿಸಿ, ನೂರಾರು -ಸಾವಿರಾರು ಹೆಣ್ಣುಮಕ್ಕಳಿಗೆ ಮಾದರಿಯಾಗಿ ಬದಕುತ್ತಿರುವ ಮತ್ತು ಪರಿಸರದ ಬಗ್ಗೆ ಅತೀವ ಕಾಳಜಿ ಇಟ್ಟುಕೊಂಡು ಪ್ರತಿ ಭಾನುವಾರ ಒಂದೊಂದು ಬಡಾವಣೆಯ ಒಂದು ಉದ್ಯಾನವ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಸುರಪುರ:ಹೊಟ್ಟೆ ನೋವು ತಾಳದೆ ಯುವತಿ ಆತ್ಮಹತ್ಯೆ
ವಿಶ್ವ ಮಹಿಳಾ ದಿ ನಾಚರಣೆಯ ಬಗ್ಗೆ ಮಾತನಾಡಿ ಪ್ರತಿ ಹೆಣ್ಣುಮಕ್ಕಳು ಬಲಿಷ್ಠ ಮತ್ತು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು ಕ್ಷೇತ್ರ ಯಾವುದೇ ಇರಲಿ, ಸಾಧನೆಯೇ ಗುರಿಯಾಗಿರಬೇಕೆಂಬ ಸಂದೇಶ ನೀಡಿದ್ದಾರೆ ಎಂದು ಡಾ.ದ್ರಾಕ್ಷಾಯಣಿ ಅವ್ವಾಜಿ ಹೇಳಿದರು.
ಪ್ರಶಸ್ತಿ ಪ್ರದಾನ ಸಂಧರ್ಭದಲ್ಲಿ ವಿದ್ಯಾ ಭಂಡಾರಿ ಡಾ.ದ್ರಾಕ್ಷಾಯಣಿ ಅವ್ವಾಜಿ,. ಲಕ್ಷ್ಮಿ ದತ್ತಾತ್ರೇಯ ಪಾಟೀಲ್ ರೇವೂರ್, ಬಸವರಾಜ್ ದೇಶಮುಖ್, ವಿ.ಡಿ ಮೈತ್ರಿ ಇದ್ದರು.