ಬಾಲಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ: ನ್ಯಾಯಾಧೀಶ ಗಣಪತಿ

0
51

ಆಳಂದ: 14 ವರ್ಷದೊಳಗಿನ ಮಕ್ಕಳನ್ನು ಕೃಷಿ, ಕೈಗಾರಿಕೆ ವಲಯ, ಗ್ಯಾರೇಜ್, ಹೋಟೆಲ್, ಅಂಗಡಿಗಳು ಸೇರಿದಂತೆ ಅಪಾಯಕಾರಿ ಕ್ಷೇತ್ರದಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಸ್ಥಳೀಯ ಹಿರಿಯ ಶ್ರೇಣಿಯ ನ್ಯಾಯಾಧೀಶ ಗಣಪತಿ ಬಿ. ಬದಾಮಿ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ಸರ್ಕಾರಿ ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಆಡಳಿತ, ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಶಿಕ್ಷಣ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ಮಕ್ಕಳ ಹಕ್ಕು ರಕ್ಷಣಾ ಆಯೋಗ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ, ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಸಂಘ, ಮಾರ್ಗದರ್ಶಿ ಹಾಗೂ ಸಂಸ್ಕಾರ ಸಂಸ್ಥೆ, ಸಾಮಾಜಿಕ ಪರಿವರ್ತನಾ ಜನಾಂದೋಲನ ಮತ್ತು ಡಾನ್ ಬಾಸ್ಕೋ ಸಂಸ್ಥೆ ಕಲಬುರಗಿ ಆಶ್ರಯದಲ್ಲಿ ಹಮ್ಮಿಕೊಂಡ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು. 14 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತವಾದರೆ ಅವರ ಮುಂದಿನ ಭವಿಷ್ಯದ ಜೀವನವೇ ಹಾಳು ಮಾಡಿದಂತ್ತಾಗುತ್ತದೆ. ಸರ್ಕಾರಿ ನೀಡುವ ಸೌಲಭ್ಯಗಳನ್ನ ಪಡೆದು ಮುಂದೆ ಬರಬೇಕು ಎಂದರು.

Contact Your\'s Advertisement; 9902492681

ಪ್ರಧಾನ ಸಿವಿಲ್ ನ್ಯಾಯಾಧೀಶ ಗುರುಪ್ರಸಾದ ಸಿ ಅವರು ಮಾತನಾಡಿ, ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಅನಿಷ್ಠ ಪದ್ಧತಿಯಂತ ಬಾಲ ಕಾರ್ಮಿಕರಿಗೆ ದುಡಿಯಲು ಹಚ್ಚುವುದು ಮತ್ತು ಇಟ್ಟುಕೊಳ್ಳುವುದು ಎರಡನ್ನು ಅಪರಾಧವಾಗಿದೆ. ಇರುವ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರಲ್ಲಿ ಪರಸ್ಪರ ಜಾಗೃತಿ ತಂದುಕೊಂಡು ಕಾನೂನು ತಿಳಿದುಕೊಳ್ಳಬೇಕು ಎಂದರು.

ನ್ಯಾಯವಾದಿ ಎಂ.ವಿ. ಏಕಬೋಟೆ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಎಂ.ಎನ್.ಪೋದ್ದಾರ, ನ್ಯಾಯವಾದಿ ಸಂಘದ ಅಧ್ಯಕ್ಷ ಬಾಬಾಸಾಹೇಬ ವಿ. ಪಾಟೀಲ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ ನಿರ್ದೇಶಕ ವಿಠ್ಠಲ ಚಿಕಣಿ, ವಿದ್ಯಾರ್ಥಿನಿ ಶಿವಲೀಲಾ ಸುತಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಹೆಚ್ಚುವರಿ ನ್ಯಾಯಾಧೀಶ ಚಂದ್ರಕಾಂತ, ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷ ರಮೇಶ್ಷೆಸ್. ಸುಂಬಡ, ಬಾಲಕಾರ್ಮಿಕ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಡಾನ್ ಬಾಸ್ಕೋ ಸಂಶ್ಥೆತ ನಿರ್ದೇಶಕ ಪಾಧರ ಅಜೀಜ ಜಾರ್ಜ್, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಬಸವರಾಜ ಟೆಂಗಳಿ, ನ್ಯಾಯವಾದಿ ದೇವಾನಂದ ಹೋದಲೂರಕರ್, ಬಿ.ಜಿ. ಬೀಳಗಿ, ಕಾರ್ಮಿಕ ಬಂದು ರವಿಂದ್ರ ಬೆಳಮಗಿ, ನ್ಯಾಯವಾದಿ ಅಭಿಮನ್ಯು ತೋಳೆ ಇನ್ನಿತರರು ಉಪಸ್ಥಿತರಿದ್ದರು.

ಬಾಲಕಾರ್ಮಿಕ ವಿರೋಧಿ ಜಾಗೃತಿ ಜಾಥಾವನ್ನು ತಹಸೀಲ್ದಾರ ಕಚೇರಿಯ ಬಳಿ ನ್ಯಾಯಾಧೀಶರು ಉದ್ಘಾಟಿಸಿದರು. ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಇನ್ನಿತರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳ ಮೂಲಕ ಜಾಗೃತಿ ಘೋಷಣೆ ಕೂಗುತ್ತ ಜಾಥಾ ನಡೆಸಿದರು. ಶಿಕ್ಷಕ ಶಿವರಾಜ ಖಂಡಾಳೆ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here