ಶಹಾಬಾದ: ಪರಿಶಿಷ್ಟ ಜನಾಂಗದ ಮೇಲೆ ನಡೆಯುತ್ತಿದ್ದ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಯಂತಹ ಪ್ರಕರಣ ಇಂದು ಕಡಿಮೆಯಾಗಿವೆ. ಪರಿಶಿಷ್ಟ ಜನತೆ ರಕ್ಷಣೆಗಾಗಿ ಸರಕಾರ ಜಾರಿಗೆ ತಂದಿರುವ ಕಾನೂನುಗಳು ಸದ್ಬಳಕೆಯಾಗಬೇಕು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಹೇಳಿದರು.
ಅವರು ನಗರದ ಇಂದಿರಾ ನಗರ ಮಡ್ಡಿಯಲ್ಲಿ ಕರ್ನಾಟಕ ಸರಕಾರ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಚಿತಾಪುರ. ನಗರಸಭೆ ಶಹಾಬಾದ ಹಾಗೂಸಮೃದ್ಧಿ ರೂರಲ್ ಡೆವಲಪಮೆಂಟ ಆಂಡ ಚಾರಿಟೇಬಲ್ ಟ್ರಸ್ಟ ಇವರುಗಳ ಸಂಯುಕ್ತಾಶ್ರಯದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ-೧೯೫೫.ಮತ್ತು ಪ.ಜಾತಿ,ಪ.ಪಂ ವರ್ಗಗಳ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ -೧೯೮೯ ರ ಬಗ್ಗೆ ಅರಿವು ಮೂಡಿಸುವ ವಿಚಾರ ಗೋಷ್ಠಿ ಮತ್ತು ಬೀದಿನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಶಿಷ್ಟ ರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದ ಧೋರಣೆ ಬದಲಾಗಿದೆ. ಸಮಾಜದಲ್ಲಿ ಇಂದು ಬಹಳ? ಸುಧಾರಣೆಗಳಾಗಿವೆ. ಸಂವಿಧಾನದ ಆಶಯ, ಕಾನೂನಿನ ರಕ್ಷಣೆಯಲ್ಲಿ ಎಲ್ಲರಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ. ಸಮಾಜದಲ್ಲಿ ಎಲ್ಲರೂ ಸಮಾನರಾಗಿ ಬೆಳೆಯಬೇಕು. ಜಾತಿ, ಮತ, ಪಂಥಗಳ ಭೇದ ತೊಲಗಬೇಕು ಎಂದರು.
ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಜಿಲ್ಲೆಯಲ್ಲಿ ಜಾತಿ ನಿಂದನೆ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ನ್ಯಾಯ ಎಲ್ಲರಿಗೂ ಸಿಗುವಂತಾಗಬೇಕು. ಸಾಮಾಜಿಕ ಸಂಘಟನೆಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು. ಕಾನೂನು ಅರಿವು ಹಾಗೂ ಸರಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಪ್ರಯತ್ನಿಸಬೇಕು ಎಂದರು.
ಪರಿಶಿ?ರಿಗಿಂತ ಹೆಚ್ಚಾಗಿ ಸವರ್ಣೀಯರು ಈ ಕಾಯಿದೆ ಬಗ್ಗೆ ತಿಳಿದುಕೊಂಡಿರಬೇಕು. ಎಲ್ಲ ಸಮುದಾಯಗಳು ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದರು. ಅಥಿತಿಗಳಾಗಿ ಹಾಜಪ್ಪ ಬೀಳಾರ, ಲಕ್ಷ್ಮಿ ಕೋರಿ, ಪ್ರಮೋದ್ ಒಂಟಿ, ಶಾಮರಾವ್ ಕೋರಿ ಸೇರಿದಂತೆ ಹಲವಾರು ಮಹಿಳೆಯರು ಉಪಸ್ಥಿತರಿದ್ದರು.