ಗ್ರಾಮೀಣ ಬದುಕಿನ ಸ್ಥಿತ್ಯಂತರ ಕ್ಕೆ ಹಿಡಿದ ಕನ್ನಡಿ ‘ಅಮೀನಪುರದ ಸಂತೆ’

0
53

ಕಲಬುರಗಿ: ಅಮೀನಪುರ ಸಂತೆ ಕಥೆಗಳು ಕನ್ನಡ ಸಾಹಿತ್ಯದ ಸಣ್ಣ ಕಥೆಗಳ ಲೋಕಕ್ಕೆ ನೀಡಿದ ಅಪಾರ ಕೊಡುಗೆಯಾಗಿದೆ ಬಂಡಾಯದ ಜನಪದರತೆ ಮತ್ತು ನವ್ಯದ ಆಕೃತಿ ಸೂಕ್ಷ್ಮಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಎಂದು ಹಿರಿಯ ಸಾಹಿತಿ ಸುಬ್ಬರಾವ್ ಕುಲಕರ್ಣಿ ಅವರು ಹೇಳಿದರು.

ನಗರದ ಸಿದ್ದಲಿಂಗೇಶ್ವರ ಬುಕ್ ಮಾಲ್ ದಲ್ಲಿ ನಡೆದ “ಅಟ್ಟದ ಮೇಲೆ ಬೆಟ್ಟದಂತ” ವಿಚಾರ ಪಾಕ್ಷಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಹಿರೇಮಠ್ ಅವರು ರಚಿಸಿದ “ಅಮೀನಪುರದ ಸಂತೆ”ಕೃತಿ ಕುರಿತು ಮಾತನಾಡುತ್ತ ತಮ್ಮ ವಿಶಿಷ್ಟ ಸಂವೇದನಶೀಲ ಬರಹದಿಂದ ಕಥೆಗಳನ್ನು ಅವರ ಬದುಕಿನಲ್ಲಿ ಒಂದಾಗಿಸುವ ಮೂಲಕ ಅವರು ಆಧುನಿಕ ಕಥನ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿರುವರು.

Contact Your\'s Advertisement; 9902492681

ಅಮೀನಪುರದ ಸಂತೆ ಸಂಕಲನದ ಮೂಲಕ ಸಣ್ಣಕಥೆಗಳು ಹಿಡಿಯುತ್ತಿರುವ ಹೊಸ ಹಾದಿಯನ್ನು ಪರಿಚಯ ಮಾಡಿಕೊಳ್ಳಲು ಸಾಧ್ಯ ಎಂದು ನಾನು ನಂಬುತ್ತೇನೆ ದಲಿತ-ಬಂಡಾಯ ಕಥೆಗಳು ಇಡೀ ಸಮಾಜವನ್ನು ಶೋಷಕ ಮತ್ತು ಶೋಷಿತ ಎಂಬ ಎರಡು ಪ್ರಭೇದಗಳಲ್ಲಿ ಗ್ರಹಿಸಿ ಮಂಡಿಸುತ್ತವೆ. ಆದರೆ ಅಮಿನ ಪುರದ್ ಸಂತೆ ಸಂಕಲನದಲ್ಲಿ ಈ ಬಗೆಯ ಪ್ರಭೇದಗಳು ಇಲ್ಲ. ಅಂದರೆ ಹಿರೇಮಠರು ಸಮಾಜದಲ್ಲಿನ ವರ್ಗ ವ್ಯತ್ಯಾಸಗಳನ್ನು ಗೌಣ ಗೊಳಿಸುತ್ತಿದ್ದಾರೆ ಎಂದು ಅರ್ಥವಲ್ಲ. ಅವರ ಬಹುತೇಕ ಕಥೆಗಳು ಶೋಷಿತರನ್ನು ಗಮನದಲ್ಲಿರಿಸಿಕೊಂಡು ಸೃಷ್ಟಿಯಾಗಿವೆ.ಇದರಲ್ಲಿ ಅವರ ವಿಶಿಷ್ಟತೆ ಏನೆಂದರೆ ಇರುವ ಮಾನವೀಯತೆಯನ್ನು ಅವರು ಮುನ್ನಡೆಗೆ ತರುತ್ತಾರೆ.

ಈ ಅರ್ಥ ದಲ್ಲಿ ಮಲ್ಲಿಕಾರ್ಜುನ ಹಿರೇಮಠರ ಕಥೆಗಳಲ್ಲಿ ಖಳನಾಯಕರೇ ಇಲ್ಲ. ಇದ್ದರೂ ಅದು ತೀರಾ ಪರೋಕ್ಷವಾಗಿ ಅಭಿವ್ಯಕ್ತಗೊಳ್ಳುತ್ತದೆ. ಅವರ ಕಥೆಗಳಲ್ಲಿ ನಾಯಕನೂ ಶೋಷಣೆಗೆ ಒಳಗಾದವನು. ಆದರೆ ಭೀಕರವಾದ ಶೋಷಣೆಯಿಂದಾಗಿ ಆತನ ಹೃದಯ ಕಲ್ಲಾಗುವುದಿಲ್ಲ.ಅದು ಪ್ರೀತಿ ಪ್ರೇಮಿಗಳಿಗಾಗಿ ಸದಾ ಹಂಬಲಿಸುತ್ತಿರುತ್ತದೆ.ಸಮಾಜ ಆತನಿಗೆ ಏನನ್ನು ಕೊಡದೆ ವಂಚಿಸಿದೆಯೋ, ಅದನ್ನೇ ಆತ ಸಮಾಜಕ್ಕೆ ಹಿಂದಿರುಗಿಸಬಲ್ಲ.

ಈ ಬಗೆಯ ಚಿತ್ರ ಕನ್ನಡಕ್ಕೆ ಹೊಸದು.ದೇವನೂರು ರವರು ತಮ್ಮ ಕಥೆಗಳಲ್ಲಿ ದಲಿತ ಲೋಕದೊಳಗೆ ಹುದುಗಿರುವ ಸಾಂಸ್ಕೃತಿಕ,ಸಾಮಾಜಿಕ ಮೌಲ್ಯಗಳ ಬಗ್ಗೆ ಕಾಳಜಿಯನ್ನು ಪ್ರಕಟಿಸಿದ ಹಾಗೆ ಹಿರೇಮಠರು ಕಥೆಗಳಲ್ಲಿ ಶೋಷಿತರ ಬದುಕಿನೊಳಗೆ ತಣ್ಣಗೆ ಹುದುಗಿರುವ ಉದಾತ್ತ ಮೌಲ್ಯಗಳನ್ನು ಬಯಲಿಗೆಳೆಯುತ್ತಾರೆ.

ಸಂಕಲನ ಮೊದಲ ಕಥೆಯಾದ ಅಮೀನಪುರದ ಸಂತೆ ನನ್ನ ಮೇಲಿನ ಮಾತಿಗೆ ಉದಾಹರಣೆಯಾಗಿದೆ. ಎಂದರಲ್ಲದೆ,ನವೋದಯ ಪ್ರಗತಿಶೀಲ, ನವ್ಯ,ದಲಿತ ಬಂಡಾಯಗಳೆಂಬ ಘಟ್ಟಗಳ ಮೂಲಕ ಹಾದು ಬಂದ ಕನ್ನಡ ಸಾಹಿತ್ಯ ಶತಮಾನದ ಅಂಚಿನಲ್ಲಿ ಮತ್ತೆ ಹೊಸತನಕ್ಕಾಗಿ ಹಾತೊರೆಯುತ್ತಿದೆ ಮಲ್ಲಿಕಾರ್ಜುನ ಹಿರೇಮಠರವರ ಅಂತ ಹೊಸಬಗೆಯ ತುಡಿತವನ್ನು ಪ್ರಸ್ತುತ ಪ್ರಬಂಧದಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ್ ಹೊಸಮನಿ ಮಾತನಾಡಿ ಕಲ್ಯಾಣ ಕರ್ನಾಟಕ ಒಂದುಕಾಲಕ್ಕೆ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಇತ್ತು ಆದರೆ ಪುಸ್ತಕೋದ್ಯಮ ಕ್ಷೇತ್ರದಲ್ಲಿ ಮಾತ್ರ ಈಗ ಕರ್ನಾಟಕದ ಯಾವುದೇ ಪ್ರದೇಶಕ್ಕೆ ಕಡಿಮೆ ಇಲ್ಲದಂತೆ ಬೆಳೆದಿದೆ ಪುಸ್ತಕಗಳ ಪ್ರಕಾಶನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಇಡೀ ಕರ್ನಾಟಕದ ಜನತೆ ಈ ಭಾಗ ಗಮನಿಸುವಂತಿದೆ.

ವ್ಯಾಪಾರಿಯಾಗಿದ್ದ ಬಸವರಾಜ ಕೊನೇಕರವರು ಸತತ ಪ್ರಯತ್ನ ಹಾಗೂ 44 ವರ್ಷಗಳ ಕಠಿಣ ಪರಿಶ್ರಮ ಮತ್ತು ಹೋರಾಟದ ಫಲವಾಗಿ ಈ ಪ್ರದೇಶ ಪುಸ್ತಕೋದ್ಯಮದಲ್ಲಿ ಹಿಂದುಳಿದಿದೆ ಎಂಬ ಕಳಂಕ ದೂರವಾಗಿದೆ. ಅಲ್ಲದೆ ಅಟ್ಟದ ಮೇಲೆ ಬೆಟ್ಟದಂತಹ ವಿಚಾರ ಎನ್ನುವಂತಹ ಪಾಕ್ಷಿಕ ಪುಸ್ತಕ ವಿಮರ್ಶೆ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ವಿಮರ್ಶಾ ಲೋಕವನ್ನೇ ಶ್ರೀಮಂತಗೊಳಿಸುವಲ್ಲಿ ಒಂದು ಹೆಜ್ಜೆ ಮುಂದಿಡುವ ಪ್ರಯತ್ನ ಮಾಡಿದ್ದು ಮೆಚ್ಚುವಂತದ್ದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಸವರಾಜ ಕೊನೆಕ್ ಅವರು ಮಾತನಾಡಿ ಈ ಭಾಗದ ಲೇಖಕರ ಪುಸ್ತಕಗಳನ್ನು ವಿಮರ್ಶೆಗೆ ಒಳಪಡಿಸಿ ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ವಿಮರ್ಶಕರನ್ನು ಹುಟ್ಟುಹಾಕುವ ಕೆಲಸ ಪ್ರಕಾಶನ ಮಾಡುತ್ತಿದೆ ಎಂದು ನುಡಿದರು.

ವೇದಿಕೆ ಮೇಲೆ ಡಾ. ಚಿ. ಸಿ. ನಿಂಗಣ್ಣ ಸಂಚಾಲಕರಾದ ಶಿವರಾಜ್ ಪಾಟೀಲ್ ರವರು ಇದ್ದರು. ಕಾರ್ಯಕ್ರಮದಲ್ಲಿಡಾ. ಶ್ರೀನಿವಾಸ್ ಶಿರನೂರಕರ್, ಡಾ.ಕಲ್ಯಾಣ್ ರಾವ್ ಪಾಟೀಲ್, ಸುರೇಶ್ ಜಾ ದವ್. ಕಾವ್ಯಶ್ರೀ ಮಹಾಗಾಂಕರ್,ಡಾ. ಶ್ರೇಶೈಲ್ ನಾಗರಾಳ, ಪ್ರೊ. ಎಸ್.ಎಲ್. ಪಾಟೀಲ್,ರೋಲೇಕರ್ ನಾರಾಯಣ್,ಶಿವರoಜನ್ ಸತ್ಯಂಪೇಟೆ, ಡಾ.ಅಜಯ್ ,ನಾಗಪ್ಪ ಗೋಗಿ,ಬಿ. ಎಚ್. ನಿರ್ ಗುಡಿ, ಸುರೇಶ್ ಬಡಿಗೇರ್, ಪ.ಮನು ಸಗರ್, ಸಂಗಪ್ಪ ತವಡೆ,ಮೊದಲಾದವರಿದ್ದರು ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here