ಅಳಿದ ಮೇಲೂ ಉಳಿಯುವುದು ಪುಸ್ತಕಗಳು: ಬಿ.ವಿ. ವಸಂತಕುಮಾರ

0
188

ಕಲಬುರಗಿ: ನೇರವಾಗಿ ಓದುಗರಿಗೆ ತಲುಪಿಸುವ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಈ ಸಾಮೂದಾಯಿಕ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.‌ವಸಂತಕುಮಾರ ಅಭಿಪ್ರಾಯಪಟ್ಟರು.

ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ನಗರದ ವಿಜಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ 2020ರ ಆರು ಕೃತಿಗಳ ಲೋಕಾರ್ಪಣೆ ಹಾಗೂ 2019ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯದನ್ನು, ಒಳಿತನ್ನು ನಾವೇ ತಂದುಕೊಳ್ಖಬೇಕು. ಪುಸ್ತಗಳು ಬದುಕಿನ ದಾರಿದೀಪ ಎಂದು ತಿಳಿಸಿದರು.

Contact Your\'s Advertisement; 9902492681

ಗ್ರಾಮೀಣ ಬದುಕಿನ ಸ್ಥಿತ್ಯಂತರ ಕ್ಕೆ ಹಿಡಿದ ಕನ್ನಡಿ ‘ಅಮೀನಪುರದ ಸಂತೆ’

ನಾವು ಬರೆದ ಪುಸ್ತಕಗಳು ನಮಗೆ ಬೆಳಕು ಕೊಡುವುದಿದ್ದರೆ ಇನ್ನೊಬ್ಬರಿಗೆ ಹೇಗೆ ಬೆಳಕು ನೀಡಬಲ್ಲವು? ಅಳಿದ ಮೇಲೆ ಉಳಿಯುವುದೇ ಪುಸ್ತಕ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಗುಲ್ಬರ್ಗ ವಿವಿ ಕುಲಪತಿ ಡಾ. ದಯಾನಂದ ಅಗಸರ ಮಾತನಾಡಿ, ಸರ್ವರನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಪುಸ್ತಕಗಳು ತುಂಬಾ ಉಪಯುಕ್ತವಾಗಿವೆ ಎಂದು ತಿಳಿಸಿದರು.

ಶಹಾಬಾದನಲ್ಲಿ ಮತ್ತೆ ಕಾಣಿಸಿಕೊಂಡ ಕೊರೋನಾ: ಶಾಲೆ ತೆರೆದರೆ ಕ್ರಿಮಿನಲ್ ಕೇಸ್

ಕಲ್ಯಾಣ ಕರ್ನಾಟಕ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಬಿಸಿಲಿನಷ್ಟೇ ಪ್ರಖರ, ಗಟ್ಟಿಯಾಗಿವೆ. ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದೆ ಎಂದರು.

ಗುಲ್ಬರ್ಗ ವಿವಿ ಬೆಳವಣಿಗೆಗೆ ಎಲ್ಲರ ಸಲಹೆ, ಸಹಕಾರ ಅಗತ್ಯ. ಆಚಾರದಂತೆ ವಿಚಾರ ಇರಬೇಕು. ಅರಿವೇ ಗುರುವಾಗಬೇಕು. ಆಚಾರವೇ ಶಿಷ್ಯನಾಗಬೇಕು. ಇನ್ನೂ ಹೆಚ್ಚಿನ ಪ್ರಾತಿನಿದ್ಯ ನೀಡುವ ಮೂಲಕ ಈ ಭಾಗದ ಬೆಳವಣಿಗೆಗೆ ಕಾರಣರಾಗಬೇಕು ಎಂದರು.

ಗ್ರಾಪಂ ಸದಸ್ಯರ ಗಮನಕ್ಕೆ ತರದೇ ಅಂಗವಿಕಲರ ಸಭೆ: ಈರಣ್ಣ ಕಾರ್ಗಿಲ್ ಆಕ್ರೋಶ

ಮುಖ್ಯ ಅತಿಥಿಯಾಗಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಮಾತನಾಡಿದರು.ವಿಜಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿನಾಥ ತಳವಾರ ಡಾ. ರಾಜೇಂದ್ರ ಕೊಂಡಾ ವೇದಿಕೆಯಲ್ಲಿ ಇದ್ದರು.

ಡಾ. ಮಲ್ಲಿನಾಥ ತಳವಾರ ನಿರೂಪಿಸಿದರು. ಡಾ. ವಿಜಯಕುಮಾರ ಪರೂತೆ ಸ್ವಾಗತಿಸಿದರು. ಸಿ.ಎಸ್. ಮಾಲಿಪಾಟೀಲ ಪ್ರಾರ್ಥನೆಗೀತೆ ಹಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶರಣಬಸವ ವಡ್ಡನಕೇರಿ ವಂದಿಸಿದರು.

ಪ್ರೊ.ಎಚ್.ಟಿ. ಪೋತೆ, ಶ್ರೀನಿವಾಸ ಜಾಲವಾದಿ, ಡಾ. ಶಕುಂತಲಾ ಸಿದ್ಧರಾಮ ದುರ್ಗಿ, ಭೀಮರಾಯ ಹೇಮನೂರ, ಮುನಿಯಪ್ಪ ನಾಗೋಲಿ ಇವರಿಗೆ 2019ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಲ್ಲಿ 400 ಜನ ಸದಸ್ಯರಿದ್ದು, 14 ವರ್ಷಗಳಿಂದ ಸಂಘ ಅಸ್ತಿತ್ವದಲ್ಲಿ ಇದ್ದು, ಈವರೆಗೆ 126 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಸುಮಾರು ನಾಲ್ಕು ಲಕ್ಷ ಠೇವಣಿ ಇದೆ. ಪ್ರತಿ ವರ್ಷ 2 ಲಕ್ಷ ಲಾಭಾಂಶ ದೊರೆಯುತ್ತಿದೆ.– ಡಾ. ಸ್ವಾಮಿರಾವ ಕುಲಕರ್ಣಿ, ಸದಸ್ಯರು, ಕನ್ನಡ ನಾಡು ಲೇಖಕರ ಸಂಘ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here