ಉದ್ಯಾನದ ಅತಿಕ್ರಮಣ ತಡೆಗಟ್ಟಿಗೆ ಒತ್ತಾಯಿಸಿ ಪಾಲಿಕೆ ಮುತ್ತಿಗೆ ಹಾಕಿ ಪ್ರತಿಭಟನೆ

0
50

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 55ರ ರಾಘವೇಂದ್ರ ಲೇಔಟ್ ನಲ್ಲಿನ ಸಾಯಿ ಮಂದಿರ ಹತ್ತಿರದ ಉದ್ಯಾನವನದ ಅತಿಕ್ರಮಣವನ್ನು ತಡೆಗಟ್ಟಿ, ಸಾರ್ವಜನಿಕ ಉಪಯೋಗವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ಹಾಗೂ ಎಸ್.ಯು.ಸಿ.ಐ.(ಸಿ) ಪಾಲಿಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಹಲವಾರು ಬಾರಿ ಉದ್ಯಾನವನದ ಭೂಮಿ ಅತಿಕ್ರಮಣದ ವಿಷಯ ಇಲಾಖೆಯ ಗಮನಕ್ಕೆ ತಂದರು ತಡೆಗಟ್ಟಲಾಗುತ್ತಿಲ್ಲ. ಕೆಲವರು ಅತಿಕ್ರಮಣಮಾಡಿ ಮನೆಕಟ್ಟಲು ಪ್ರಾರಂಭಿಸಿದ್ದು ಕೂಡಲೇ ಇದನ್ನು ತಡೆಗಟ್ಟಬೇಕೆಂದು ಮಹೇಶ್ ಎಸ್. ಬಿ.  ಈ ಸಂದರ್ಭದಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ಕೇಂದ್ರ ಹುಬ್ಬಳ್ಳಿಗೆ ರೈಲ್ವೆ ಡಿವಿಜನಿಗೆ ಕೋಕ್, ಏಮ್ಸ್ ನೀಡಲು ಒಲವು ಸಮಿತಿ ಆಕ್ರೋಶ

ಕಳೆದ ಹನ್ನೆರಡು ವರ್ಷಗಳಿಂದಲೂ ಬಡಾವಣೆಯ ಎಲ್ಲಾ ಜನತೆಯು ಸತತ ಪ್ರಯತ್ನ ಮಾಡಿದಾಗ್ಯೂ ಸಾರ್ವಜನಿಕ ಉದ್ಯಾನವನ ಇನ್ನೂ ಜನಬಳಕೆಗೆ ಯೋಗ್ಯವಾಗಿಲ್ಲ. ಲೇಔಟ್ ನ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳೂ, ಸಾರ್ವಜನಿಕ ಉದ್ಯಾನವನವನ್ನು ದುರುಪಯೋಗಪಡಿಸಿಕೊಳ್ಳುವುದು ಇದಕ್ಕೆ ಮೂಲ ಕಾರಣ ಒಂದುಕಡೆಯಾದರೆ ಇನ್ನೊಂದೆಡೆ, ಸಂಬಂಧಿಸಿದ ಅಧಿಕಾಗಳ ನಿರ್ಲಕ್ಷ್ಯವೂ ಇನ್ನೊಂದು ಗಂಭೀರವಾದ ಪ್ರಮುಖ ಕಾರಣವಾಗಿದೆ.

ಮಹಾನಗರ ಪಾಲಿಕೆ ತಕ್ಷಣವೇ ಕಾನೂನಾತ್ಮಕ ಕ್ರಮ ಕೈಗೊಂಡು ಉದ್ಯಾನವನದ ಜಮೀನನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಪ್ರತಿಭಟನಾ ನಿರತ ಹೋರಾಟಗಾರರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here