ಖಾಸಗೀಕರಣ ವಿರೋಧಿ ಸಾರ್ವಜನಿಕ ಸ್ವಾಮ್ಯದ ನೌಕರರ ಬೃಹತ್‌ ಪ್ರತಿಭಟನೆ

0
108

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿರುವ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸದಂತೆ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಖಾಸಗೀಕರಣ ವಿರೋಧಿ ವೇದಿಕೆಯ ಅಡಿಯಲ್ಲಿ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಕಾರ್ಮಿಕರು ಬೃಹತ್‌ ಪ್ರತಿಭಟನೆಯನ್ನು ನಡೆಸಿದರು.

ನಗರದ ರೈಲ್ವೇ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನೆಯಲ್ಲಿ BEML- BANGALORE, KGF, MYSORE, HAL, BEL, BHEL, VISL, VIL, KPTCL, ಮೈ ಶುಗರ್, BSNL, ಸೇರಿದಂತೆ ಖಾಸಗೀಕರಣ ಗೊಳಿಸಲು ಮುಂದಾಗಿರುವ ಸಾರ್ವಜನಿಕ ಸ್ವಾಮ್ಯ ದ ಕಾರ್ಖಾನೆಗಳ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಖಾಸಗಿಕರಣವನ್ನು ಈ ಕೂಡಲೇ ಕೈ ಬಿಡದೆ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಕೇಂದ್ರ ಹುಬ್ಬಳ್ಳಿಗೆ ರೈಲ್ವೆ ಡಿವಿಜನಿಗೆ ಕೋಕ್, ಏಮ್ಸ್ ನೀಡಲು ಒಲವು ಸಮಿತಿ ಆಕ್ರೋಶ

ಪ್ರತಿಭಟನೆಯ ಮುಂದಾಳತ್ವವನ್ನು ವಹಿಸಿದ್ದ ಖಾಸಗೀಕರಣ ವಿರೋಧಿ ವೇದಿಕೆಯ ಪ್ರಧಾನ ಸಂಚಾಲಕಿ ಎಸ್‌. ವರಲಕ್ಷ್ಮಿ ಮಾತನಾಡಿ, ಕೇಂದ್ರ ಸರಕಾರವು ಅತ್ಯಂತ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕ್‌, ವಿಮೆ, ರಕ್ಷಣೆ, ರೈಲ್ವೇ, ನವರತ್ನ, ಮಿನಿರತ್ನಗಳಾದ BEML- BANGALORE, KGF, MYSORE, HAL, BEL, BHEL, VISL, VIL, KPTCL, ಮೈ ಶುಗರ್, BSNL, ಸೇರಿದಂತೆ ನೂರಾರು ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಖಾಸಗೀಕರಣದಿಂದ ಖಾಸಗೀಯವರ ಕೈಯಲ್ಲಿ ಆರ್ಥಿಕ ಮತ್ತು ಅಧಿಕಾರದ ಕೇಂದ್ರೀಕರಣವಾಗುತ್ತದೆ. ಅದಾಯ ಮತ್ತು ಸಂಫತ್ತಿನಲ್ಲಿ ಅಸಮಾನತೆಗಳು ಹೆಚ್ಚುತ್ತವೆ. ಸಂಪನ್ಮೂಲಗಳ ಹಂಚಿಕೆಯ ಅಸಮಾನತೆಯಿಂದ ಕಲ್ಯಾಣ ಕಾರ್ಯಕ್ರಮಗಳು ಕುಸಿಯುತ್ತವೆ.

ನಿರೋದ್ಯೋಗ ಹೆಚ್ಚಿ ಸಮಾಜಿಕ ಸಮಸ್ಯೆ ಬಿಗಡಾಯಿಸುತ್ತದೆ. ಈಗಾಗಲೇ ಪಿಎಸ್‌ಯು ಗಳಲ್ಲಿ ಕೆಲಸ ಮಾಡುತ್ತಿರುವ 27 ಲಕ್ಷ ಜನರಲ್ಲಿ ಶೇಕಡಾ 25 ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಈ ಎಲ್ಲಾ ರೀತಿಯ ಅಪಾಯಗಳನ್ನು ತಡೆಗಟ್ಟಲು ಖಾಸಗೀಕರಣವನ್ನು ತಡೆಯುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರ ರಾಜ್ಯದ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಟ್ಟಿರುವಂತಹ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಗೊಳಿಸುವುದಿಲ್ಲ ಎನ್ನುವ ನಿರ್ಣಯವನ್ನು ವಿಧಾನಸಭೆಯಲ್ಲಿ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇಂದಿನಿಂದ ಪ್ರಾರಂಭವಾಗಿರುವ ಹೋರಾಟ ನಿರಂತರವಾಗಿ ನಡೆಯಲಿದ್ದು ವಿಧಾನ ಸಭೆಯ ನಿರ್ಣಯ ಕೈಗೊಳ್ಳುವವರೆಗೂ ಮುಂದುವರೆಯಲಿದೆ ಎಂದು ಇದೇ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದರು.

ಉದ್ಯಾನದ ಅತಿಕ್ರಮಣ ತಡೆಗಟ್ಟಿಗೆ ಒತ್ತಾಯಿಸಿ ಪಾಲಿಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಈ ಪ್ರತಿಭಟನೆ ನೇತೃತ್ವವನ್ನು ವೇದಿಕೆಯ ಪ್ರಧಾನ ಸಂಚಾಲಕಿ ವರಲಕ್ಷ್ಮಿ, ಸಂಚಾಲಕ ರಾದ ಮೀನಾಕ್ಷಿ ಸುಂದರಂ, ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಎಚ್ ವಿ ಸುದರ್ಶನ್, ರತ್ನಾಕರ್ ಶೆಣೈ ವಹಿಸಿದ್ದರು. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಬೆಂಬಲ ದೂರವಾಣಿ ಮೂಲಕ ಬೆಂಬಲ ಸೂಚಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷದ ವತಿಯಿಂದ ಎಲ್ಲಾ ರೀತಿಯ ಬೆಂಬಲವನ್ನು ನೀಡುವ ಭರವಸೆಯನ್ನು ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಂ ನಾರಾಯಣಸ್ವಾಮಿ ಪ್ರತಿಭಠನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಮನವಿಯನ್ನು ಸ್ವೀಕರಿಸಿದರು. ಇದೇ ವೇಳೆ ವಿಧಾನ ಪರಿಷತ್ತು ಹಾಗೂ ವಿಧಾನ ಸಭೆಯಲ್ಲಿ ಖಾಸಗೀಕರಣದ ವಿರುದ್ದ ನಿರ್ಣಯವನ್ನು ಪ್ರಾರಂಭಿಸುವ ಭರವಸೆಯನ್ನು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here