ಅಕ್ರಮ ಮದ್ಯ ಮಾರಾಟಕ್ಕೆ ಶಾಸಕರ ಕುಮ್ಮಕ್ಕು, ಬಿಹಾರ್ ಮಾದರಿ ಕಾಯ್ದೆ ಜಾರಿಗೆ ಆಗ್ರಹ

0
406

ಕಲಬುರಗಿ: ಜಿಲ್ಲೆಯಲ್ಲಿ ತಲೆ ಎತ್ತಿರುವ ವ್ಯಾಪಕ ಅಕ್ರಮ ಮದ್ಯ ಮಾರಾಟಗಾರರನ್ನು ಮಟ್ಟ ಹಾಕುವ ರೀತಿಯಲ್ಲಿ ರಾಜ್ಯ ಸರ್ಕಾರವು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಆ ದಿಸೆಯಲ್ಲಿ ಬಿಹಾರ್ ಮಾದರಿಯಲ್ಲಿ ಕಾಯ್ದೆ ಜಾರಿಗೊಳಿಸಬೇಕು ಎಂದು ಶ್ರಮಜೀವಿಗಳ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಹಿರೇಮಠ್ ಅವರು ಇಲ್ಲಿ ಒತ್ತಾಯಿಸಿದರು.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಆಳಂದ್ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಮದ್ಯ ಮುಕ್ತ ಆಂದೋಲನ ಗ್ರಾಮಗಳಲ್ಲಿ ಕೈಗೊಂಡ ಜನಾಂದೋಲನದಿಂದಾಗಿ ಒಂದೆರಡು ಗ್ರಾಮಗಳು ಮದ್ಯ ಮುಕ್ತವಾಗುವ ಹಂತದಲ್ಲಿದ್ದವು. ಯಾವಾಗ ಸುಭಾಷ್ ಆರ್. ಗುತ್ತೇದಾರ್ ಅವರು ಶಾಸಕರಾಗಿ ಆಯ್ಕೆಯಾದರೂ ಈಗ ಆ ಗ್ರಾಮಗಳಲ್ಲಿಯೂ ಸೇರಿದಂತೆ ಇಡೀ ತಾಲ್ಲೂಕಿನಲ್ಲಿ ಮನೆ, ಮನೆಗಳಲ್ಲಿ, ಕಿರಾಣಿ, ಪಾನ್ ಶಾಪ್ ಅಂಗಡಿಗಳಲ್ಲಿಯೂ ಸಹ ರಾಜಾ ರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಬಿಹಾರದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಹೊಸ ಕಾನೂನು ಜಾರಿಗೆ ತರಲಾಗಿದೆ. ಅಲ್ಲಿ ಅಕ್ರಮ ಮದ್ಯ ಮಾರಾಟಗಾರರಿಗೆ ಆರು ತಿಂಗಳವರೆಗೆ ಜಾಮೀನು ರಹಿತ ಬಂಧನದಲ್ಲಿಟ್ಟು ಅವರ ಆಸ್ತಿ, ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಂತಹ ಹೊಸ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಈ ಕುರಿತು ಜೂನ್ 22ರಂದು ಹೇರೂರ್ (ಬಿ)ಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದು, ಶ್ರಮಜೀವಿಗಳ ವೇದಿಕೆಯ ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಖಲೀಲ್ ಅನ್ಸಾರಿ, ನಂದೂರಕರ್, ಹರ್ಷ, ಹಣಮಂತ್, ವಿಜಯಕುಮಾರ್ ಪಾಟೀಲ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here