ಸುರಪುರ: ತಾಲೂಕಿನ ಏವೂರ ಗ್ರಾಮದಲ್ಲಿರುವ ಸುಮಾರು ೧೨ನೇ ಶತಮಾನದ ಸಂಗಮೇಶ್ವರ ಸ್ವಯಂಭೋ ಸೋಮೇಶ್ವರ ದೇವಸ್ಥಾನದ ಸಂರಕ್ಷಣೆ ಮಾಡುವಂತೆ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘದ ಮುಖಂಡರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಮುಖಂಡರು,ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದಾಗಿರುವ ಐತಿಹಾಸಿಕ ಏವೂರು ಗ್ರಾಮದಲ್ಲಿರುವ ಸಂಗಮೇಶ್ವರ ಸ್ವಯಂಭೋ ಸೋಮೇಶ್ವರ ದೇವಸ್ಥಾನಗಳು ಪ್ರವಾಸೋದ್ಯಮ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ದೇವಸ್ಥಾನಗಳು ಶಿಥಿಲಾವಸ್ಥೆಗೊಂಡಿವೆ,ದೇವಾಲಯದ ಗೋಡೆಗಳು ವಾಲಿವೆ ಇನ್ನು ದೇವಸ್ಥಾನದ ಸುತ್ತಮುತ್ತಲು ಮುಳ್ಳುಗಿಡಗಳು ಬೆಳೆದಿವೆ,ಇದರಿಂದ ಐತಿಹಾಸಿಕ ದೇವಸ್ಥಾನಕ್ಕೆ ಅಪಮಾನಿಸಿದಂತಾಗುತ್ತಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಘಟಿತ ಹೋರಾಟವೆ ಪ್ರಬಲ ಅಸ್ತ್ರ : ಲಕ್ಷ್ಮಣ ದಸ್ತಿ
ಆದ್ದರಿಂದ ಏವೂರು ಗ್ರಾಮದಲ್ಲಿರುವ ಈ ದೇವಸ್ಥಾನವನ್ನು ಸಂರಕ್ಷಣೆಯ ಜೊತೆಗೆ ಅಭೀವೃಧ್ಧಿ ಪಡಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪ್ರವಾಸೋದ್ಯಮ ಅಭಿವೃಧ್ಧಿ ಸಮಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಭಾಗೇಶ ಬಿ.ಏವೂರ ಶರಣು ದೇವರಮನಿ ಗಂಗಾಧರ ಬಿಗುಡಿ ಪರಮಾನಂದ ಏವೂರ ಇದ್ದರು.