ಕಲಬುರಗಿ: ಹಿರಿಯ ಪತ್ರಕರ್ತ ವಾದಿರಾಜ್ ವ್ಶಾಸಮುದ್ರ ಅವರು ರಚಿಸಿದ ಪಯಣ ಕೃತಿ ವೃತ್ತಿ ಸಾಹಿತ್ಶದ ಪುಸ್ತಕವಾಗಿದ್ದು ಪತ್ರಕರ್ತರಿಗೆ ಮಾರ್ಗದರ್ಶನವಾಗಲಿದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಶಾಲಯದ ಕುಲಪತಿ ಪ್ರೊ.ಹೆಚ್.ಎಂ. ಮಹೇಶ್ವರಯ್ಯ ಅಭಿಪ್ರಾಯಪಟ್ಟರು.
ಹೆಚ್.ಕೆ.ಸಿ.ಸಿ.ಐ ಹಾಗೂ ಸಂಸ್ರ್ಕತಿ ಪ್ರಕಾಶನ ಸೇಡಂ ವತಿಯಿಂದ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಿರಿಯ ಪತ್ರಕರ್ತ ವಾದಿರಾಜ್ ವ್ಶಾಸಮುದ್ರ ಅವರ ‘ಪಯಣ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವ್ಶಾಸಮುದ್ರರವರ ಈ ಪುಸ್ತಕದಲ್ಲಿ ಹಲವು ಘಟನೆಗಳನ್ನು ದಾಖಲಿಸಿದ್ದಾರೆ. ತಾವು ನೋವುಂಡ ಬಗ್ಗೆˌ ಕಲಿತ ಶಾಲೆˌ ಶಿಕ್ಷಕರು ಹಾಗೂ ಪತ್ರಿಕೊದ್ಶಮದ ಸುದೀರ್ಘ ಇತಿಹಾಸವನ್ನು ಈ ಪಯಣ ಪುಸ್ತಕ ಹೊಂದಿದೆ ಎಂದರು.
ಪಯಣ ಕೃತಿ ಆತ್ಮೀಯ ಬರಹವಾಗಿದ್ದುˌ ಚಿಕ್ಕದಾಗಿದ್ದರೂ ಹಲವು ವಿಶೇಷತೆ ಹೊಂದಿದೆ. ಅಲ್ಲದೆ ಬರವಣಿಗೆ ಪ್ರಾರಂಭ ಮಾಡಿರುವ ವಾದಿರಾಜ್ ರವರಿಂದ ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಮಹೇಶ್ವರಯ್ಯ ಆಶಿಸಿದರು. ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಕೃತಿ ಪರಿಚಯಿಸಿದರು.
ಮುಖ್ಶ ಅತಿಥಿಗಳಾಗಿ ಪತ್ರಕರ್ತ ಹಾಗೂ ಲೇಖಕ ಶ್ರೀನಿವಾಸ ಶಿರನೂರಕರ್ˌ ವಿಧಾನಪರಿಷತ್ ಸದಸ್ಶ ಬಿ.ಜಿ ಪಾಟೀಲ್ˌ ಪತ್ರಕರ್ತ ಜಯತೀರ್ಥ ಪಾಟೀಲ್ˌ ಬಾಬುರಾವ್ ಯಡ್ರಾಮಿˌ ಕುಡಾ ಮಾಜಿ ಅಧ್ಶಕ್ಷ ಅಜಗರ್ ಚುಲಬುಲ್ˌ ಸಾಂಸ್ರ್ಕತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿˌ ಗಿರೀಶ್ ಕಡ್ಲೇವಾಡˌ ಡಾ.ಕೆ.ಎಂ. ಕುಮಾರಸ್ವಾಮಿˌ ಬಿ.ಹೆಚ್.ನಿರಗುಡಿˌ ಸುರೇಶ್ ಬಡಿಗೇರˌ ಸಿದ್ದಾರೂಢ ಬಿರಾದಾರˌ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಶಿಕಾಂತ ಪಾಟೀಲ್ ಸ್ವಾಗತಿಸಿದರು. ಪ್ರಭಾಕರ್ ಜೋಶಿ ಪ್ರಕಾಶನದ ಕುರಿತು ಮಾತನಾಡಿದರು. ಹೆಚ್.ಕೆ.ಸಿ.ಸಿ.ಐ ಅಧ್ಶಕ್ಷ ಅಮರನಾಥ ಪಾಟೀಲ್ ಅಧ್ಶಕ್ಷತೆ ವಹಿಸಿದ್ದರು.