ಕಲಬುರಗಿ: ಸಂಸದ ಡಾ.ಉಮೇಶ್ ಜಾಧವ ಅವರು ಮತದಾರರ ವಿಶ್ವಾಸ ಮತ್ತು ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದರು.
ಅವರು ಆಯ್ಕೆಯಾಗಿ ಇಲ್ಲಿಯವರೆಗೆ ಈ ಕ್ಷೇತ್ರಕ್ಕೆ ಬರಬೇಕಾದ ಯೋಜನೆಗಳು ಅನುಕೂಲಕ್ಕಿಂತ ಅವಾಂತರವೇ ಹೆಚ್ಚಾಗಿವೆ ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುವುದೇ ಇಕೋಕ್ಲಬ್ ಮುಖ್ಯ ಉದ್ದೇಶ
ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಅವಿರತ ಪ್ರಯತ್ನದಿಂದ ಕಲಬುರಗಿಯಲ್ಲಿ ರೇಲ್ವೆ ವಿಭಾಗೀಯ ಕಚೇರಿ ಮಂಜೂರಾಗಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ಕೈಬಿಟ್ಟಿದೆ. ಅತ್ಯಂತ ಹಿಂದುಳಿದ ಪ್ರದೇಶವಾದ ಕಲಬುರಗಿ ಯಲ್ಲಿ AIMS ಸ್ಥಾಪನೆಯಾಗಬೇಕಿತ್ತು. ಅದನ್ನೂ ಕೂಡ ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂಶಿಸಿದರು.
ಈ ಭಾಗದ ನಿರುದ್ಯೋಗ ನಿವಾರಣೆಗೆ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರಂಭವಾಗಬೇಕಾಗಿದ್ದ CENTER FOR SKIL EXLENCE ನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆರಂಭಿಸಲು ಹೊರಟಿರುವುದು ಯಾವ ಪುರುಶಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ನಿಧನಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಕಂಬನಿ
ಈ ಭಾಗದಲ್ಲಿ ಕೇಂದ್ರದ ಆಹಾರ ಪರಿವೀಕ್ಷಣಾ ಘಟಕವನ್ನು ಕಲಬುರಗಿ ಯಿಂದ ಧಾರವಾಡಕ್ಕೆ ಸ್ಥಳಾಂತರಿಸಿರುವುದು ನಮ್ಮ ಭಾಗದ ಜನರ ಬಗ್ಗೆ ನಿಮಗಿರುವ ನಿಷ್ಕಾಳಜಿ ಪ್ರದರ್ಶಿಸುವಂತಿದೆ. ನಮ್ಮ ಜಿಲ್ಲೆಯಲ್ಲಿ ಮಂಜೂರಾದ ಜವಳಿ ಪಾರ್ಕ್ ಮೈಸೂರಿಗೆ ಸ್ಥಳಾಂತರಿಸಿರುವುದು ಏನನ್ನು ತೋರಿಸಿಕೊಡುತ್ತದೆ ಎಂದು ಟೀಕಿಸಿದರು.
ಚಿತ್ತಾಪುರದಲ್ಲಿ ಸ್ಥಾಪಿಸಬೇಕಾಗಿದ್ದ NIMZ ಯೋಜನೆಯನ್ನು ಸಹ ಕೈ ಬಿಡಲಾಗಿದೆ. ಯಾದಗಿರಿಯಲ್ಲಿ ಪ್ರಾರಂಭಿಸಬೇಕಾಗಿದ್ದ ರೇಲ್ವೆ ಕೋಚ್ ಫ್ಯಾಕ್ಟರಿ ಕೂಡ ಸ್ಥಳಾಂತರಿಸಲಾಗಿದೆ. ಹೀಗೆ ಅನೇಕ ದೊಡ್ಡ ದೊಡ್ಡ ಯೋಜನೆಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಕೈತಪ್ಪಿ ಹೋಗುತ್ತಿರುವುದು ತಮಗೆ ತಿಳಿದಿಲ್ಲವೇ? ಈ ಬಗ್ಗೆ ಒಂದು ಬಾರಿ ಕೂಡ ಸಂಸದರು ಲೋಕಸಭೆಯಲ್ಲಿ ವಿರೋಧಿಸಿಲ್ಲ. ತಮಗೆ ಧೈರ್ಯ ಮತ್ತು ಕಾಳಜಿ ಇದ್ದರೆ ಈ ಭಾಗದ ಜನರ ಪರ ನಿಂತು ಬೀದಿಗೆ ಬನ್ನಿ. ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆ. ಇಲ್ಲದಿದ್ದರೆ ನೀವು ತ್ಯಾಗ ಪತ್ರ ಸಲ್ಲಿಸಿ ಮನೆಗೆ ಬರುವುದು ಒಳ್ಳೆಯದು ಎಂದು ಆಗ್ರಹಿಸಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ದೀಪಮಾಲೆ, ಸಾಹಿತಿ ಮಳಲಿ ವಸಂತಕುಮಾರರೂ..!
ಇದೆಲ್ಲದಕ್ಕೂ ತಾವು ಕಿವಿಗೊಡದೇ ಹೋದರೆ, ಕೇಂದ್ರ ಸರಕಾರ ಮತ್ತು ತಮ್ಮ ವಿರುದ್ಧ ಸಂಸದರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರೊ.ಆರ್.ಕೆ.ಹುಡಗಿ, ದತ್ತಾತ್ರೇಯ ಇಕ್ಕಳಕಿ, ಶೌಕತ್ ಅಲಿ ಆಲೂರ್, ಗಣೇಶ ಪಾಟೀಲ್ ಇದ್ದರು.