ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುವುದೇ ಇಕೋಕ್ಲಬ್ ಮುಖ್ಯ ಉದ್ದೇಶ

1
54

ಶಹಾಪುರ :ಪಠ್ಯಪುಸ್ತಕಗಳ ಕಲಿಕೆಯ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಶಾಲೆಯ ಮುಖ್ಯಗುರುಗಳಾದ ಚಿದಾನಂದ ಹಿರೇಮಠ ಹೇಳಿದರು.

ತಾಲ್ಲೂಕಿನ ಹೊಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ರಾಂಪೂರ ಗ್ರಾಮದ ಪ್ರಗತಿಪರ ರೈತ ಶರಣಪ್ಪ ಅವರ ಬಾಳೆ ತೋಟದಲ್ಲಿ ಹಮ್ಮಿಕೊಂಡಿರುವ ಇಕೋ ಕ್ಲಬ್ ವತಿಯಿಂದ ಕ್ಷೇತ್ರ ಭೇಟಿ ಮಾಡಿ ಮಾತನಾಡಿದರು.

Contact Your\'s Advertisement; 9902492681

ಮಾಜಿ ಶಾಸಕ ವಾಲ್ಮೀಕಿ ನಾಯಕ ನಿಧನಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಕಂಬನಿ

ಶಾಲೆಗಳಲ್ಲಿ ಇಕೋ ಕ್ಲಬ್ ಏರ್ಪಡಿಸುವುದರಿಂದ ಶಾಲೆಗಳ ಸುತ್ತ ಮುತ್ತಲೂ ಸ್ವಚ್ಚವಾಗಿಡಲು ಹಸಿರಾಗಿಡಲು ಅದೆಷ್ಟು ಕಾಳಜಿ ವಹಿಸುವುದು ಅಲ್ಲದೆ ವಿದ್ಯಾರ್ಥಿ ಜೀವನದಿಂದಲೇ ಪರಿಸರದ ಬಗ್ಗೆ ಅಪಾರ ಕಾಳಜಿ ಹುಟ್ಟುವಂತೆ ಮಾಡುವ ಇಕೋ ಕ್ಲಬಿನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರು ಅಂಗಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಆಗಾಗ ಶಾಲೆಗಳಲ್ಲಿ ಪರಿಸರ ಮಾಲಿನ್ಯದ ಕುರಿತಂತೆ ಭಾಷಣ ಸ್ಪರ್ಧೆ ಪ್ರಬಂಧ ಸ್ಪರ್ಧೆ ಇನ್ನಿತರ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮಗಳು ಏರ್ಪಡಿಸುವುದು ಅಗತ್ಯತೆ ಇದೆ ಎಂದು ನುಡಿದರು.

ಶಾಲೆಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ವಿದ್ಯಾರ್ಥಿಗಳಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿವೆ ಅದರಲ್ಲೂ ಕೂಡ ಇಕೋ ಕ್ಲಬ್ ಕೂಡ ಪ್ರಮುಖವಾಗಿದೆ ಆದರೆ ಈ ಯೋಜನೆಗಳಿಗೆ ಜೀವ ತುಂಬುವ ಕೆಲಸ ಶಿಕ್ಷಕರು ಪ್ರಾಮಾಣಿಕತೆಯಿಂದ ಮಾಡಬೇಕಾಗಿದೆ ಎ೦ದರು.

ಸಾಹಿತಿ ವಿಶ್ವನಾಥ ಭಕರೆ ಅವರ ಶಿವರುದ್ರಯ್ಯನ ಶಿವತಾಂಡವ ಕೃತಿ ಜನಾರ್ಪಣೆ 21ರಂದು

ಈ ಸಮಾರಂಭದಲ್ಲಿ ಸಿ.ಆರ್.ಪಿ ಸೋಮಯ್ಯ ಹಿರೇಮಠ, ಜ್ಯೋತಿರ್ಲಿಂಗ ಹಾಗೂ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here