ಪಿಂಜಾರ ಸಂಘದ ಅಧ್ಯಕ್ಷರಾಗಿ ಮಹಿಮೂದಸಾಬ, ಪ್ರಧಾನ ಕಾರ್ಯದರ್ಶಿ ಡಾ. ಸೈಯದ್ ಕೊಂಕಲ್ ನೇಮಕ

1
108

ವಡಗೇರಾ: ನಗರದಲ್ಲಿ ಭಾನುವಾರ ವಡಗೇರಾ ತಾಲೂಕ ಘಟಕದ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಆದೇಶ ಪ್ರತಿಗಳನ್ನು ನೀಡಿ ಸನ್ಮಾನಿಸಿ ಮಾತನಾಡಿದ ಪಿಂಜಾರ ವಿವಿಧೋದ್ದೇಶ ಸಂಘದ ಜಿಲ್ಲಾ ಅಧ್ಯಕ್ಷ ಅಹ್ಮದ್ ಪಠಾಣ್ ಸಧ್ಯದ ದಿನಮಾನದಲ್ಲಿ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟ ಹಾಗೂ ಸಂಘಟನೆ ಅನಿವಾರ್ಯ ಆಗಿರುವುದು ತಮಗೆ ತಿಳಿದ ವಿಷಯ.

Contact Your\'s Advertisement; 9902492681

ಸಮಾಜಿಕ ಅಂತರ ಮರೆತು ಮುಗಿಬಿದ್ದ ನಟ ಪುನೀತ್ ರಾಜ ಕುಮಾರ್ ಅಭಿಮಾನಿಗಳು

ಪಿಂಜಾರ್ ಸಮಾಜದ ಶ್ರೇಯೋಭಿವೃದ್ಧಿಗೆ ಸಂಘಟನೆಯ ಮೂಲಕ ಘನ ಸರ್ಕಾರದ ಗಮನ ಸೆಳೆಯುವುದು ಅವಶ್ಯಕ ಹಾಗೂ ಅನಿವಾರ್ಯ ಈ ನಿಟ್ಟಿನಲ್ಲಿ ಸಮಾಜದ ಮಹಿಮೂದಸಾಬ್ ನದಾಫ ಇವರು ತಮ್ಮ ಕ್ರಿಯಾಶೀಲತೆ ಮತ್ತು ಸಂಘಟನೆಗೆ ತಮ್ಮ ಕಾರ್ಯ ವೈಖರಿ ಹಾಗೂ ಸಮರ್ಪಣಾ ಭಾವನೆಯನ್ನು ಗೌರವಿಸಿ ತಮ್ಮನ್ನು ಯಾದಗಿರಿ ಜಿಲ್ಲಾ ಪಿಂಜಾರ ವಿವಿಧೋದ್ದೇಶ ಸೇವಾ ಸಂಘದ ವಡಗೇರಾ ತಾಲೂಕ ಅಧ್ಯಕ್ಷರಾಗಿ ನದಾಫ ಇವರ ನೇಮಕ ಬಹಳ ಸಂತೋಷ ವೆನಿಸುತ್ತದೆ ಎಂದು ಹೇಳಿದರು.

ಇನ್ನೂ ಪಿಂಜಾರ ತಾಲೂಕ ಅಧ್ಯಕ್ಷರಾಗಿ ಆದೇಶ ಪ್ರತಿ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿದ ಮೈಹಿಮೂದಸಾಬ ನದಾಫ್ ಹೋರಾಟದ ಜೊತೆ ಜಿಲ್ಲೆಯಲ್ಲಿ ಸಂಘಟನೆಗೆ ಒತ್ತು ನೀಡಿ ವಿವಿಧೋದ್ದೇಶ ಸಂಘದ ಪದಾಧಿಕಾರಿಗಳೊಂದಿಗೆ ಹೋರಾಟದ ಚಟುವಟಿಕೆಗಳೊಂದಿಗೆ ಸಂಘಟನೆಗೆ ಒತ್ತು ನೀಡುವ ಹೊಣೆಗಾರಿಕೆ ಹೆಚ್ಚಾಗಿರುತ್ತದೆ ಎಂದರು.

ಗ್ರಾಮಸ್ಥರಿಂದ ಬಸ್‌ಗೆ ಪೂಜೆ ಸಲ್ಲಿಸಿ ಸಂಚಾರಕ್ಕೆ ಚಾಲನೆ

ಸಮುದಾಯದ ಸಂಘಟನೆ ಪಿಂಜಾರ ವಿವಿಧೋದ್ದೇಶ ಸಿದ್ಧಾಂತ ಪ್ರತಿ ಪಾದಿಸಿ ಯುವಜನತೆ ಸೇರಿದಂತೆ ತಳಮಟ್ಟದಿಂದ ಸಮುದಾಯವನ್ನು ಕಟ್ಟಿ ಗಟ್ಟಿಗೊಳಿಸಿ ತಾಲೂಕ ಸಂಘಟನೆ ಬಲಪಡಿಸುತ್ತಾ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳೊಂದಿಗೆ ತಾಲೂಕಿನಲ್ಲಿ ಇರುವ ಸಮುದಾಯದ ಬಡಜನರ ಸಂಕಷ್ಟಕ್ಕೆ ಸಂಪೂರ್ಣ ಸಹಕರಿಸುವುದಾಗಿ ಮೈಹಿಮೂದಸಾಬ್ ನದಾಫ ಹೇಳಿದರು.

ಈ ಸಂದರ್ಭದಲ್ಲಿ ದೆವದುರ್ಗ ತಾಲೂಕ ಅಧ್ಯಕ್ಷ ಕಾಸಿಂಸಾಬ ಬುಂದೂರ,ಎಂ ಡಿ ಲಾಲಸಾಬ,ಅಬ್ದುಲಸಾಬ ನದಾಫ, ಶರಮುದ್ದೀನ್ ಶಾಖಾಪೂರ,ದಾವಲಸಾಬ ಹುಣಸಗಿ,ಬಾವಾಸಾಬ ಪರಸನಳ್ಳಿ,ಕಾಸಿಂಸಾಬ ಬೇವಿನಾಳ,ಸೋಪಿಸಾಬ ಡಿ ಸುರಪುರ, ಹುಸೇನ್ ಸಾಬ್ ಗಾದಿ,ಸಮುದಾಯದ ಮುಖಂಡರು ಹುಸೇನ್ ಸಾಬ್ ಬಿರೂರ್ ಜಲೀಲ್ ಸಾಬ್ ಯಕ್ಷಿಂತಿ ಬಂದೇನವಾಜ್ ಗೊಂದೆನೂರ, ಸೈಯದ್ ಬಾಷಾ ಗುಂಡ್ಲೂರು, ಮಹಮ್ಮದ್ ಯೂಸೂಪ್ ವಡಗೇರಾ,ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here