ಸುರಪುರ: ಜಿಲ್ಲಾ ಪಂಚಾಯತಿ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕು ಪಂಚಾಯತಿ ಮತ್ತು ಅಕ್ಷರ ದಾಸೋಹ ಇಲಾಖೆ ಸುರಪುರ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕನ ಅಡುಗೆ ಸಹಾಯಕಿಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ತಾಲೂಕು ಪಂಚಾಯತಿ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಮಾತನಾಡಿ,ಅಡುಗೆ ಸಹಾಯಕರಿಯರೆಂದರೆ ತಾವೆಲ್ಲರು ಮಕ್ಕಳಿಗೆ ತಾಯಂದಿರಿದ್ದಂತೆ ಆದರೆ ನಿಮಗೆ ಸರಕಾರ ನೀಡುವ ಸಂಭಾವನೆ ಕಡಿಮೆಯಿರಬಹುದು ಆದರೆ ತಾವು ಗೌರವದಲ್ಲಿ ತುಂಬಾ ಎತ್ತರಲ್ಲಿರುವುದಾಗಿ ಗೌರವದ ಮಾತುಗಳನ್ನಾಡಿದರು.ಅಲ್ಲದೆ ತಮಗಾಗಿ ಇಂದು ಒಂದು ದಿನದ ತರಬೇತಿಯ ಮೂಲಕ ಶಾಲೆಗಳಲ್ಲಿನ ತಮ್ಮ ಕರ್ತವ್ಯದ ಮಹತ್ವ ಹಾಗು ಸ್ವಚ್ಛತೆಯನ್ನು ಕಾಪಾಡುವ ಕುರಿತು ತರಬೇತಿ ನೀಡಲಾಗುತ್ತಿದ್ದು,ಇಲ್ಲಿ ನೀಡುವ ಸಲಹೆಗಳನ್ನು ಪಾಲಿಸುವಂತೆ ತಿಳಿಸಿದರು.
ಕಲಬುರಗಿಯಲ್ಲಿ ಮಾ.26 ರಂದು ಕ್ಯಾಂಪಸ್ ಸಂದರ್ಶನ
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಅವರು ಮಾತನಾಡಿ,ಅಕ್ಷರ ದಾಸೋಹದ ಸಹಾಯಕಿಯರ ಸಂಬಳ ತೀರಾ ಕಡಿಮೆಯಿದೆ,ಈಗ ನೀಡುತ್ತಿರುವ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ ಆದ್ದರಿಂದ ಸರಕಾರ ಕನಿಷ್ಠ ೫ ಸಾವಿರ ರೂಪಾಯಿಗಳ ಸಂಬಳವನ್ನಾದರು ನೀಡಬೇಕೆಂದು ಮನವಿ ಮಾಡಿದರು.ಅಲ್ಲದೆ ಈ ಮೊದಲು ತಾಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆ ಇದ್ದಿದ್ದಕ್ಕಿಂತಲು ಮೌನೇಶ ಕಂಬಾರವರು ಬಂದ ನಂತರ ತಾಲೂಕಿನಲ್ಲಿ ಈ ಯೋಜನೆಯಲ್ಲಿ ತುಂಬಾ ಪಾರದರ್ಶಕತೆ ಬಂದಿದೆ ಎಂದು ಮೌನೇಶ ಕಂಬಾರವರ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ತೋಟದ ಮತ್ತು ಪರಶುರಾಮ ಅವರಿಂದ ಎಲ್ಲಾ ಸಹಾಯಕಿಯರಿಗೆ ತರಬೇತಿ ನೀಡಿ ಅಗ್ನಿ ಶಾಮಕ ದಳದ ಅಧಿಕಾರಿಗಳಿಂದ ತರಬೇತಿ ನಡೆಸಲಾಯಿತು.ಸರಕಾರಿ ಬಾಲಕರ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಯಲ್ಲಪ್ಪ ಕಾಡ್ಲೂರ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ರಾಜಶೇಖರ ದೇಸಾಯಿ ಅಡುಗೆ ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷೆ ಕಲ್ಪನಾ ತಿಪ್ಪಣ್ಣ ಸಿಆರ್‌ಪಿ ಸುರಪುರ ವೇದಿಕೆ ಮೇಲಿದ್ದರು.
ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಗೋನಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಪರಶುರಾಮ ನಿರೂಪಿಸಿದರು,ಶಿವುಕುಮಾರ ದಳವಾಯಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಐದುನೂರಕ್ಕೂ ಹೆಚ್ಚು ಜನ ಅಡುಗೆ ಸಹಾಯಕಿಯರು ಭಾಗವಹಿಸಿದ್ದರು.