ಆಳಂದ: ಬಬಲೇಶ್ವರ ಗ್ರಾಮದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶುಕ್ರವಾರ ಆಳಂದ ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದ 50 ಲಕ್ಷ.ರೂ ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗಿನ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಬಬಲೇಶ್ವರ ಗ್ರಾಮ ಚಿಕ್ಕದಾಗಿದ್ದರೂ ಅನೇಕ ವೈವಿಧ್ಯತೆಗಳನ್ನು ಹೊಂದಿದೆ ಇಲ್ಲಿಯ ಜನರು ಶ್ರಮಜೀವಿಗಳಾಗಿದ್ದು ಯಾರ ಮೇಲೆಯೂ ಅವಲಂಬನೆಯಾಗದೆ ಸ್ವತಂತ್ರ ಜೀವನ ನಡೆಸುತ್ತಾರೆ ಹೀಗಾಗಿ ಈ ಗ್ರಾಮಕ್ಕೆ ಬೇಕಾಗಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಈ ಹಿಂದೆ ಸಂಚರಿಸಿ ಬಂದ ಆಗಿದ್ದ ಬಸ್ ಸೇವೆಗೆ ಶಾಸಕರು ಮತ್ತೆ ಚಾಲನೆ ನೀಡಿದರು. ಇದಕ್ಕೆ ಗ್ರಾಮಸ್ಥರು ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಖಜೂರಿಯ ಮುರುಘೇಂದ್ರ ಶ್ರೀಗಳು, ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಶರಣಪ್ಪ ಹೊಸಮನೆ, ಶ್ರೀಮಂತರಾವ ಗೋಧೆ, ಶ್ರೀಧರ ಕೊಟ್ಟರಕಿ, ಶಿವಪ್ರಕಾಶ ಹೀರಾ, ಗ್ರಾ.ಪಂ ಅಧ್ಯಕ್ಷ ಪ್ರಕಾಶ ಭೂಸಣಗೆ, ಗ್ರಾಮದ ರಿಜ್ವಾನ್ ಶೇಖ್, ಮಹಾದೇವ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.