ಕ್ಷೇತ್ರದ ಜ್ವಲಂತ ಸಮಸ್ಯಗಳ ಪಟ್ಟಿಮಾಡಲು ಶಾಸಕ ನರಸಿಂಹ ನಾಯಕ ಸೂಚನೆ

0
34

ಸುರಪುರ: ಮುಂಬರು ಏಪ್ರಿಲ್ ೧೭ ರಂದು ತಾಲೂಕಿನ ದೇವವತ್ಕಲ್ ಗ್ರಾಮದಲ್ಲಿ ನಮ್ಮ ನಡೆ ಹಳ್ಳಿ ಕಡೆ ಅಭಿಯಾನದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರು ನಗರದ ತಾಲೂಕು ಪಂಚಾಯತ ಸಬಾಂಗಣದಲ್ಲಿ ಹುಣಸಗಿ ಮತ್ತು ಸುರಪುರ ತಹಸೀಲ್ದಾರರ ಸಹಭಾಗಿತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ,ಕಂದಾಯ ಸಚಿವರಾದ ಆರ್.ಅಶೋಕ ಅವರು ಏಪ್ರಿಲ್ ೧೭ ರಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿದ್ದು ನಮ್ಮ ತಾಲೂಕಿನಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆಯಡಿ ಬರುವ ಸ್ಮಶಾನ ಭೂಮಿ, ಪಹಣಿ ತಿದ್ದುಪಡಿ, ಪಡಿತರ ಚೀಟಿ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಭಾಗ್ಯಲಕ್ಷ್ಮೀ ಬಾಂಡ್, ಸರಕಾರಿ ಸ್ಥಳದ ಅತೀಕ್ರಮಣ, ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು ಸೇರಿದಂತೆ ಯಾವುದೇ ಜ್ವಲಂತ ಸಮಸ್ಯೆಗಳ ಪಟ್ಟಿಯನ್ನು ಸಿದ್ಧಗೊಳಿಸಿಕೊಂಡು ಪರಿಹರಿಸಿಕೊಳ್ಳಲು ಯತ್ನಿಸಬೇಕು ಎಂದರು.

Contact Your\'s Advertisement; 9902492681

ಗ್ರಾಮವಾಸ್ತವ್ಯದಿನದಂದು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ಬಂದಿರುತ್ತಾರೆ ಇತಂಹ ಸಮಯದಲ್ಲಿ ಒಂದು ಗ್ರಾಮದ ಸಮಸ್ಯೆ ಬಗೆಹರೆದರೆ ಸಾಲದು ಇಡೀ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸದವಕಾಶವನ್ನು ಬಳಸಿಕೊಳ್ಳಬೇಕು. ಸಚಿವರು ಬಂದ ಹೋದ ಮೇಲೆ ಸ್ಮಶಾನದ ಕೊರತೆ ಸೇರಿದಂತೆ ಕಂದಾಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದೆ ಎಂಬುದು ತಿಳಿದು ಬಂದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ.

ಉಸ್ತಾದ ಮಂಜಿಲ್‌ನಲ್ಲಿ ಭಾವೈಕ್ಯತೆ ಮೆರೆದ ಹೋಳಿ

ಅದೇ ದಿನ ರಾಯಚೂರಿನ ಆರ್‌ಕೆಎಬಿ ಸಂಸ್ಥೆಯವರು ವಿಕಲಚೇತನರಿಗಾಗಿ ಕೃತಕ ಕೈ, ಕಾಲು ಜೋಡಿಸುವ ಶಿಬಿರವನ್ನು ಇಟ್ಟುಕೊಂಡಿದ್ದು, ಅರ್ಹ ಫಲಾನುಭವಿಗಳು ಮಾ. ೧೦ ರೊಳಗೆ ಆಯಾ ಗ್ರಾಪಂನ ಪಿಡಿಒ ಹತ್ತಿರ ಹೆಸರು ನೋಂದಾಯಿಸಿಕೊಳ್ಳಬೇಕು. ಮಾನಸಿಕ ಅಸ್ವಸ್ಥರು ಇದ್ದರೆ ಅವರನ್ನು ಕರೆದುಕೊಂಡು ಬನ್ನಿ ಅಲ್ಲೇ ತಜ್ಞರು ಹಾಜರಿರುತ್ತಾರೆ. ಅವರನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಿದರೆ ಮಾಸಿಕ ೨ ಸಾವಿರ ರೂ. ಬರುತ್ತದೆ ಎಂದರು.

ತಾಲೂಕಿನ ಬಹುತೇಕ ಶಾಲೆಗಳು ಸರಕಾರದ ಹೆಸರಿನಲ್ಲಿ ನೋಂದಣಿಯಾಗದೆ ಮಾಲೀಕರ ಹೆಸರಲ್ಲಿವೆ. ಅಂತಹ ಸರಕಾರಿ ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಿಟ್ಟುಕೊಂಡು ಅಂದು ಪರಿಹರಿಸಿಕೊಳ್ಳಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಹಶೀಲ್ದಾರ್, ಇಒ ಅವರೊಂದಿಗೆ ಚರ್ಚಿಸಿ ವರದಿ ಸಿದ್ಧಪಡಿಸಿಕೊಳ್ಳಬೇಕು. ಬೆಳೆ ಹಾನಿ, ಮನೆ ಹಾನಿ ಕುರಿತು ಅರ್ಜಿ ಸಿದ್ಧಪಡಿಸಿಕೊಳ್ಳಬೇಕು. ಬ್ಲಾಕ್ ಆಗಿರುವ ಮನೆಗಳ ಮಾಹಿತಿ ಕೊಡಲು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆಯಾಗಿದ್ದರೆ ಈ ಕುರಿತು ಕ್ರಿಯಾ ಯೋಜನೆ ತಯಾರಿಸಿಕೊಳ್ಳಬೇಕು ಎಂಬುದಾಗಿ ಪಿಡಿಒಗಳಿಗೆ ಸೂಚಿಸಿದರು.

ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಗಿರು ಈ ಕುರಿತು ಏ.೧೦ ರೋಳಗೆ ಸಮಸ್ಯಗಳ ಪಟ್ಟಿಮಾಡಿ ಅಂದು ಮತ್ತೋಂದು ಸಭೆ ನಡೆಸಿ ಅಂತಿಮವಾಗಿ ಸಚಿರ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ರೂಪುರೇಶಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ರೂಪುರೇಷೆ ತಯಾರಿಸೋಣ ಹೇಳಿದರು.

ಈ ಸಮಯದಲ್ಲಿ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಶೀಲ್ದಾರ ವಿನಾಯಕ ಪಾಟೀಲ, ಇಓ ಅಮರೇಶ, ಗ್ರೇಡ್ ೨ ತಹಶಿಲ್ದಾರ ಸುಫಿಯಾ ಸುಲ್ತಾನ,ತಾ.ಪಂ,ವ್ಯವಸ್ಥಾಪಕ ಕುಮುಲಯ್ಯ. ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಪೌರಾಯುಕ್ತ ಜೀವನಕುಮಾರ, ಕೇತ್ರ ಶಿಕ್ಷಣಾಧಿಕಾರಿ ಮಹದೇವರೆಡ್ಡಿ, ಗ್ರಾಮೀಣ ನಿರು ಸರಬರಾಜು ಎಇಇ ಹಣಮಂತಪ್ಪ ಅಂಬ್ಲಿ,ಅಕ್ಷರದಾಸೋಹ ಎಡಿ ಮೌನೇಶ ಕಂಬಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಲೆಕ್ಕಿಗರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಬಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here