ಸುರಪುರ: ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಸಿಡಿ ಪ್ರಕರಣ ರಾಜ್ಯದ ರಾಜಕಾರಣಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಶಾಸಕ ಹಾಗು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಬೇಸರ ವ್ಯಕ್ತಪಡಿಸಿದರು.
ಈ ಕುರಿತು ನಗರದ ತಾಲೂಕು ಪಂಚಾಯತಿಯ ಶಾಸಕರ ಕೊಠಡಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು,ಸಿಡಿ ಪ್ರಕರಣದಲ್ಲಿ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ.ಅಲ್ಲದೆ ಡಿ.ಕೆ.ಶಿವಕುಮಾರ ಅಣ್ಣಾ ತಮ್ಮ ಹೆಸರನ್ನು ಹೇಳುವ ಮುನ್ನವೆ ತಾವೇ ಹೇಳಿಕೊಂಡಿದ್ದಾರೆ.ಆದರೆ ಸಿ.ಡಿ ನಕಲಿ ಎಂಬುದು ಎಲ್ಲರಿಗೂ ತಿಳಿದಿದೆ,ಅಲ್ಲದೆ ರಮೇಶ ಜಾರಕೊಹೊಳೆ ಇದರಲ್ಲಿ ನಿರಪರಾಧಿಯಾಗಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕ್ಷೇತ್ರದ ಜ್ವಲಂತ ಸಮಸ್ಯಗಳ ಪಟ್ಟಿಮಾಡಲು ಶಾಸಕ ನರಸಿಂಹ ನಾಯಕ ಸೂಚನೆ
ರಾಜ್ಯದಲ್ಲಿ ನಡೆಯುತ್ತಿರುವ ಬೆಳಗಾವಿ ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ದಾಖಲೆಯ ಮತಗಳನ್ನು ಪಡೆದು ಜಯಭೇರಿ ಬಾರಿಸಲಿದ್ದಾರೆ ಮಸ್ಕಿ, ಬಸವಕಲ್ಯಾಣದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅಲ್ಲಿನ ಬೆಳವಣಿಗೆ ಗಮನಿಸಿದರೆ ಬಿಜೆಪಿ ಗೆಲುವಿನ ಪತಾಕೆ ಹಾರಿಸುವುದರಲ್ಲಿ ಸಂಶಯವಿಲ್ಲ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯೂ ೪ಲಕ್ಷಕ್ಕೂ ಅಧಿಕ ಮತದ ವಿಜಯ ದಾಖಲಿಸಿದ್ದಾರೆ.ಬೆಳಗಾವಿಯಲ್ಲಿ ಸತೀಶ ಜಾರಕಿಹೊಳೆಯನ್ನು ಚುನಾವಣೆಗೆ ನಿಲ್ಲಿಸಿ ಕಾಂಗ್ರೆಸ್‌ನವರು ಅವರ ರಾಜಕೀಯ ಭವಿಷ್ಯ ನಿರ್ನಾಮ ಮಾಡಲು ನಿಂತಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಕಾಂಗ್ರೆಸ್ಸಿನವರ ಯಾವುದೇ ಗಿಮಿಕ್ ನಡೆಯುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲು ಅನುಭವಿಸಲಿದೆ. ಮತದಾರರಿಗೆ ಅಭಿವೃದ್ಧಿ ಕಾರ್ಯ ಯಾರು ಮಾಡುತ್ತಾರೆ ಎನ್ನುವುದು ತಿಳಿದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುರೇಶ ಅಂಗಡಿಯವರು ಹಾಗೂ ರಾಜ್ಯ ಸರ್ಕಾರ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಇದು ಬಿಜೆಪಿ ಅಭ್ಯರ್ಥಿಗೆ ವರವಾಗಲಿದೆ ಎಂದರು.
ಉಸ್ತಾದ ಮಂಜಿಲ್‌ನಲ್ಲಿ ಭಾವೈಕ್ಯತೆ ಮೆರೆದ ಹೋಳಿ
ಇಬ್ಬರು ಸ್ನೇಹಿತರು ದುಷ್ಮನ್ ಆದರೆ ಏನಾಗುತ್ತದೆ ಎಂಬುದಕ್ಕೆ ರಮೇಶ ಜಾರಕಿಹೊಳಿಯವರ ಪ್ರಕರಣವೇ ನಿದರ್ಶನವಾಗಿದೆ. ರಮೇಶಣ್ಣನವರನ್ನು ಸಿಲುಕಿಸಲು ಯಾರ‍್ಯಾರು ಷಡ್ಯಂತ್ರ ಮಾಡಿದ್ದಾರೆ. ಯಾರ‍್ಯಾರು ಇದರ ಹಿಂದೆ ಇದಾರೆ ಎಂಬುದು ತನಿಖೆಯಿಂದಲೇ ಸತ್ಯ ತಿಳಿಯಲಿದೆ. ಕಾನೂನಾತ್ಮಕ ತನಿಖೆ ನಡೆದಿದ್ದು, ಇದಕ್ಕೆ ಚ್ಯುತಿ ಆಗದಂತೆ ಮಾತನಾಡಬೇಕಿದೆ. ಜನತೆಗೆ ಸೀಡಿ ಹಿಂದೆ ಯಾರಿದ್ದಾರೆ ಎಂಬುದು ತಿಳಿದಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಹೆಚ್.ಸಿ.ಪಾಟೀಲ್ ಇದ್ದರು.