ಸುರಪುರ: ನಾಡಿನ ಖ್ಯಾತ ಶ್ರೀಗಳಲ್ಲಿ ಒಬ್ಬರಾದ ಸಿದ್ದಗಂಗಾ ಪೂಜ್ಯ ಶಿವಕುಮಾರ ಸ್ವಾಮೀಜಿಯವರ ಜನುಮ ದಿನದ ಅಂಗವಾಗಿ ಶರಣ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಕೇರಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು,ಏಪ್ರಿಲ್ ೧ ರಂದು ಸಾಯಂಕಾಲ ೬ ಗಂಟೆಗೆ ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ಬಸ್ ಡೀಪೊ ಎದುರು ಶರಣ ಸೇವಾ ಸಂಸ್ಥೆಯ ಕಚೇರಿ ಆವರಣದಲ್ಲಿ ಸಿದ್ದಗಂಗಾ ಮಠದ ಪೂಜ್ಯ ಶಿವಕುಮಾರ ಸ್ವಾಮೀಜಿಯವರ ಜನುಮ ದಿನದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು.ಮುಖ್ಯವಾಗಿ ಶರಣ ಗ್ರಂಥಾಲಯ ಕುಡಿಯುವ ನೀರಿನ ಅರವಂಟಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ದೇವರಗೋನಾಲ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ
ಇದೇ ಸಂದರ್ಭದಲ್ಲಿ ಸಗರ ನಾಡು ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ,ಈ ಕಾರ್ಯಕ್ರಮದಲ್ಲಿ ದೇವಾಪುರ ಶ್ರೀಗಳು ಲಕ್ಷ್ಮೀಪುರ ಶ್ರೀಗಿರಿ ಮಠದ ಶ್ರೀಗಳು ರುಕ್ಮಾಪುರ ಹಿರೇಮಠದ ಶ್ರೀಗಳು ಹಾಗು ವೆಂಕಟಾಪುರ ಶ್ರೀಗಳು ಮತ್ತು ಶಾಸಕರಾದ ರಾಜುಗೌಡ್ರು ರಾಜಾ ಹನುಮಪ್ಪ ನಾಯಕ (ತಾತಾ) ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಶಾಂತಗೌಡ ಚನ್ನಪಟ್ಟಣ ವೇಣುಮಾಧವ ನಾಯಕ ಸುರೇಶ ಸಜ್ಜನ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದು ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ,ಆದ್ದರಿಂದ ಶಿವಕುಮಾರ ಸ್ವಾಮೀಜಿಗಳ ಸಮಸ್ತ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಮುಖಂಡ ಆನಂದ ಮಡ್ಡಿ ಇತರರಿದ್ದರು.